ಯಶ್ ಅವರ ಬೆಳವಣಿಗೆ ಕಂಡು ಕೆಲವರು ಆತನನ್ನು ಕೆಳಕ್ಕೆ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ; ಮಾನ್ವಿತಾ ಕಾಮತ್
Apr 3, 2025, 17:33 IST
|

ಮಾನ್ವಿತಾ ಕಾಮತ್ ಕನ್ನಡದ ಪ್ರತಿಭಾನ್ವಿತ ನಟಿ ಚೌಕ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಕನಕ, ಟಗರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. 2018ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಭಾರೀ ಜನಪ್ರಿಯತೆ ತಂದುಕೊಟ್ಟಿದೆ. ಟಗರು ಪುಟ್ಟಿ ಎಂದೇ ನಟಿ ಫೇಮಸ್ ಆಗಿದ್ದಾರೆ.
ಇದೀಗ ನಟಿ ಸಂದರ್ಶನದಲ್ಲಿ ಚಿತ್ರರಂಗದ ಸ್ಥಿತಿ ಗತಿಯ ಕುರಿತು ಮಾತನಾಡಿದ್ದಾರೆ. ಯಶ್ ಅವರ ಉದಾಹರಣೆಗಳನ್ನು ಕೊಟ್ಟು ಇಂದು ಇಂಡಸ್ಟ್ರಿಯಲ್ಲಿ ಏನೆಲ್ಲ ಆಗುತ್ತಿದೆ ಎಂದಬ ಸತ್ಯವನ್ನ ರಿವೀಲ್ ಮಾಡಿದ್ದಾರೆ.ಸದ್ಯ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಹಾಲಿವುಡ್, ಬಾಲಿವುಡ್‌ನವರೆಲ್ಲ ಸ್ಯಾಂಡಲ್‌ವುಡ್‌ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಯಶ್ ಅವರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡಿರುವ ಉದಾಹರಣೆಯನ್ನ ಮಾನ್ವಿತಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಮಾನ್ವಿತಾ ಈ ಬಗ್ಗೆ ಮಾತನಾಡಿ, ನಮ್ಮಲ್ಲಿ ಹಲವರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ನಾನು ಕೂಡ ಏನೇ ಕೆಲಸ ಮಾಡಲು ಹೋದಾಗಲು ಅದನ್ನ ತೋರಿಸಿಕೊಳ್ಳಲ್ಲ. ಬರೀ ಬಿಲ್ಡಪ್ ಅಂತ ಹೇಳೋರು ಕೂಡ ಇದ್ದಾರೆ.ಇನ್ನು ನಟಿ ಈ ವಿಚಾರವಾಗಿ ಮಾತನಾಡುತ್ತ ಯಶ್ ವಿಚಾರವನ್ನ ತೆಗೆದುಕೊಂಡು ಮಾತನಾಡಿದರು.
ಒಂದು ದಿನ ನಾವೆಲ್ಲ ಒಂದು ಮೀಟಿಂಗ್‌ನಲ್ಲಿ ಕುಳಿತಿಕೊಂಡಿದ್ವಿ, ಒಬ್ಬರು ಪ್ರೊಡ್ಯೂಸರ್, ನಂಗೆ ಯಶ್ ಅವರು ಅವಾಗಿನಿಂದ ಗೊತ್ತು ಅನ್ನೋ ಥರ ಮಾತಾಡಿದ್ರು. ಅಂದರೆ ಅವರ ಮಾತನಾಡುವ ಶೈಲಿ ಹೇಗಿತ್ತು ಅಂದರೆ, ಟಾಕ್ಸಿಕ್ ಇನ್ನ ಹಿಟ್ ಆಗಬೇಕು, ಇನ್ನಷ್ಟು ಆ ವ್ಯಕ್ತಿಯಿಂದ ಕೆಲಸ ಹೊರಗೆ ಬರತ್ತೆ. ಇಂಡಸ್ಟ್ರಿಗೆ ಏನೋ ಹೆಸರು ಬರತ್ತೆ ಎನ್ನೋ ಮೆಂಟಾಲಿಟಿ ಇಲ್ಲ. ಮಾತಾಡ್ತಾ ಇದ್ದಾರೆ ಹೇಗೆ ಅಂದ್ರೆ ಕೆಟ್ಟದ್ದೇ ಮಾತಾಡ್ತಾ ಇದ್ದಾರೆ.ಕೆಲವರು ಒಬ್ಬರ ಏಳ್ಗೆಯನ್ನ ಸಹಿಸಲ್ಲ. ಬೀಳೋದೆ ಕಾಯುತ್ತಿರುತ್ತಾರೆ. ಜನ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವಾಗ, ಆ ಗುಂಪಿಗೆ ಸೇರಿಕೊಂಡು ಕೆಟ್ಟದಾಗಿ ಮಾತನಾಡುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. ಆ ದಿನ ಕೂಡ ಅವರಿಗೆ ಉತ್ತರವನ್ನು ಕೊಟ್ಟೆ ಬಂದೆ ಎಂದು ಹೇಳಿರುವ ಮಾನ್ವಿತಾ ನೀವೆಲ್ಲ ಯಾಕೆ ಉದ್ದಾರ ಆಗಿಲ್ಲ ಅಂದರೆ ನೀವು ಎಲ್ಲರೂ ಬೀಳಲಿ ಅಂತ ಕಾಯುತ್ತಿರುತ್ತೀರಾ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Sat,12 Apr 2025
OYO ರೂಮ್ ಬಾಗಿಲು ತೆರೆದಿಟ್ಟು ಪ್ರೇಮಿಗಳ ಕುಸ್ತಿ ಆಟ
Sat,12 Apr 2025
ನಟಿ ಆರತಿ ಕುಟುಂಬದ ಛಿದ್ರ, 3 ಮದುವೆ ಹಾಗೂ ಅವರ ಮಕ್ಕಳು ಹೇ ಗಿದ್ದಾರೆ
Sat,12 Apr 2025
OYO ರೂಮ್ ಬಾಗಿಲು ತೆರೆದಿಟ್ಟು ಪ್ರೇಮಿಗಳ ಕುಸ್ತಿ ಆಟ
Sat,12 Apr 2025