ನಟಿ ಸಮಂತಾ ಎರಡನೇ ಮದುವೆ ಫಿಕ್ಸ್ ? ಹುಡುಗ ಯಾ.ರು ಗೊ‌ ತ್ತಾ

 | 
Hs

ಬಹುಭಾಷಾ ನಟಿ ಸಮಂತಾ ಸದ್ಯ‌ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ನಿರ್ಮಾಪಕಿಯಾಗಿ ಮೊದಲ ಹೆಜ್ಜೆಯಿಡಲು ಸಮಂತಾ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿದ್ದರೂ ಸಮಂತಾ ಖುಷ್‌ ಖುಷ್‌ ಆಗಿ ಪ್ರವಾಸ ಮಾಡುತ್ತಾ, ಟಿವಿ ಶೋಗಳಲ್ಲಿ ಭಾಗಿಯಾಗುತ್ತಾ ಸಮಯ ಕಳೆಯುತ್ತಿದ್ದಾರೆ. 

ಸದ್ಯ ಅವರು ಸಿನಿಮಾದಿಂದ ಕೆಲ ಸಮಯ ಬ್ರೇಕ್‌ ಪಡೆದುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಮಂತಾ ಸಖತ್‌ ಆ್ಯಕ್ಟಿವ್‌ ಆಗಿರುತ್ತಾರೆ. ಭಾನುವಾರ ತನ್ನ ಇನ್ಸ್ಟಾಗ್ರಾಮ್‌ ನಲ್ಲಿ ಅಭಿಮಾನಿಗಳಿಗಾಗಿ ಕೆಲ ಸಮಯವನ್ನು ಮೀಸಲಿಟ್ಟಿದ್ದಾರೆ. ಇಲ್ಲಿ ಫ್ಯಾನ್ಸ್‌ ಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಒಬ್ಬ‌ ಅಭಿಮಾನಿ ಸಮಂತಾ ಅವರ ಬಳಿ ಅವರ ಮತ್ತೆ  
ಮದುವೆ ಆಗುವ ಬಗ್ಗೆ ಪ್ರಶ್ನೆ ಕೇಳಿದ್ದು, ಇದಕ್ಕೆ ಸಮಂತಾ ತಮಾಷೆಯ ರೀತಿಯಲ್ಲೇ ಉತ್ತರವನ್ನು ನೀಡಿದ್ದಾರೆ. ನೀವು ಮತ್ತೆ ಮದುವೆಯಾಗುವ ಬಗ್ಗೆ ಯೋಚಿಸುತ್ತೀರಾ? ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಸಮಂತಾ ಅವರು ತಮಾಷೆಯ ರೀತಿಯಲ್ಲಿ ಅಂಕಿಅಂಶಗಳ ಪ್ರಕಾರ, ಇದು ಕೆಟ್ಟ ಹೂಡಿಕೆಯಾಗಿದೆ ಎನ್ನುವ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ಕೆಲ ಅಂಕಿಅಂಶಗಳ ಉದಾಹರಣೆಯನ್ನು ನೀಡಿದ್ದಾರೆ.
ಪರಸ್ಪರ ಪ್ರೀತಿಸಿ, ಡೇಟ್‌ ಮಾಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು 2017 ರಲ್ಲಿ ನಾಗಚೈತನ್ಯ – ಸಮಂತಾ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದರು. 2021 ರಲ್ಲಿ ತಾವು  ಪ್ರತ್ಯೇಕವಾಗುವುದಾಗಿ ಇಬ್ಬರು ಘೋಷಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.