ಮಜಾ ಮೂಡ್ ನಲ್ಲಿ ಕಾಂತಾರ ಚೆಲುವೆ ಸಪ್ತಮಿ ಗೌಡ, ವಿದೇಶಕ್ಕೆ ಹೋಗಿದ್ದು ಯಾರ ಜೊತೆ
ಯುವ ಸಿನಿಮಾದ ನಂತರ ನಟಿ ಸಪ್ತಮಿ ಗೌಡ ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಂತಿದೆ. ಸದ್ಯಕ್ಕಂತೂ ನಟಿಯ ಇನ್‌ಸ್ಟಾಗ್ರಾಂ ಅಕೌಂಟ್ ತುಂಬಾ ಕಲರ್ ಫುಲ್ ಚಿತ್ರಗಳೇ ತುಂಬಿವೆ. ಆಪ್ತರ ಜೊತೆ ಸಮಯ ಕಳೆಯುತ್ತಾ ಸಪ್ತಮಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಫೋಟೋಗಳೇ ಹೇಳುವಂತೆ ಅಮೆರಿಕದಲ್ಲಿ ಕಾಂತಾರ ನಟಿಯ ಹಾಲಿಡೇ ಜಾಲಿಯಾಗಿ ನಡೆಯುತ್ತಿದೆ.ಹಾಲಿವುಡ್‌ನಲ್ಲಿ ಕೂಡಾ ನಟಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಹಾಗಂತ ಅವ್ರೇನೂ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿಲ್ಲ.
ಬದಲಿಗೆ ಅಮೆರಿಕದ ಹಾಲಿವುಡ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಯೂನಿವರ್ಸಲ್ ಸ್ಟೂಡಿಯೋ ಸೇರಿದಂತೆ ಅನೇಕ ಸ್ಥಳಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಇನ್ನು ಪ್ರಖ್ಯಾತ ಗೋಲ್ಡನ್ ಗೇಟ್ ಬ್ರಿಜ್ಡ್‌ಗೂ ಸಪ್ತಮಿ ವಿಸಿಟ್ ಮಾಡಿದ್ದಾರೆ. ಕೆಲವೊಮ್ಮೆ ನಾವು ಗೋಲ್ಡನ್ ಗೇಟ್ ಬ್ರಿಡ್ಜ್ ಜೊತೆ ಮ್ಯಾಚ್ ಆಗುತ್ತೇನೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೆಂಪು ಬಣ್ಣದ ಗೋಲ್ಡನ್ ಬ್ರಿಡ್ಜ್ ಹಿನ್ನೆಲೆಯಲ್ಲಿ ಅಚ್ಚ ಬಿಳುಪಿನ ಸ್ಕರ್ಟ್ ಮತ್ತು ಕಡುಗೆಂಪು ಬಣ್ಣದ ಪುಲ್ ಓವರ್ ತೊಟ್ಟ ಸಪ್ತಮಿ ಮುದ್ದಾಗಿ ಕಾಣುತ್ತಾರೆ. ಅವರ ಮ್ಯಾಚಿಂಗ್ ಸ್ಪೋರ್ಟ್ಸ್‌ಶೂಗಳು ಲುಕ್ ಅನ್ನು ಕಂಪ್ಲೀಟ್ ಮಾಡಿವೆ. ಪಕ್ಕಾ ಟೂರಿಸ್ಟ್ ರೀತಿಯಲ್ಲಿ ಅಮೆರಿಕದ ಖ್ಯಾತ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡ್ತಿರೋ ಸಪ್ತಮಿ ಜೊತೆ ಕೆಲವು ಚಿತ್ರಗಳಲ್ಲಿ ಅವರ ಆಪ್ತರೂ ಕಾಣಿಸುತ್ತಾರೆ.ಪಿಂಕ್ ಶೇಡ್‌ನ ಬಾಕ್ಸಿ ಕ್ರಾಪ್ ಟೀ ಮತ್ತು ಬ್ಲಾಕ್ ಕಾರ್ಗೊ ತೊಟ್ಟ ಸಪ್ತಮಿ ತಮ್ಮ ಆಪ್ತರ ಜೊತೆ ಅಮೆರಿಕದಲ್ಲಿ ಸೂರ್ಯಾಸ್ತ ಸವಿಯುತ್ತಿರುವ ಚಿತ್ರ ಕೂಡಾ ಮಸ್ತಾಗಿದೆ.
ಮತ್ತೊಂದೆಡೆ ತಿಳಿನೀಲಿ ಹಿನ್ನೆಲೆಯಲ್ಲಿ ಅದೇ ಶೇಡ್‌ನ ಬ್ಲೂ ಜೀನ್ಸ್ ಡ್ರೆಸ್ ಮತ್ತು ಬ್ಲಾಕ್ ಸ್ಟಾಕಿಂಗ್ಸ್ ತೊಟ್ಟು ಗಾಗಲ್ಸ್‌ನಲ್ಲಿ ಸಪ್ತಮಿ ಕೂಲ್ ಆಗಿ ಪೋಸ್ ಕೊಟ್ಟಿದ್ದಾರೆ. ಅಮೆರಿಕದ ತಣ್ಣಗಿನ ಗಾಳಿ, ಹೊಂಬಿಸಿಲು ಎಲ್ಲವನ್ನೂ ಆಸ್ವಾದಿಸ್ತಿದ್ದಾರೆ ಸಪ್ತಮಿ ಗೌಡ. ಇನ್ನು ನಟ ಯುವ ರಾಜ್‌ಕುಮಾರ್ ವಿಚ್ಛೇದನ ಪ್ರಕರಣದಲ್ಲಿ ಸಪ್ತಮಿಗೌಡ ಹೆಸರು ಕೇಳಿ ಬಂದಿದ್ದು, ನಂತರ ಆಕೆ ಮಾನನಷ್ಟ ಮೊಕದ್ದಮೆ ಹೂಡಿದ್ದು ಇವೆಲ್ಲವೂ ತಿಳಿದಿರುವ ವಿಚಾರವೇ. ಆ ಘಟನೆಯ ನಂತರ ಕೆಲಕಾಲ ಸಪ್ತಮಿ ಸಾಮಾಜಿಕ ಜಾಲತಾಣಗಳಿಂದಲೂ ದೂರ ಉಳಿದಿದ್ದರು. ಆದರೆ, ಈಗ ಮತ್ತೆ ತಮ್ಮ ಎಂದಿನ ಕಲರ್ ಫುಲ್ ಬದುಕಿಗೆ ಮರಳಿದಂತಿದ್ದಾರೆ. ಈ ಹಾಲಿಡೇ ಅವರಿಗೆ ಅಗತ್ಯವಾಗಿ ಬೇಕಿದ್ದ ಬ್ರೇಕ್‌ನಂತೆ ಭಾಸವಾಗ್ತಿದೆ ಎಂದು ಅಭಿಮಾನಿಗಳು ಕೂಡಾ ಕಮೆಂಟ್ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.