ಸ್ಯಾಂಡಲ್ ವುಡ್ ನಟಿಯ ದಾಂಪತ್ಯದಲ್ಲಿ‌ ಬಿರುಕು, ಮುದ್ದಾದ ಪತ್ನಿಯ ಕೆಟ್ಟ ಕೆಲಸಕ್ಕೆ ದೂರವಾದ ಗಂಡ

 | 
Js
ಆಕೆ ಹೆಸರಾಂತ ನಟಿ, ಕಲಾವಿದೆ. ನೋಡಲಂತೂ ಸುಂದರಿ. ಆದರೆ ವೈವಾಹಿಕ ಜೀವನದಲ್ಲಿ ಮಾತ್ರ ಸೋತು ಸುಣ್ಣವಾಗಿ ಡೈವೋರ್ಸ್ ಮೊರೆ ಹೋಗಿದ್ದಾಳೆ. ಹೌದು ಪ್ರೇಮಿಗಳಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತೆ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆರಂಭದಲ್ಲಿಯೂ ಚಿನ್ನ, ರನ್ನ, ಬೆಳ್ಳಿ, ಎಂದೆಲ್ಲಾ ಹೊಗಳಿಕೊಳ್ಳುವ, ಮನೆಯಲ್ಲಿ ಹೀಗೆ ಎದುರಿಗೆ ಹೊಗಳದಿದ್ದರೂ,  ಜನರಿಗೆ ಕಾಣಿಸಲಿ ಎಂಬ ಕಾರಣಕ್ಕೆ ನನ್ನ ಗಂಡ ಹೀಗೆ, ನನ್ನ ಪತ್ನಿ ಹೀಗೆ... ಎಂದೆಲ್ಲಾ ಹಾಡಿ ಹೊಗಳಿ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವ ದಂಪತಿ ಕೆಲವೇ ವರ್ಷಗಳಲ್ಲಿ ಗಪ್​ಚುಪ್​ ಆಗಿ ಬೇರೆಯಾಗಿರುವ ಸಾಕಷ್ಟು ಉದಾಹರಣೆಗಳಿವೆ. 
ಆದರೆ ಸೆಲೆಬ್ರಿಟಿಗಳಾದ ಕಾರಣಕ್ಕೆ ನಟ-ನಟಿಯರ ವಿಷಯಗಳು ಬೇಗನೇ ಸದ್ದು ಮಾಡುತ್ತವೆ. ಇದಾಗಲೇ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನವನ್ನು ಕೊನೆಗಾಣಿಸಿಕೊಂಡಿರುವ ನಡುವೆಯೇ, ಅವರ ಸಾಲಿಗೆ ಮತ್ತೋರ್ವ ಖ್ಯಾತ ನಟಿ , ಮಾಲಿವುಡ್​ನ ಅಪರ್ಣಾ ವಿನೋದ್​ ಸೇರ್ಪಡೆಯಾಗಿದ್ದಾರೆ.ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಅಪರ್ಣಾ ವಿನೋದ್ ಅವರು ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಪತಿಯಿಂದ ದೂರವಾಗಿರೋದಾಗಿ ಘೋಷಿಸಿದ್ದಾರೆ. ಡಿವೋರ್ಸ್ ನೀಡಿರೋದಾಗಿ ನಟಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನನ್ನ ಜೀವನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸಾಕಷ್ಟು ಯೋಚಿಸಿಕೊಂಡು ನಾನು ನನ್ನ ಪತಿಯಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಇದು ಸುಲಭವಾದ ಆಯ್ಕೆಯಾಗಿರಲಿಲ್ಲ. ಆದರೆ ಇದು ನನಗೆ ಸರಿಯಾದ ಆಯ್ಕೆಯಾಗಿತ್ತು. ನನ್ನ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾಗಿತ್ತು. ನನ್ನ ಮದುವೆಯು ಭಾವನಾತ್ಮಕವಾಗಿ ಕಷ್ಟಕರ ಹಂತವಾಗಿತ್ತು. ಜೀವನದಲ್ಲಿ ಈ ಅಧ್ಯಾಯವನ್ನು ಮುಚ್ಚಿ ಮುಂದೆ ಹೋಗಲು ನಿರ್ಧರಿಸಿದ್ದೇನೆ. ಈ ಸಮಯದಲ್ಲಿ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಙಳಾಗಿದ್ದೇನೆ. ಮುಂದೆ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸ ಹಾಗೂ ನಂಬಿಕೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೂ ರಿನಿಲ್ ರಾಜ್ ಅವರನ್ನು 2022ರಲ್ಲಿ ನಟಿ ಮದುವೆಯಾದರು. ಕೆಲ ಮನಸ್ತಾಪಗಳಿಂದ ವೈವಾಹಿಕ ಜೀವನಕ್ಕೆ ಅಪರ್ಣಾ ಅಂತ್ಯ ಹಾಡಿದ್ದಾರೆ. 2015ರಲ್ಲಿ ತೆರೆಕಂಡ ‘ನನ್ನ ನಿನ್ನೊಡು ಕೂಡೆಯುಂಡು’ ಮೂಲಕ ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ನಂತರ ದಳಪತಿ ವಿಜಯ್ ಮತ್ತು ಕೀರ್ತಿ ಸುರೇಶ್ ಜೊತೆ ಭೈರವ ಸಿನಿಮಾದಲ್ಲಿ ಅಪರ್ಣಾ ನಟಿಸಿದ್ದರು.ಹೀಗೆ ಸ್ಟಾರ್​  ನಟಿಯಾದರು ಅಪರ್ಣಾ. 
ಚಿತ್ರರಂಗದ ಉನ್ನತಿಯಲ್ಲಿ ಇರುವಾಗಲೇ ರಿನಿಲ್ ರಾಜ್​ರನ್ನು ಮದುವೆಯಾದರು. ಈಗ ಪತಿಯ ಜೊತೆಗಿರುವ ಎಲ್ಲಾ ಫೋಟೋಗಳನ್ನು ಹಾಗೂ ನಾನು ಹುಟ್ಟಿದ್ದೇ ನಿನಗಾಗಿ ಎಂದು ಬರೆದುಕೊಂಡಿರುವ ಪೋಸ್ಟ್​ಗಳನ್ನೂ ಡಿಲೀಟ್​ ಮಾಡಿದ್ದಾರೆ. ಅಂದಹಾಗೆ, ಎರ್ನಾಕುಲಂ ಮೂಲದ ಅಪರ್ನಾ ವಿನೋದ್ ಮನೋವಿಜ್ಞಾನದಲ್ಲಿ ಪದವಿ ಪಡೆದು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.