ಸೋಲು ಒಪ್ಪಿಕೊಳ್ಳಲಾಗದೆ ಬಿಗ್ ಬಾಸ್ ಕಾರಿನಲ್ಲಿ ಅಳುತ್ತಾ ಮನೆಗೆ ಹೋದ ಸಂಗೀತ ಶೃಂಗೇರಿ

 | 
ರ

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆ ಮುಗಿದಿದೆ. 10ನೇ ಸೀನಸ್​ನಲ್ಲಿ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದು ಬೀಗಿದ್ದಾರೆ. ಆದ್ರಿಲ್ಲಿ ಕಾರ್ತಿಕ್ ಗೆಲುವಿಗಿಂತ ಸಂಗೀತಾ ಶೃಂಗೇರಿ ಸೋಲು ಭಾರೀ ಚರ್ಚೆಯಾಗ್ತಿದೆ. ಫಿನಾಲೆಗೆ ಎರಡು ವಾರ ಇರುವಾಗ್ಲೇ ಫಿನಾಲೆ ಟಿಕೆಟ್ ಪಡೆದಿದ್ದ ಸಂಗೀತಾರೇ ಈ ಸಲ ಗೆಲ್ಲೋದು. ಮಹಿಳಾ ಸ್ಪರ್ಧಿಗೆ ಚಾನ್ಸ್ ಇದೆ ಅಂತಾನೇ ಹೇಳಲಾಗುತ್ತಿತ್ತು. ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳು ಕೂಡ ಸಂಗೀತಾನೇ ಗೆಲ್ಲೋದು ಅಂತಾ ಬಲವಾಗಿಯೇ ನಂಬಿದ್ದರು. 

ಆದರೆ, ಕೊನೇ ಕ್ಷಣಗಳಲ್ಲಿ ಸಂಗೀತಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ಸಂಗೀತಾ ಶೃಂಗೇರಿ ಸ್ಟ್ರಾಂಗ್ ಸ್ಪರ್ಧಿ ಎನ್ನೋದ್ರಲ್ಲಿ ಎರಡು ಮಾತಿಲ್ಲ. ಆರಂಭದಿಂದ ಕೊನೆವರೆಗೂ ಕೂಡ ಸದ್ದು ಮಾಡ್ತಾನೇ ಇದ್ರು. ಎಷ್ಟೇ ಕಿರುಚಾಟ, ಎಂಥದ್ದೇ ಸಂದರ್ಭದಲ್ಲೂ ಧ್ವನಿ ಏರಿಸಿ ಮಾತನಾಡಿದ್ರು. ಟಾಸ್ಕ್ ಅಂತಾ ಬಂದಾಗ ಎಲ್ಲರನ್ನೂ ಎದುರಾಕಿಕೊಂಡು ಗೆದ್ದು ತೋರಿಸ್ತಿದ್ರು.

ವಿನಯ್, ಕಾರ್ತಿಕ್​ಗೆ ಸರಿಸಮನಾಗಿ ಪೈಪೋಟಿ ಒಡ್ಡುತ್ತಿದ್ರು. ಅವ್ರ ಈ ಡೇರಿಂಗ್ ನೆಸ್ ನೋಡಿಯೇ ಫ್ಯಾನ್ಸ್ ಒಂದು ಬಿರುದು ಕೂಡ ಕೊಟ್ಟಿದ್ರು. ಅದುವೇ ಬಿಗ್ ಬಾಸ್ ಮನೆಯ ಸಿಂಹಿಣಿ ಅಂತಾ. ಹೌದು ಸಂಗೀತಾ ಅಭಿಮಾನಿಗಳು ಅವ್ರನ್ನ ಸಿಂಹಿಣಿ ಅಂತಾನೇ ಕರೀತಿದ್ರು. ಬಿಗ್​ಬಾಸ್ ಫಿನಾಲೆಯಲ್ಲಿ ಈ ಸಲ ಅವ್ರೇ ಗೆಲ್ಲೋದು ಎನ್ನಲಾಗ್ತಿತ್ತು. ಟಾಪ್ ತ್ರಿಗೆ ಬಂದಾಗ ಸಂಗೀತಾನೇ ವಿನ್ ಅಂತಾನೂ ಅನ್ಕೊಂಡಿದ್ರು. ಸಂಗೀತಾ ಅಂತೂ ನಾನೇ ಗೆಲ್ಲೋದು ಅಂತಾ 100 ಪರ್ಸೆಂಟ್ ಕಾನ್ಫಿಡೆನ್ಸ್ ನಲ್ಲೇ ಇದ್ರು. 

