ಸಂಜಿತ್ ಹೆಗ್ಡೆ ಸಂಭಾವನೆ ಮಿತಿಮೀರಿದೆ, ಕನ್ನಡದ‌ ಹುಡುಗ ದುಡ್ಡಿನ ಆಸೆಗೆ ಹಿಂದಿ ಚಿತ್ರರಂಗದ ಹಿಂದೆ ಬಿದ್ದಿದ್ದಾನೆ; ಕೆ ಮಂಜು

 | 
ಕೀ
ನಟ ರಿಷಿ ಮತ್ತು ಪ್ರಿಯಾಂಕಾ ಕುಮಾರ್ ಜೋಡಿಯಾಗಿ ನಟಿಸಿರುವ ರುದ್ರ ಗರುಡ ಪುರಾಣ ಸಿನಿಮಾ ಇದೇ ಜನವರಿ 24ರಂದು ರಿಲೀಸ್ ಆಗುತ್ತಿದೆ. ಕೆಎಸ್‌ ನಂದೀಶ್ ಆಕ್ಷನ್ ಕಟ್ ಹೇಳಿದ್ದು ಕಥೆ ಮೇಲೆ ಕನ್ನಡಿಗರಿಗೆ ಕುತೂಹಲ ಹೆಚ್ಚಾಗಿದೆ. ಇತ್ತೀಚಿಗೆ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಮಂಜು ಗಾಯಕರ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಕನ್ನಡದಲ್ಲಿ ಬೆಳೆದ ಗಾಯಕರನ್ನು ಮತ್ತೆ ಕನ್ನಡಕ್ಕೆ ಕರೆ ತರಲು ಎಷ್ಟು ಕಷ್ಟ ಇದೆ ಎಂದು ಅರ್ಥ ಮಾಡಿಸಿದ್ದಾರೆ.
ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲರೂ ಬೆಳೆದಾಗ ಬೇರೆ ಕಡೆ ಹೋಗುತ್ತಾರೆ. ಆದರೆ ಎಲ್ಲರೂ ಇಲ್ಲೇ ಇರಿ ಎಂದು ಹೇಳಲು ಇಷ್ಟ ಪಡುತ್ತೀನಿ. ಗಾಯಕ ಸಂಜಿತ್ ಹೆಗ್ಡೆರವರನ್ನು ಎಲ್ಲರೂ ಇಲ್ಲಿಂದ ಬೆಳೆಸಿದರು ಆದರೆ ಅವರು ಹಿಂದಿಗೆ ಮಾರಿಕೊಂಡು ಬಿಟ್ಟಿದ್ದಾರೆ. ಕನ್ನಡ ಸಿನಿಮಾ ಹಾಡು ಅಂದ್ರೆ 2.5 ಲಕ್ಷ ಕೇಳ್ತಾನೆ. ಇದೇ ಬಾಂಬೆಯವರು ಏನು ಮಾಡುತ್ತಾರೆ ಕೇಳಿ...ಸೋನು ನಿಗಮ್ ಮರಾಠಿ ಹಾಡು ಹೇಳಿದರೆ 40-50 ಸಾವಿರ ಕೊಡಲ್ಲ, ಜಾಸ್ತಿ ಕೇಳಿದ್ದರೆ ಅವರಲ್ಲಿ ಓಡಿಸಿಬಿಡುತ್ತಾರೆ. 
ಆದರೆ ನಮ್ಮಲ್ಲಿ ಹಾಗೆ ನಡೆಯುವುದಿಲ್ಲ. ಇವರು ಇಲ್ಲಿಂದ ಶುರು ಮಾಡುತ್ತಾರೆ ಜನರು ಇಷ್ಟ ಬಿದ್ದು ಬೆಳೆಸುತ್ತಾರೆ ಆದರೆ ಅವರು ಅದೇ ಎರಡು ವರೆ ಲಕ್ಷ ಕೇಳ್ತಾರೆ ಹಾಡು ಹಾಡುವುದಿಲ್ಲ. ನಮ್ಮಲ್ಲಿ ಬೆಳೆದು ಹೋದವರು ಬೇರೆ ಇರುತ್ತಾರೆ. ನಿಮ್ಮನ್ನು ಜನರು ಇಲ್ಲಿ ಬೆಳೆಸಿ ಉಳಿಸಿರುತ್ತಾರೆ ಅವರಿಗೆ ಮಾಡಿ ಚಿತ್ರರಂಗಕ್ಕೆ ಮಾಡಿ. ಇಡೀ ಭಾರತೀಯ ಚಿತ್ರರಂಗ ತಿರುಗಿ ಕನ್ನಡ ಚಿತ್ರರಂಗವನ್ನು ನೋಡುವ ಮಟ್ಟಕ್ಕೆ ಬೆಳೆದಿದೆ' ಎಂದು ವೇದಿಕೆ ಮೇಲೆ ಮಾತನಾಡಿದ್ದಾರೆ ಮಂಜು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 13ರ ಮೂಲಕ ಸಂಜಿತ್ ಹೆಗಡೆ ಬೆಳಕಿಗೆ ಬರುತ್ತಾರೆ. ಇದಾದ ಮೇಲೆ ಸರಿಗಮಪ ತಮಿಳು ಸೀನಿಯರ್ ಕಾರ್ಯಕ್ರಮದಲ್ಲೂ ಭಾಗಿಯಾಗಿ ಜನ ಅಭಿಮಾನಿಗಳ ಗಳಿಸುತ್ತಾರೆ. ಇಲ್ಲಿಂದ ಸಿನಿಮಾಗಳಲ್ಲಿ ಹಾಡಲು ಅವಕಾಶಗಳನ್ನು ಪಡೆಯುತ್ತಾರೆ.
ಸಾಲು ಸಾಲು ಕನ್ನಡ ಸಿನಿಮಾಗಳನ್ನು ಹಾಡುತ್ತಿದ್ದ ಸಂಜಿತ್ ಇದ್ದಕ್ಕಿದ್ಧಂತೆ ಪರಭಾಷೆಗಳಲ್ಲಿ ಹಾಡಲು ಶುರು ಮಾಡಿ ಕನ್ನಡವನ್ನೇ ಮರೆತುಬಿಟ್ಟಿದ್ದಾರೆ ಎಂದು ಮಂಜು ಆರೋಪ ಹೊರಿಸಿದ್ದಾರೆ. ಆದ್ರೆ ಫ್ರೀ ಮಾಡಿಕೊಡಬೇಕಿತ್ತೆ ಫ್ರೀ ದುಡಿಸಿಕೊಳ್ಳೋದು ಬಿಡಿ ಎಂದು ಅಭಿಮಾನಿಗಳು ಮಂಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.