ಸಿಹಿಸುದ್ದಿ ಕೊಟ್ಟ ಸೀರಿಯಲ್ ನಟಿ ಕವಿತಾ ಗೌಡ; ಈ ಬಾರಿ ಅವಳಿ ಜವಳಿ ಎಂದ ಚಿನ್ನು
ಲಕ್ಷ್ಮೀ ಬಾರಮ್ಮ, ಲಚ್ಚಿ ಸೀರಿಯಲ್ ಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಗೊಂಬೆ ನೇಹಾ ಇತ್ತೀಚಿಗಷ್ಟೇ ಸೀರೆ ಉಟ್ಟು ತಮ್ಮ ಬೀಬಿ ಬಂಪ್ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಚಂದನ್ ಮತ್ತು ಕವಿತಾ ತಾವು ಇಬ್ಬರಿಂದ ಮೂವರು ಆಗುತ್ತಿರುವ ಸಂತಸದ ವಿಷಯವನ್ನು ಅಭಿಮಾನಿಗಳ ಜೊತೆ ಮೇ ಮೊದಲ ವಾರದಲ್ಲಿ ಹಂಚಿಕೊಂಡಿದ್ದರು.
ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿರುವ ಕವಿತಾ ವಿಶ್ರಾಂತಿಯಲ್ಲಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ಕವಿತಾ ಮತ್ತು ಚಂದನ್ ಜೊತೆಯಾಗಿ ನಟಿಸಿದ್ದರು. ನಂತರ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿಯೂ ಪ್ರತ್ಯೇಕ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು.
ಇಂದು ಇನ್‌ಸ್ಟಾಗ್ರಾಂನಲ್ಲಿ ಪಟ ಪಟ ಅಂತ ಕಣ್ಣು ಮಿಟುಕಿಸುತ್ತಿರುವ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದಾರೆ. ಇದು ಇನ್ನೆಷ್ಟು ದಿನ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್, ಈ ಸಮಯದಲ್ಲಿ ಹೀಗೆಲ್ಲಾ ಆಗುತ್ತೆ.
ಕಾಫಿ ಕುಡಿ, ಹುಷಾರಾಗಿರುವ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ರಿಯಾಕ್ಟ್ ಮಾಡಿರುವ ಕವಿತಾ, ನಾನು ನಿಮಗೆ ಕಾಲ್ ಮಾಡುವೆ ಎಂದು ಹೇಳಿದ್ದಾರೆ. ಇನ್ನು ಲವ್ ಯು ಅಕ್ಕಾ, ಹುಷಾರಾಗಿರಿ. ನಿಮ್ಮ ಮೇಲೆ ಯಾವ ಕೆಟ್ಟ ದೃಷ್ಠಿ ಬೀಳದಿರಲಿ. ಈಗ ನಿಮಗೆಷ್ಟು ತಿಂಗಳು ಎಂದು ಕೇಳಬಹುದಾ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ನೀವು ಹಸಿರು ಬಣ್ಣದ ಸೀರೆ ಧರಿಸಿ ಫೋಟೋ ತೆಗೆಸಿಕೊಳ್ಳಿ ಎಂದು ಅಭಿಮಾನಿಯೊಬ್ಬರು ಮನವಿ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.