ಕಾರ್ತಿಕ್ ಮುಂದೆ ಸೋಲು ಒಪ್ಪಿಕೊಂಡು ಮೊದಲ ಬಾರಿ ಲೈವ್ ಬಂದ ಸಂಗೀತ ಶೃಂಗೇರಿ

 | 
J

ಬಿಗ್ ಬಾಸ್  ಸೀಸನ್ 10 ಮುಗಿದಿದೆ. ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ ನಟಿ ಸಂಗೀತಾ ಶೃಂಗೇರಿ ಗೆದ್ದಿಲ್ಲ ಎಂದು ಚಿಕ್ಕಮಗಳೂರಿನ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಎಲ್ಲೆಡೆ ಈ ಬಾರಿ ಮಹಿಳಾ ಅಭ್ಯರ್ಥಿ ಗೆಲ್ತಾರೆ. ಅದು ಸಂಗೀತಾ ಗೆಲ್ತಾರೆ ಎಂಬ ನಿರೀಕ್ಷೆ ಇತ್ತು ಆದ್ರೆ ಅದು ಸುಳ್ಳಾಗಿದೆ. ಹೆಚ್ಚು ಮತ ಪಡೆದು ಕಾರ್ತಿಕ್ ಗೆದ್ದಿದ್ದಾರೆ.

ಹೌದು ಸಂಗೀತ ಬಿಗ್ ಬಾಸ್ 10ರ ಗೆಲ್ಲುವ ಸ್ಪರ್ಧಿ ಆಗಿದ್ರು. ಆದ್ರೆ 2ನೇ ರನ್ನರ್ ಅಪ್ ಆಗಿ ಹೊರ ಹೋಗಿದ್ದು ಮಾತ್ರ ಸಂಗೀತ ಅಭಿಮಾನಿಗಳಲ್ಲಿ ತೀರಾ ನೋವು ಉಂಟು ಮಾಡಿದೆ. ಒಂದು ಹುಡುಗಿಯಾಗಿ ಎಲ್ಲಾ ವಿಚಾರದಲ್ಲೂ ಗೆದ್ದು, ಸತತ 2 ಬಾರಿ ಮನೆಯ ಕ್ಯಾಪ್ಟನ್ ಆಗಿದ್ರು. ತನ್ನ ಎಲ್ಲಾ ಕಷ್ಟಗಳನ್ನು ಎದುರಿಸಿ ಗೆದ್ದ ಈ ಸಂಗೀತ ಶೃಂಗೇರಿಗೆ ಮೋಸ ಆಗಿದೆ ಎಂದು ಅಭಿಮಾನಿಗಳು ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಗೀತಾ ಮೇಲೆ ಎಲ್ಲಾ ಸ್ಪರ್ಧಿಗಳು ತಿರುಗಿ ಬಿದ್ದರು, ಏಕಾಂಗಿಯಾಗಿ ಆಟವಾಡಿ ಗೆದಿದ್ದ ಏಕೈಕ ಮಹಿಳಾ ಸ್ಪರ್ಧಿ ಆಗಿದ್ರು. ಟಾಸ್ಕ್, ಮನರಂಜನೆ, ವ್ಯಕ್ತಿತ್ವ, ಹೀಗೆ ಹಲವು ವಿಚಾರದಲ್ಲಿ ಸದಾ ಮುಂದೆ ಇದ್ರು. ಸಂಗೀತಾ ಗೆಲ್ಲುವ ಹುಡುಗಿ ಆಗಿದ್ದು, ಬಿಗ್ ಬಾಸ್ ಯಾಕೆ ಮಹಿಳಾ ಸ್ಪರ್ಧಿಗಳನ್ನು ಗೆಲ್ಲಿಸುವುದಿಲ್ಲ ಅನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಇದೀಗ ಸಂಗೀತಾ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಪತ್ರ ಬರೆದಿದ್ದಾರೆ. ನಿಮ್ಮ ಪ್ರೀತಿಗೆ ನಾನು ಆಭಾರಿ. ನನ್ನನ್ನು ಸಪೋರ್ಟ್ ಮಾಡಿದ್ದೀರಿ . ಪ್ರೀತಿ ನೀಡಿದ್ದೀರಿ ಕಪ್ ಗೆದ್ದಷ್ಟೆ ಸಂತೋಷವಾಗಿದೆ. ಟ್ರೋಫಿ ನನ್ನ ಪಾಲಾಗದಿರಬಹುದು ಆದರೆ ನಿಮ್ಮೆಲ್ಲರ ಪ್ರೀತಿಯ ಮಾತು ಸಪೋರ್ಟ್ ಸಿಕ್ಕಿದೆ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು ಎಂದು ಬರೆದು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.