ಪ್ರತಾಪ್ ಜೊತೆ ಸಿಹಿಸುದ್ದಿ ಕೊಟ್ಟ ಸಂಗೀತ ಶೃಂಗೇರಿ; ಕರುನಾಡಿಗೆ ಹಬ್ಬದೂಟ

 | 
H

ಸಿಂಗಲ್ ಸಿಂಹಿಣಿ ಎಂದೇ ಕರೆಸಿಕೊಂಡಿರುವ ಸಂಗೀತಾ ಶೃಂಗೇರಿ ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ನಟಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ವಿನಯ್‌ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ, ರಕ್ಷಕ್‌ ಬುಲೆಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಡ್ರೋನ್‌ ಪ್ರತಾಪ್‌ ಕೂಡ ಸಂಗೀತಾ ಶೃಂಗೇರಿಗೆ ಆತ್ಮೀಯವಾದ ಶುಭಾಶಯ ತಿಳಿಸಿದ್ದಾರೆ.ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಮನೆಯವರು ತುಂಬಾ ಸುಂದರವಾದ ಸ್ಥಳದಲ್ಲಿ ಕೇಕ್‌ ಕಟ್ಟಿಂಗ್‌ ಕಾರ್ಯಕ್ರಮ ಇಟ್ಟುಕೊಂಡು ಚಾರ್ಲಿ ಚೆಲುವೆಗೆ ಸರ್‌ಪ್ರೈಸ್‌ ನೀಡಿದ್ದಾರೆ.1996ರ ಮೇ 13ರಂದು ಜನಿಸಿದ ಇವರಿಗೆ ಈಗ 28 ವರ್ಷ. ಇವರ ಹುಟ್ಟುಹಬ್ಬಕ್ಕಾಗಿ ನೀಲಿ, ಬಿಳಿಬಣ್ಣದ ಥೀಮ್‌ನಲ್ಲಿ ಕೇಕ್‌ ತಯಾರಿಸಲಾಗಿತ್ತು.

 ಹುಟ್ಟುಹಬ್ಬದ ಪಾರ್ಟಿಯಲ್ಲಿ ತಂದೆ, ತಾಯಿ, ಅಣ್ಣ, ಅತ್ತಿಗೆ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.ಸಂಗೀತಾ ಶೃಂಗೇರಿ ಮನೆಗೆ ಹುಟ್ಟುಹಬ್ಬದಂದು ಆಗಮಿಸಿದ ಡ್ರೋನ್‌ ಪ್ರತಾಪ್‌ಗೆ ವಿಶೇಷವಾದ ಸ್ವಾಗತ ನೀಡಲಾಗಿದೆ. ಅಕ್ಕ ತಮ್ಮನಂತೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಇವರಿಬ್ಬರು ಈಗಲೂ ಇದೇ ರೀತಿಯ ಸಂಬಂಧ ಮುಂದುವರೆಸಿದ್ದಾರೆ.

 ಮನೆಗೆ ತಮ್ಮ ಬಂದ ಖುಷಿಯಲ್ಲಿ ಸಂಗೀತಾ ಶೃಂಗೇರಿ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕೈಗೆ ರಾಖಿಯನ್ನೂ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಮಯದಲ್ಲಿ ಸಹೋದರನ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವದ ಪಡೆಯುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದಾರೆ. ಇದೇ ರೀತಿ ಸಂಗೀತಾರ ಆಶೀರ್ವಾದ ಪಡೆಯುವ ಡ್ರೋನ್‌ ಪ್ರಯತ್ನವೂ ವ್ಯರ್ಥವಾಗಿದೆ. ಇಬ್ಬರ ಸ್ನೇಹ ಪ್ರೀತಿಯ ಮೇಲೆ ಯಾರ್ ಕೆಟ್ಟ ಕಣ್ಣು ಬೀಳದೆ ಇರಲಿ ಅಕ್ಕ ತಮ್ಮ ಸದಾ ನಗುತ್ತಾ ಇರಿ ಎಂದು ಫ್ಯಾನ್ಸ್‌ ಶುಭಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.