ಪಾಪಿಸ್ತಾನದ ಗಂಡ ಕೈಕೊಟ್ಟ ಬಳಿಕ ಒಂಟಿಯಾದ ಸಾನಿಯಾ ಮಿರ್ಜಾ, ಭಾರತದಲ್ಲಿ ಏಕಾಂಗಿ ಓಡಾಟ

 | 
H

ಶೋಯೆಬ್‌ ಮಲಿಕ್‌ ಹಾಗೂ ಸನಾ ಜಾವೇದ್‌ ಮದುವೆಯ ಸುದ್ದಿ ಪ್ರಕಟವಾದ ಕೆಲ ದಿನಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಈ ಫೋಟೊಕ್ಕೆ ಹಲವು ರೀತಿಯ ಭಾವನೆಗಳ ಸ್ಪರ್ಶ ನೀಡಿದ್ದು, ತಾರೆಗೆ ಬೆಂಬಲ ಸೂಚಿಸಿದ್ದಾರೆ.

ಸಾನಿಯಾ ಮಿರ್ಜಾ ದಾಂಪತ್ಯ ಮುರಿದು ಬಿದ್ದಿರುವ ಸುದ್ದಿ ಅಧಿಕೃತವಾಗಿದ್ದೇ ಶೋಯೆಬ್‌ ಮಲಿಕ್‌ ಮತ್ತು ಸನಾ ಜಾವೇದ್‌ ಮದುವೆಯ ಫೋಟೊಗಳು ರಿವೀಲ್‌ ಆದ ಬಳಿಕ. ಅಲ್ಲಿಯವರೆಗೂ ಸಾನಿಯಾ ಮದುವೆಯ ಬ್ರೇಕಪ್‌ ಸುದ್ದಿಗಳು ಹರಿದಾಡುತ್ತಿದ್ದವೇ ಹೊರತು ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಶೋಯೆಬ್‌ ಮಲಿಕ್‌ ಇದ್ದಕ್ಕಿದ್ದ ಹಾಗೆ ತಮ್ಮ ಮದುವೆಯ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿ ಶಾಕ್‌ ನೀಡಿದ್ದರು.

 ಸಾನಿಯಾ ಮಿರ್ಜಾರಿಂದ ದೂರವಾಗಿದ್ದಾರೆ ಎನ್ನುವ ರೂಮರ್‌ ಬೆನ್ನಲ್ಲೇ ತಮ್ಮ ಮೂರನೇ ಮದುವೆಯ ಫೋಟೊಗಳನ್ನು ಶೇರ್‌ ಮಾಡುವ ಮೂಲಕ ಆ ಸುದ್ದಿ ನಿಜವಾದದ್ದು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ಸಾನಿಯಾ ಮಿರ್ಜಾ  ಅಭಿಮಾನಿಗಳಿಗೆ ಅವರ ನೈಜ ಸ್ಥಿತಿ ಅರಿವಾಗಿದ್ದೇ ಆಗ. ಕೆಲವು ದಿನಗಳ ಹಿಂದೆ ಸಾನಿಯಾ, ಮದುವೆ  ಕಷ್ಟ, ಡಿವೋರ್ಸ್‌  ಇನ್ನೂ ಕಷ್ಟ… ಎಂದೆಲ್ಲ ಸಾಲುಗಳನ್ನು ಬರೆದುಕೊಂಡಿದ್ದು ಇದೇ ಹಿನ್ನೆಲೆಯಲ್ಲಿ ಎನ್ನುವುದು ಈಗ ಸ್ಪಷ್ಟವಾಗಿದೆ. 

ಶೋಯೆಬ್‌  ಈ ರೀತಿ ತಮ್ಮ ಹೊಸ ಮದುವೆಯನ್ನು ಬಹಿರಂಗಪಡಿಸಿ ಶಾಕ್‌ ನೀಡಿದ ಬಳಿಕ ಸಾನಿಯಾ ಮಿರ್ಜಾರಿಗೆ ಭಾರತದ ಜನತೆ ಭಾವನಾತ್ಮಕ ಬೆಂಬಲ  ವ್ಯಕ್ತಪಡಿಸಿದ್ದರು. ಅತ್ತ ಶೋಯೆಬ್‌ ಮಲಿಕ್‌ ತಮ್ಮ ಮೂರನೇ ವಿವಾಹವನ್ನು ದೃಢಪಡಿಸುತ್ತಿರುವಂತೆಯೇ ಇತ್ತ ಸಾನಿಯಾ ಮಿರ್ಜಾ ಸಹೋದರಿ ಅನಮ್‌ ಮಿರ್ಜಾ ಇವರಿಬ್ಬರ ಮದುವೆಯ ವಿಚ್ಛೇದನವನ್ನು ಖಾತರಿ ಪಡಿಸಿದ್ದರು. ಕೆಲವು ತಿಂಗಳುಗಳ ಹಿಂದೆಯೇ ವಿಚ್ಛೇದನ ನಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಇದೀಗ ಸಾನಿಯಾ ಮಿರ್ಜಾ ಕೂಡ ಎರಡನೇ ಮದುವೆ ಆಗುತ್ತಾರೆ ಎಂದು ಹೇಳಲಾಗ್ತಿದೆ.