'ಸಿಹಿಸುದ್ದಿ ಹಂಚಿದ ಸಾನಿಯಾ ಅಯ್ಯರ್' ತಲೆಕೆಡಿಸಿಕೊಂಡ ರೂಪೇಶ್ ಶೆಟ್ಟಿ

 | 
Ess

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹಲವು ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಗೌರಿ ಸಿನಿಮಾ ಅವರ ಮೊದಲ ಚಿತ್ರವಾಗಿದ್ದು, ಸಾನ್ಯಾ ಅಯ್ಯರ್ ನಾಯಕಿ ಆಗಿ ನಟಿಸಿದ್ದಾರೆ.

ಪ್ರೇಮಿಗಳ ದಿನ ಸಮೀಪಿಸಿದೆ. ಈ ಕಾರಣಕ್ಕೆ ಇತ್ತೀಚೆಗೆ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ಬುಕ್ ಮೈ ಕ್ಯಾಪ್ಚರ್​ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕೆನಡಾದ ಖ್ಯಾತ ಛಾಯಾಗ್ರಾಹಕ ರೋಹಿತ್ ಅವರು ಈ ಶೂಟ್ ಮಾಡಿದ್ದಾರೆ.ಈ ಜೋಡಿಗೆ ಮೇಕಪ್ ಮಾಡಿದ್ದು ಗೌರಿ ಕಪೂರ್. ಅವರು ಬಾಲಿವುಡ್​ನ ದೀಪಿಕಾ ಪಡುಕೋಣೆ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸಾನ್ಯಾ ಹಾಗೂ ಸಮರ್ಜಿತ್ ಫೋಟೋಗಳು ಗಮನ ಸೆಳೆಯುತ್ತಿವೆ.

ಗೌರಿ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಇತ್ತೀಚೆಗೆ ಸಾನ್ಯಾ ಅವರು ಡಬ್ಬಿಂಗ್ ಕೆಲಸ ಕೂಡ ಪೂರ್ಣಗೊಳಿಸಿದ್ದಾರೆ ಬಿಗ್ ಬಾಸ್ ಕನ್ನಡ ಒಟಿಟಿ ಹಾಗೂ ಬಿಗ್ ಬಾಸ್ ಟಿವಿ ಸೀಸನ್ ಮೂಲಕ ಸಾನ್ಯಾ ಖ್ಯಾತಿ ಹೆಚ್ಚಿಸಿಕೊಂಡರು.ಗೌರಿ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಗನನ್ನು ಪರಿಚಯಿಸುವ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ಬಂಡವಾಳ ಹೂಡಿದ್ದಾರೆ.

ಸಾನ್ಯಾ ಅಯ್ಯರ್ ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಈಗ ಸಮರ್ಜಿತ್ ಜೊತೆ ಮೊದಲ ಬಾರಿಗೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ಬರೋ ಈ ಪ್ರೇಮಿಗಳ ಒಂದು ಸುಂದರ ಪೋಸ್ಟರ್ ರೆಡಿ ಮಾಡಲು ಈ ಫೋಟೋ ಶೂಟ್ ಮಾಡಲಾಗಿದೆ. ಈ ಫೋಟೋಗಳಲ್ಲಿಯೇ ದಿ ಬೆಸ್ಟ್ ಪಿಕ್ಚರ್ ಇಟ್ಟಕೊಂಡು ಗೌರಿ ಚಿತ್ರದ ಒಂದು ಪೋಸ್ಟರ್ ಪ್ರೇಮಿಗಳ ದಿನದಂದು ರಿಲೀಸ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.