ಮೂರ್ತಿ ಕೆತ್ತನೆ ಹಣ ಇನ್ನೂ ಬಂದಿಲ್ಲ, ಬೆಂಗಳೂರಿಗೆ ಬಂದ ತಕ್ಷಣ ರೊಚ್ಚಿಗೆದ್ದ ಶಿಲ್ಪಿ ಯೋಗಿರಾಜ್

 | 
ರ

ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಡೆದ ಶ್ರೀರಾಮ ದೇವರ ಮೂರ್ತಿಯನ್ನು ಇದೀಗ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂವರು ಶಿಲ್ಪಿಗಳು ರಚಿಸಿದ ಮೂರು ಮೂರ್ತಿಯಲ್ಲಿ ಅರುಣ್ ಯೋಗಿರಾಜ್ ಅವರು ರಚಿಸಿದ ಕೃಷ್ಣಶಿಲೆಯ ಶ್ರೀರಾಮ ಮೂರ್ತಿಯು ಆಯ್ಕೆಯಾಗಿ ಇದೀಗ ಪ್ರಾಣ ಪ್ರತಿಷ್ಠೆಯಾಗಿದೆ.

ರಾಮ ಲಲ್ಲಾನ ಪ್ರತಿಮೆಯನ್ನು ಕಂಡ ಜನ ಸಮೂಹವು ಮುಖಭಾವ, ಕಣ್ಣುಗಳು ಮತ್ತು ನಗುವನ್ನು ಮೆಚ್ಚುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿದ ಅರುಣ್, ರಾಮ ದೇವರು ನನಗೆ ಆದೇಶ ನೀಡಿದರು, ಅದರಂತೆ ನಾನು ಅನುಸರಿಸುತ್ತಾ ಹೋದೆ ಎಂದರು.ವಿಗ್ರಹವನ್ನು ಹೇಗೆ ಪೂರ್ಣಗೊಳಿಸಬೇಕು ಎಂದು ಯೋಚಿಸುವಾಗ ಕಳೆದ ಏಳು ತಿಂಗಳುಗಳು ವಿಶೇಷವಾಗಿ ಸವಾಲಿನವಾಗಿದ್ದವು ಎಂದು ಯೋಗಿರಾಜ್ ವಿವರಿಸಿದರು. 

ಮಗುವಿನ ಮುಗ್ಧತೆಯನ್ನು ಪ್ರತಿನಿಧಿಸುವ ಐದು ವರ್ಷದ ಭಗವಾನ್ ರಾಮನ ರೂಪವನ್ನು ಪ್ರತಿನಿಧಿಸುವ ವಿಗ್ರಹವು ಶಿಲ್ಪ ಶಾಸ್ತ್ರಕ್ಕೆ ಬದ್ಧವಾಗಿದೆ ಎಂದು ನಾನು ಖಾತ್ರಿ ಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು. ಮುಖದ ಲಕ್ಷಣಗಳು ಕಣ್ಣುಗಳು, ಮೂಗು, ಗಲ್ಲ, ತುಟಿ, ಕೆನ್ನೆ ಇತ್ಯಾದಿ ಶಿಲ್ಪ ಪ್ರಪಂಚದ ಪವಿತ್ರ ಗ್ರಂಥ ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ರಚನೆ ಮಾಡಲಾಗಿದೆ.

ಅರುಣ್ ಯೋಗಿರಾಜ್ ಅವರಿಗೆ ಮಂದಿರ ಟ್ರಸ್ಟ್ ಕೆಲವು ವಿಗ್ರಹವನ್ನು ಪೂರ್ಣಗೊಳಿಸಲು ನಿರ್ದಿಷ್ಟ ಮಾನದಂಡಗಳನ್ನು ಒದಗಿಸಿತ್ತು. ಅವುಗಳೆಂದರೆ, ನಗು ಮುಖ, ದೈವಿಕ ನೋಟ, 5 ವರ್ಷ ಪ್ರಾಯದ ಸ್ವರೂಪ, ಯುವರಾಜ ರೂಪ. ಕಳೆದರಡು ದಿನಗಳಿಂದ ಜನರು ರಾಮ ಮೂರ್ತಿಯನ್ನು ಇಷ್ಟಪಡುವುದನ್ನು ಕಂಡು ಸಂತಸಗೊಂಡಿದ್ದೇನೆ. ನನ್ನಿಂದ ರಚನೆಗೊಂಡ ಮೂರ್ತಿ ಆಯ್ಕೆಯಾದ ಸಂತಸಕ್ಕಿಂತ ಜನರು ರಾಮ ಮೂರ್ತಿಯನ್ನು ಇಷ್ಟ ಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. 

ಇನ್ನು ಈ ಮೂರ್ತಿ ಕೆತ್ತನೆಗೆ ಹಣ ದೊರೆತಿಲ್ಲ.ಇಂದಲ್ಲ ನಾಳೆ ನೀಡುತ್ತಾರೆ ಹಾಗಾಗಿ ನನಗೆ ಅದರ ಬಗ್ಗೆ ಯೋಚನೆ ಇಲ್ಲ ಎಂದಿದ್ದಾರೆ. ರಾಮ ಲಲ್ಲಾ ಮೂರ್ತಿ ಕೇವಲ ನನ್ನದಲ್ಲ, ಅದು ಎಲ್ಲರಿಗೂ ಸೇರಿದ್ದು ಎಂದರು ಅರುಣ್ ಯೋಗಿರಾಜ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.