ಇವತ್ತಿಗೂ ಐಶ್ವರ್ಯ ರೈ ಬೇಕು ಎನ್ನುತ್ತಿರುವ ಸಲ್ಮಾನ್ ಖಾನ್;

 | 
Uu

ಬಾಲಿವುಡ್​ ಸ್ಟಾರ್ಸ್​ ಐಶ್ವರ್ಯ ರೈ ಬಚ್ಚನ್​ ಮತ್ತು ಸಲ್ಮಾನ್​ ಖಾನ್​ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ.  ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 

 90ರ ದಶಕದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 

2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ.  ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್​ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.

ಸಲ್ಮಾನ್ ಖಾನ್ ಇಂದಿಗೂ  ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಆಗಿ ಉಳಿದಿದ್ದಾರೆ. ಅಷ್ಟಕ್ಕೂಐಶ್ವರ್ಯ ಮಾತ್ರವಲ್ಲದೇ ಕತ್ರೀನಾ ಕೈಫ್​ ಅವರೊಂದಿಗೂ ಸಲ್ಮಾನ್​  ರೋಮ್ಯಾಂಟಿಕ್ ಇತಿಹಾಸವನ್ನು ಹೊಂದಿದ್ದಾರೆ.  ಈಗ, ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋ ಒಂದು  ಮತ್ತೆ ವೈರಲ್ ಆಗಿದೆ, ಇದರಲ್ಲಿ ಸಲ್ಮಾನ್ ತಮ್ಮ ಮಾಜಿ ಗೆಳತಿಯರಾದ ಐಶ್ವರ್ಯಾ ಮತ್ತು ಕತ್ರಿನಾ ನಡುವೆ ಆಯ್ಕೆ ಮಾಡುವ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದೀಗ ರೆಡಿಟ್ ಅಲ್ಲಿನ ಹಳೆಯ ವೀಡಿಯೋ ಶೇರ್ ಆಗಿದ್ದು ಕಾಫಿ ವಿತ್ ಕರಣ್'ದ ವಿಡಿಯೋ ಇದಾಗಿದೆ.  ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಅಥವಾ ಕತ್ರಿನಾ ಕೈಫ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಕರಣ್ ಸಲ್ಮಾನ್ ಅವರನ್ನು ಕೇಳಿದ್ದರು. ಐಶ್ವರ್ಯಾ ಮತ್ತು ಕತ್ರಿನಾ ಅವರಲ್ಲಿ ಯಾರು ಹೆಚ್ಚು ಸುಂದರಿ ಹಾಗೂ ಅದ್ಭುತ ಎಂದು ಕರಣ್ ಕೇಳಿದಾಗ, ಸಲ್ಮಾನ್​ ಮೊದಲಿಗೆ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಹೇಳುತ್ತಲೇ ಮಾತು ಬದಲಿಸಿ  ಕತ್ರಿನಾ ಕೈಫ್ ಎಂದರು. 

ಸದ್ಯ ಕತ್ರಿನಾ ಅವರು ಸಿಂಗಲ್​ ಆಗಿದ್ದು, ಅವರ ಹೆಸರಿನ ನಡುವೆ ಯಾರ ಸರ್​ನೇಮ್​ ಸೇರುತ್ತದೆ ಎಂದು ನೋಡಬೇಕಿದೆ ಎಂದರು. ಆದರೆ ಈಗ ಕತ್ರೀನಾ ವಿಕ್ಕಿ ಕೌಶಲ್​ ಅವರನ್ನು ಮದುವೆಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.