ಬಾಲಿವುಡ್ ನ ಈ ಸುಂದರಿಗಾಗಿ ಇದುವರೆಗೂ ಮದುವೆಯಾಗದೆ ಕೂತಿರುವ ಸಲ್ಮಾನ್ ಖಾನ್, ಈಕೆ ಭೂಲೋಕದ ದೇವ ಕನ್ನಿಕೆ
Jul 1, 2025, 11:32 IST
|

ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಈವರೆಗೆ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ. ಈಗ ಈ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಆಗುತ್ತದೆ ಎನ್ನುವ ಭಯಕ್ಕೆ ಸಲ್ಮಾನ್ ಖಾನ್ ಮದುವೆ ಆಗಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ನೆಟ್ಫ್ಲಿಕ್ಸ್ ಈಗ ‘ದಿ ಗ್ರೇಟ್ ಇಂಡಿಯನ್ ಕಪಿಲ್’ ಶೋನ ಮೂರನೇ ಸೀಸನ್ ಆರಂಭಿಸಿದೆ. ಈ ಶೋಗೆ ಸಲ್ಮಾನ್ ಖಾನ್ ಅವರು ತಮ್ಮ ಸೋದರ ಅಳಿಯಂದಿರಾದ ಅರ್ಹಾನ್, ನಿರ್ವಣ್ ಮತ್ತು ಅಯಾನ್ ಜೊತೆ ಆಗಮಿಸಿದ್ದಾರೆ. ಈ ಮೂಲಕ ಹೊಸ ಸೀಸನ್ನ ಮೊದಲ ಎಪಿಸೋಡ್ ಅದ್ದೂರಿಯಾಗಿ ಆರಂಭ ಆಗುತ್ತಿದೆ. ಸದ್ಯ ಈ ಎಪಿಸೋಡ್ ಎಲ್ಲರ ಗಮನ ಸೆಳೆಯುತ್ತಿದೆ.
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಮೊದಲ ಅತಿಥಿಯಾಗಿ ನಟ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಈ ವೇಳೆ ತಾವು ಎದುರಿಸುತ್ತಿರುವ ಎಲ್ಲಾ ಕಾಯಿಲೆಗಳು ಮತ್ತು ಅವುಗಳ ಜೊತೆಗಿನ ಹೋರಾಟಗಳ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾನು ಗಂಭೀರ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದೇನೆ. ಟ್ರೈಜಿಮಿನಲ್ ನರಶೂಲೆ ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ನಟ ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.
ಅಲ್ಲದೇ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ, ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್ ಸಮಸ್ಯೆ ಕೂಡ ಇದೆ, ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ ನಟ ಸಲ್ಮಾನ್ ಖಾನ್.ವರದಿಗಳ ಪ್ರಕಾರ ಸಲ್ಮಾನ್ ಖಾನ್ ಅವರಿಗೆ 2007ರ ಸುಮಾರಿಗೆ ಟ್ರೈಜಿಮಿನಲ್ ನರಶೂಲೆಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಹಲವಾರು ವರ್ಷಗಳ ಕಾಲ ತೀವ್ರ ನೋವನ್ನು ಸನುಭವಿಸಿದ ಅವರು 2011ರಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದರು. ಟ್ರೈಜಿಮಿನಲ್ ನರಶೂಲೆ ಎಂದರೆ ಮುಖದಲ್ಲಿ ತೀವ್ರವಾದ, ತೀಕ್ಷ್ಣವಾದ, ವಿದ್ಯುತ್ ಆಘಾತದಂತಹ ನೋವನ್ನು ಉಂಟುಮಾಡುವ ದೀರ್ಘಕಾಲದ ನೋವಿನ ಅಸ್ವಸ್ಥತೆ ಎಂದು ಹೇಳಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.