ಸಂಗೀತ ಶೃಂಗೇರಿ ಮನೆಯಿಂದ ಬಿಗ್ ಬಾಸ್ ಮನೆಗೆ ಖಡಕ್ ವಾ.ರ್ನಿಂಗ್, ಯಾಕೆ ಏ.ನಾಯಿತು ಗೊ ತ್ತಾ

 | 
ರ್

ಎಲ್ಲ ಸಲಕ್ಕಿಂತ ಈ ಸಲ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಕ್ರೇಜ್ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಪ್ರತಿ ವಿಷಯವೂ ಸೋಶಿಯಲ್ ಮೀಡಿಯಾದಲ್ಲಿ ವಿಧ ವಿಧವಾಗಿ ಪೋಸ್ಟ್ ಆಗುತ್ತದೆ. ಅಂತೆಯೇ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಫೇಕ್ ಅಕೌಂಟ್ ಸೃಷ್ಟಿ ಮಾಡಿ, ಪ್ರತಿಸ್ಪರ್ಧಿಗಳ ಮೇಲೆ ಆರೋಪ ಮಾಡುತ್ತಿದ್ದಾರಂತೆ. 

ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದನಿ ಎತ್ತಿದ್ದಾರೆ. ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ಫೇಕ್ ಅಕೌಂಟ್ಸ್ ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತ, ಸಂಗೀತಾತಾ ಹೆಸರನ್ನು ಎಳೆಯುತ್ತಾ ಸುಮ್ಮ ಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ. 

ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ, ಮಾಡುವುದೂ ಇಲ್ಲ. ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ ಎಂದು ಸಂಗೀತಾ ಅವರ ಅತ್ತಿಗೆ ಸುಚಿತ್ರಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಈಗ ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗೋದಿಲ್ಲ. 

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಹತ್ತಿರ ಆಗುತ್ತಿದ್ದಂತೆ ಸ್ಪರ್ಧೆ ಜೋರಾಗಿದೆ. ಸ್ಪರ್ಧಿಗಳ ನಡುವೆ ಸ್ಪರ್ಧೆ ಜಾಸ್ತಿ ಆದಾಗ ಸಣ್ಣ ತಪ್ಪು ಕೂಡ ದೊಡ್ಡದಾಗುವುದು, ಮನಸ್ತಾಪ ಹೆಚ್ಚಾಗುವುದು. ಈಗ ಸಂಗೀತಾ ಕಂಡರೆ ಡ್ರೋನ್ ಪ್ರತಾಪ್ ಬಿಟ್ಟು, ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಆಗೋದಿಲ್ಲ. ಅಷ್ಟೇ ಅಲ್ಲದೆ ಇನ್ನು ಯಾವಾಗ ಇವರೆಲ್ಲ ಒಂದಾಗ್ತಾರೆ ಅಂತ ಹೇಳೋದು ಕೂಡ ಕಷ್ಟವೇ. ಬಿಗ್ ಬಾಸ್' ಮನೆಯಲ್ಲಿ ಸಂಗೀತಾ ಪ್ರಬಲ ಸ್ಪರ್ಧಿ ಎನ್ನೋದರಲ್ಲಿ ಡೌಟ್ ಇಲ್ಲ. 

ಶೋ ಶುರುವಾದ ಮೊದಲ ವಾರದಿಂದ ಇಲ್ಲಿಯವರೆಗೆ ಸಂಗೀತಾ ಅವರು ಆಟ ಆಡಿದ್ದಾರೆ, ನಿಲುವು ತಗೊಂಡಿದ್ದಾರೆ, ಜಗಳ ಆಡಿದ್ದಾರೆ, ತಂತ್ರ ಮಾಡಿದ್ದಾರೆ, ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡಿದ್ದಾರೆ. ಹಾಗಾಗಿ ಸಂಗೀತಾ ಅವರು ಗ್ರ್ಯಾಂಡ್ ಫಿನಾಲೆಗೆ ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಜನವರಿ ತಿಂಗಳ ಅಂತ್ಯದಲ್ಲಿ ಫಿನಾಲೆ ನಡೆಯಲಿದೆ ಎನ್ನಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.