ಮಿತಿಮೀರಿದ ವಯಸ್ಸಿನಲ್ಲೂ ಐಶ್ವರ್ಯ ರೈ ಬೇಕೆಂದು ಕಾಯಿತ್ತಿರುವ ಸಲ್ಮಾನ್ ಖಾನ್;

 | 
Uu

ಬಾಲಿವುಡ್ ಇಂಡಸ್ಟ್ರಿಯಲ್ಲಿ ಜನಪ್ರಿಯವಾದ ಪ್ರೇಮಕಥೆ ಇದ್ದರೆ ಅದು ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಅವರದ್ದು. ಇಬ್ಬರೂ ದೂರವಾಗಿ 22 ವರ್ಷಗಳ ಕಳೆದಿದೆ. ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಅವರ ಪ್ರೀತಿ ವಿಚಾರದ ಚರ್ಚೆ ಇಂದಿಗೂ ಮುಂದುವರೆದಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವಸುಂದರಿ ಹಾಗೂ ನಟಿ ಐಶ್ವರ್ಯಾ ರೈ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ರು. ಬಳಿಕ 2002 ರಲ್ಲಿ ಬೇರ್ಪಟ್ಟರು. ಜಗಳ, ಗಲಾಟೆ, ಗೊಂದಲದಲ್ಲೇ ಇಬ್ಬರ ಸಂಬಂಧ ಮುರಿದುಬಿತ್ತು ಎಂದು ವರದಿ ಆಗಿದೆ. ಹೌದು ಸಲ್ಮಾನ್ ಖಾನ್ ಗೆ ಮೂಗಿನ ಮೇಲೆ ಸಿಟ್ಟಿರುತ್ತದೆ. ಇದರಿಂದ ಬೇಸೆತ್ತ ಐಶ್ವರ್ಯ ರೈ ದೂರವಾಗಿದ್ದಾರೆ.

1999 ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಎಂಬ ರೋಮ್ಯಾಂಟಿಕ್ ಚಿತ್ರದ ವೇಳೆ ಸಲ್ಲುಗೆ ಐಶ್ ಮೇಲೆ ಲವ್ ಆಗಿತ್ತಂತೆ. ಈ ಸಿನಿಮಾ ಬಳಿಕ ಇಬ್ಬರು ಕೆಲ ಕಾಲ ಡೇಟಿಂಗ್ ಮಾಡಿದ್ರು. ಆದ್ರೆ ನಂತರ ಅವರು ಬೇರ್ಪಟ್ಟರು.ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ದೂರ ದೂರ ಆಗಿ ಸುಮಾರು 22 ವರ್ಷ ಕಳೆದಿವೆ. ಸಲ್ಮಾನ್ ಜೊತೆ ಬ್ರೇಕಪ್ ಮಾಡಿಕೊಂಡ ಕೆಲ ವರ್ಷಗಳ ಬಳಿಕ ನಟಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗುವ ಮೂಲಕ ಬಿಗ್ ಬಿ ಮನೆಯ ಸೊಸೆಯಾದ್ರು.

 ಈ ದಂಪತಿಗೆ ಇದೀಗ ಆರಾಧ್ಯ ಎಂಬ ಮಗಳಿದ್ದಾಳೆ. ಆದ್ರೆ ನಟ ಸಲ್ಮಾನ್ ಖಾನ್ ಮಾತ್ರ ಇನ್ನೂ ಸಿಂಗಲ್ ಆಗಿದ್ದಾರೆ.ಐಶ್ವರ್ಯಾ ಜೊತೆಗಿನ ಬ್ರೇಕಪ್ ನಂತರ ಸಲ್ಮಾನ್ ಖಾನ್ ಯಾರನ್ನೂ ಪ್ರೀತಿಸಲಿಲ್ಲ. ಅಷ್ಟೇ ಅಲ್ಲದೇ ಮದುವೆಯನ್ನೇ ಆಗಬಾರದು ಎಂಬ ನಿರ್ಧಾರ ಕೂಡ ಮಾಡಿಬಿಟ್ಟಿದ್ದಾರೆ. 

58ರ ಹರೆಯದಲ್ಲೂ ಅವರು ತಮ್ಮ ನಿರ್ಧಾರ ಬದಲಿಸಿಕೊಳ್ಳದೆ ದೃಢವಾಗಿದ್ದಾರೆ. ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಆಗಾಗ ಹೇಳಿ ತಮ್ಮ ಲವ್ ನಿಜವಾದದ್ದು ಎಂದು ಸಾಬೀತು ಪಡಿಸುತ್ತಲೇ ಇರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.