ಸಂಜು ವೆಡ್ಸ್ ಗೀತಾ 2 ಬಿಡುಗಡೆ ಅನುಮಾನ, ಎಡವಟ್ಟು ಮಡಿಕೊಂಡ ಕಿಟ್ಟಿ
Jan 9, 2025, 15:29 IST
|
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬರುವ ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಅಲರ್ಟ್ ಆಗಿವೆ. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳು ಕೂಡ ಇದೇ ಹಬ್ಬಕ್ಕೆ ಪೈಪೋಟಿಗೆ ಬಿದ್ದು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕನ್ನಡದ ಎರಡು ಸಿನಿಮಾಗಳು ಕೂಡ ಸೇರಿಕೊಂಡಿವೆ. ಶರಣ್ ನಟನೆಯ 'ಛೂ ಮಂತರ್'. ಇನ್ನೊಂದು ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಸಿನಿಮಾ 'ಸಂಜು ವೆಡ್ಸ್ ಗೀತಾ 2 ಸಿನಿಮಾ.
ಸ್ನೇಹಿತರೇ...ಒಂದು ಕಡೆ ಕರ್ನಾಟಕದಲ್ಲಿಯೇ ಪರಭಾಷೆಯ ಸಿನಿಮಾಗಳ ಹಾವಳಿಗೆ ಕನ್ನಡ ಸಿನಿಮಾಗಳೂ ತತ್ತರಿಸಿ ಹೋಗಿವೆ. ಥಿಯೇಟರ್ ಸಿಗುತ್ತಿಲ್ಲ ಅಂತ ಕನ್ನಡ ಸಿನಿಮಾ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಈ ಮಧ್ಯೆ ಇನ್ನೇನು ಬಿಡುಗಡೆ ಹೊಸ್ತಿಲಲ್ಲಿ ಇರುವ 'ಸಂಜು ವೆಡ್ಸ್ ಗೀತಾ 2' ಬಿಡುಗಡೆ ಆಗೋದು ಅನುಮಾನ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.
ಸ್ನೇಹಿತರೇ.. ಅಷ್ಟಕ್ಕೂ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಸಂಜು ವೆಡ್ಸ್ ಗೀತಾ 2' ಜನವರಿ 10 ರಂದು ರಿಲೀಸ್ ಆಗಬೇಕು. ಈ ಹಿಂದೆ ಇದೇ ಸೀಕ್ವೆಲ್ ಅಲ್ಲಿ ನಟಿ ರಮ್ಯಾ ಕೂಡಾ ನಟಿಸಿದ್ರು.ಅದರ ಹಾಡುಗಳು ಹಾಗು ಸಿನಿಮಾ ಕೂಡಾ ಸಖತ್ ಸದ್ದು ಮಾಡಿತ್ತು.ಸಿನಿ ಪ್ರಿಯರ ಮನ ಗೆದ್ದಿತ್ತು.ಅದೇ ಹುರುಪಿನಲ್ಲಿ ಈ ಸಿನೆಮಾ ಕೂಡಾ ಮಾಡಲಾಗಿತ್ತು.ಅಷ್ಟೆ ಅಲ್ಲ ಈಗಾಗಲೇ ಇಡೀ ತಂಡ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಮಾಡಿದೆ. ಆದರೆ, ಇನ್ನೇನು ಒಂದು ದಿನ ಬಾಕಿ ಉಳಿದಿದೆ ಎನ್ನುವಾಗಲೇ ಸಿನಿಮಾ ರಿಲೀಸ್ ಆಗೋದು ಅನುಮಾನ ಅನ್ನೋದು ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇತ್ತ ನಾಗಶೇಖರ್ ಹಾಗೂ ತಂಡದ ಪ್ರಮುಖ ಹೈದರಾಬಾದ್‌ಗೆ ಪಯಣ ಬೆಳೆಸಿದ್ದಾರಂತೆ. ಅತ್ತ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡುವುದಕ್ಕೆ ಆಗುತ್ತಿಲ್ಲ.
https://youtube.com/shorts/rP1Piy5_uVo?si=NuSCRExsQxVMOrXr
ಹೌದು ಸ್ನೇಹಿತರೇ..ಸುಮಾರು 4.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಬಿಡುಗಡೆ ಹೊಸ್ತಿಲಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇನ್ನು 'ಸಂಜು ವೆಡ್ಸ್ ಗೀತಾ 2' ಸಿನಿಮಾ ಟಿಕೆಟ್ ಬುಕ್ ಮಾಡುವುದಕ್ಕೆ ಹೋದರೂ ಬುಕ್ ಮೈ ಶೋನಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದರೆ, ತಂಡ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ ಅನ್ನು ಸಿನಿಮಾ ಮಂದಿಯ ಮಾತು ನಿಜ ಎನಿಸುತ್ತಿದೆ. 'ಸಂಜು ವೆಡ್ಸ್ ಗೀತಾ 2' ಸಿನಿಮಾ ರಿಲೀಸ್‌ಗೆ ಫೈನಾನ್ಷಿಯರ್ ಕಡೆಯಿಂದ ಇನ್ನೂ ಕ್ಲಿಯರೆನ್ಸ್ ಸಿಕ್ಕಿಲ್ಲ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.
ಸ್ನೇಹಿತರೇ.. ಅಷ್ಟೇ ಅಲ್ಲದೆ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ದೇಶಕ ನಾಗಶೇಖರ್ ಅವರ ತಂಡ ಹೈದರಾಬಾದ್‌ಗೆ ದೌಡಾಯಿಸಿದೆ ಅಂತಾನೂ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಸಿನಿಮಾ ನಾಳೆ (ಜನವರಿ 10) ರಿಲೀಸ್ ಆಗುತ್ತಾ? ಇಲ್ಲವಾ? ಅನ್ನೋ ಅನುಮಾನವಂತೂ ಮೂಡಿದೆ. ಒಂದು ವೇಳೆ ರಿಲೀಸ್ ಆಗದೇ ಹೋದರೇ ಶಿವರಾತ್ರಿಗೆ ಸಿನಿಮಾ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಹೇಳುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ಕೊಂಚ ಸಮಯ ಕಾದು ನೋಡಬೇಕಿದೆ.