ಆದ್ರೆ ಟಾಪ್ ತ್ರಿ ಎವಿಕ್ಷನ್ ವೇಳೆ ಕಲರ್ ಕೇಜ್ ನಲ್ಲಿ ಮೂವರನ್ನ ನಿಲ್ಲಿಸಿ ರೆಡ್ ಲೈಟ್ ಅವ್ರ ಮೇಲೆ ಬಿದ್ದಾಗ ಎಲ್ಲರಿಗೂ ಶಾಕ್ ಆಗಿತ್ತು. ಹಾಗೇ ಫಿನಾಲೆ ಟಿಕೆಟ್ ಸಿಕ್ಕ ಮೇಲೆ ಅವ್ರ ಆಟಿಟ್ಯೂಡ್ ಜಾಸ್ತಿ ಆಗಿದೆ ಅಂತಾ ಸ್ಪರ್ಧಿಗಳೇ ಹೇಳ್ತಿದ್ರು. ಯಾರಾದ್ರೂ ಪ್ರಶ್ನೆ ಮಾಡಿದ್ರೆ ಏನು, ಹೌದು, ನಾನಿರೋದೇ ಹೀಗೇ ಅಂತಾ ಟಾಂಟ್ ಕೊಡ್ತಿದ್ರು. ಇದು ಕೂಡ ಅವ್ರ ಪಾಪ್ಯುಲಾರಿಟಿಯನ್ನ ಕಡಿಮೆ ಮಾಡ್ತು. ಆದ್ರೆ ಕೊನೆ ಕೊನೆಗೆ ಸಂಗೀತಾ ಸೋತ್ರು ಅನ್ನೋದಕ್ಕಿಂತ ಕಾರ್ತಿಕ್ ಗೆದ್ರು ಅಂತಾ ಹೇಳ್ಬೋದು. 

ಯಾಕಂದ್ರೆ ಕಾರ್ತಿಕ್ ಮೊದ್ಲಿಂದ ಒಂದೇ ಥರ ಇದ್ರು. ಲಾಸ್ಟ್ ಎರಡು ವಾರ ಡಲ್ ಅನ್ನಿಸಿದ್ರೂ ಕಾರ್ತಿಕ್ ಬ್ಯಾಕ್​ಗ್ರೌಂಡ್ ಜನರಿಗೆ ಪ್ರೀತಿ ಹೆಚ್ಚಿಸಿತ್ತು. ಅದ್ರಲ್ಲೂ ಅವ್ರ ತಂಗಿ ವಿಡಿಯೋ ಬಂದಾಗಂತೂ ವೀಕ್ಷಕರ ಕಣ್ಣಲ್ಲೂ ನೀರು ಬರುವಂತೆ ಮಾಡಿತ್ತು. ಕಾರ್ತಿಕ್ ತಂಗಿ ನೋಡಿದ್ರೇನೆ ಗೊತ್ತಾಗುತ್ತೆ. ಅವ್ರದ್ದು ಮಿಡಲ್ ಕ್ಲಾಸ್ ಫ್ಲ್ಯಾಮಿಲಿ, ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯಾ ಅನ್ನೋ ಟ್ರೆಂಡ್ ಶುರು ವಾಗಿತ್ತು. ಹೀಗಾಗಿ ಹೆಚ್ಚಿಗೆ ವೋಟ್ಗಳು ಬಂದ್ವು. 

ಇನ್ನು ಪ್ರತಾಪ್​ಗೆ ಒಂದು ಚಾನ್ಸ್ ಕೊಡೋಣ ಅಂತಾ ಜನ ಹೆಚ್ಚೆಚ್ಚು ಪ್ರೀತಿಸೋಕೆ ಶುರು ಮಾಡಿದ್ರು. ಇದೇ ಕಾರಣಕ್ಕೆ ಸಂಗೀತಾಗೆ ವೋಟ್ಸ್ ಸ್ವಲ್ಪ ಕಡಿಮೆ ಆಯ್ತು. ಒಟ್ಟಾರೆ ‘ಅಸಮರ್ಥರು’ ಎಂಬ ಹಣೆಪಟ್ಟಿಯೊಂದಿಗೆ ‘ಬಿಗ್ ಬಾಸ್‌’ ಮನೆಯೊಳಗೆ ಕಾಲಿಟ್ಟ ಸಂಗೀತಾ ಶೃಂಗೇರಿ ಈಗ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಕರ್ನಾಟಕದ ಕ್ರಷ್ ಆಗಿದ್ದಾರೆ. ಆದರೂ ಸೋತಿದ್ದಕ್ಕೆ ಅವರು ಕಣ್ಣೀರಿಟ್ಟಿದ್ದನ್ನು ನೋಡಲು ಬೇಸರವಾಗುತ್ತಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.