ಬೆಳ್ಳಿ ಗೊಂಬೆಯಂತಿರುವ ಸಾನಿಯಾ ಮಿರ್ಜಾಗೆ ಕೈ ಕೊಟ್ಟ ಗಂಡ, ಮತ್ತೊಂದು ಹೆಣ್ಣಿನ ‌ಜೊತೆ ಮದುವೆ

 | 
Bs

ಸಾನಿಯಾ ಮಿರ್ಜಾ ಎಂಬ ಮೂಗುತಿ ಸುಂದರಿಯ ಬದುಕಿನಲ್ಲಿ ಮದುವೆ ಬಳಿಕ ಎಲ್ಲವೂ ಸರಿಯಲ್ಲ ಎಂಬ ರೂಮರ್ ಹರಡಿತ್ತು. ತನ್ನ ಆಟ ಹಾಗೂ ಸೌಂದರ್ಯದ ಜೊತೆಗೆ ಭಾರತೀಯರ ಮನಗೆದ್ದಿದ್ದ ಈ ಸುಂದರಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ರನ್ನು ಪ್ರೀತಿಸಿ ಮದುವೆಯಾದಾಗ ಭಾರತಿಯರಲ್ಲಿ ಚಿಕ್ಕ ಅಸಮಧಾನ ಉಂಟಾಗಿತ್ತು, ಆದರೂ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ಆಕೆಯ ಬದುಕು ಸುಂದರವಾಗಿರಲಿ ಎಂದು ಬಯಸಿದ್ದರು.

ಆದರೆ ಮದುವೆಯಾಗಿ ಮಗುವಾದ ಬಳಿಕ ಅವರಿಬ್ಬರ ನಡುವೆ ಏನೋ ಸಮಸ್ಯೆಯಿದೆ ಎಂಬ ಗುಸುಗುಸು ಕೇಳಿ ಬರುತ್ತಿತ್ತು. ಅವರಿಬ್ಬರು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು, ಅದಕ್ಕೆಲ್ಲಾ ಉತ್ತರ ಸಾನಿಯಾ ಅಭಿಮಾನಿಗಳಿಗೆ ಇಮದು ಸಿಕ್ಕಿದೆ, ಅವರ ಪತಿ ಶೋಯೆಬ್ ಮಲ್ಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್‌ರನ್ನು ಮೂರನೇ ಮದುವೆಯಾಗಿದ್ದಾರೆ. ಸನಾಗೂ ಇದು ಎರಡನೇ ಮದುವೆ.

ಶೋಯೆಬ್‌ ಮಲ್ಲಿಕ್‌ ಕಳೆದ ವರ್ಷ ಸನಾ ಜಾವೇದ್ ಹುಟ್ಟು ಹಬ್ಬಕ್ಕೆ 'Happy Birthday Buddy' ಎಂದು ಬರೆದು ವಿಶ್ ಮಾಡಿದ್ದರು, ಅಲ್ಲದೆ ಅವರ ಜೊತೆಗಿನ ಫೋಟೋ ಕೂಡ ಶೇರ್ ಮಾಡಿದ್ದರು. ಆವಾಗಲೇ ಇವರಿಬ್ಬರ ನಡುವೆ ಏನೋ ಇದೆ ಎಂಬ ರೂಮರ್ ಹರಡಿತ್ತು, ಆದರೆ ಅದು ರೂಮರ್ ಆಗಿರಲಿಲ್ಲ ಎಂಬುವುದು ಇಂದು ನಿಜವಾಗಿದೆ.

ಸನಾ ಜಾವೇದ್ ಕೂಡ ತಮ್ಮ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಸಾನಿಯಾ ಮಿರ್ಜಾರಿಂದ ಶೋಯೆಬ್‌ ಬೇರ್ಪಟ್ಟಿದ್ದಾರೆ ಎಂಬುವುದು ಬಹುತೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಸಾನಿಯಾ ಈ ಕುರಿತು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ, ಆದರೆ ಆಗಾಗ ಕೆಲವೊಂದು ಹಿಂಟ್ ಕೊಡುವ ಅಥವಾ ತಮ್ಮ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದರು, 

ಇತ್ತೀಚೆಗೆ ಕೂಡ When something disturbs the peace of your heart , let it go ಎಂದು ಬರೆದು ಪೋಸ್ಟ್ ಮಾಡಿದ್ದರು, ಆವಾಗಲೂ ಇವರಿಬ್ಬರ ನಡುವೆ ಏನೋ ಸಮಸ್ಯೆಯಿದೆ ಎಂದು ಅನಿಸಿತ್ತೇ ಹೊರತು ಬೇರೆ-ಬೇರೆಯಾಗಿದ್ದಾರೆ ಎಂಬುವುದು ತಿಳಿದಿರಲಿಲ್ಲ, ಇದೀಗ ಮದುವೆ ಸುದ್ದಿ ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.