ಕಾತಿ೯ಕ್ ಜೊತೆ ಲವ್ವಲ್ಲಿ ಬಿದ್ದಿದ್ದೀಯಾ ಎಂದ ಸಂಗೀತಾ ಅಮ್ಮ, ನಾಚಿಗೆ ಪಟ್ಟ ಸಂಗೀತಾ

 | 
H

ಬಿಗ್​ ಬಾಸ್​ ಸೀಸನ್​ 10ರ ಆಟ ರಂಗೇರುತ್ತಿದ್ದು, ಸ್ಪರ್ಧಿಗಳು ಕಡಿಮೆ ಆಗ್ತಿದ್ದಂತೆ ಪೈಪೋಟಿ ಜೋರಾಗಿದೆ. ಮನೆಯವರನ್ನು ಕಂಡು ಹಲವು ದಿನಗಳೇ ಕಳೆದಿದ್ದ ಬಿಗ್ ಬಾಸ್ ಮಂದಿಗೆ ಮನೆಯವರ ಸರ್ಪ್ರೈಸ್​ ಎಂಟ್ರಿ ಖುಷಿ ಕೊಟ್ಟಿದೆ.

ಬಿಗ್ ಬಾಸ್ ಮನೆಗೆ ಸಂಗೀತಾ ಶೃಂಗೇರಿ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಅನೇಕರ ಪ್ರೇಕ್ಷಕರು ಸಂಗೀತಾ ಮನೆಯವರ ರಿಯಾಕ್ಷನ್ ನೋಡಲು ಕಾಯ್ತಿದ್ದವರಿಗೂ ಈ ದಿನದ ಎಪಿಸೋಡ್ ಕುತೂಹಲ ಮೂಡಿಸಿದೆ. ಬಿಗ್ ಬಾಸ್​ ಮನೆಯಲ್ಲಿರು ಸ್ಪರ್ಧಿಗಳು ಮನೆ ಮಂದಿಯನ್ನು ನೋಡಿದ ಖುಷಿಯಲ್ಲಿದ್ದಾರೆ. ತನಿಷಾ, ಸಿರಿ, ಸಂಗೀತಾ ಮನೆಯವರು ಒಂದೇ ದಿನ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಸಂಗೀತಾ ಶೃಂಗೇರಿ ಮನೆಯವರು ಬಿಗ್ ಬಾಸ್​ ಮನೆಗೆ ಬಂದಿದ್ದಾರೆ. ಸಂಗೀತಾ ಅಣ್ಣ, ಅತ್ತಿಗೆ ಹಾಗೂ ಅಮ್ಮ ಮೂವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅನೇಕ ಬಾರಿ ಬಿಗ್ ಬಾಸ್ ಮನೆಯಲ್ಲಿ ತನ್ನ ಅತ್ತಿಗೆ ಸುಚಿ ಹೆಸರನ್ನು ಸಂಗೀತಾ ಶೃಂಗೇರಿ ಅನೇಕ ಬಾರಿ ಹೇಳಿದ್ರು. ಇದೀಗ ಬಿಗ್ ಬಾಸ್ ಮನೆಗೆ ಸುಚಿ ಎಂಟ್ರಿ ಸಂಗೀತಾಗೆ ಖುಷಿ ಕೊಟ್ಟಿದೆ.

ಯಾಕೆ ಸುಚಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ನಾನು ಎಲ್ಲಾದ್ರೂ ತಪ್ಪು ಮಾಡ್ತಿದ್ದೇನಾ ಎಂದು ಸಂಗೀತಾ ಸುಚಿ ಬಳಿ ಕೇಳಿದ್ರು. ಇದಕ್ಕೆ ಸುಚಿ ನೋ ನೋ ಎಂದಿದ್ದಾರೆ. ಅಮ್ಮನ ಬಳಿ ಮಾತಾಡಿದ ಸಂಗೀತಾ, ನಾನು ಇಲ್ಲಿ ಲವ್ ಮಾಡ್ತಿದ್ದೇನೆ ಎಂದು ನಿನಗೆ ಅನಿಸಿದ್ಯಾ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಸಂಗೀತಾ ಅಮ್ಮ ಸ್ವಲ್ಪ ಹಾಗೇ ಅನಿಸಿದೆ ಎಂದು ಹೇಳಿದ್ದು, ತಾಯಿ ಮಾತು ಕೇಳಿ ಶಾಕ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.