ಯಾವುದೇ ಕಾರಣಕ್ಕೂ ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಓಪನ್ ಹೇಳಿಕೆ ಕೊಟ್ಟ ಸೀರಿಯಲ್ ನಟಿ ರಂಜನಿ

 | 
H

ಕೆಲ ದಿನಗಳ ಹಿಂದಷ್ಟೇ ನಟಿ ರಂಜನಿ ರಾಘವನ್ ಅವರು ಈ ಬಾರಿಯ ಬಿಗ್ ಬಾಸ್ ಶೋಗೆ ಹೋಗ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅದಕ್ಕೆ ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್ ಅವರು ಹೋಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು . ಇದೀಗ ಅವರೇ ನಟಿಸಿರುವ ಸತ್ಯ ಸಿನೆಮಾದ  ಟ್ರೇಲರ್ ಬಿಡುಗಡೆ ವೇಳೆ ಮಾಧ್ಯಮದ ಮುಂದೆ  ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಆಸಕ್ತಿಗಳು ಬೇರೆ, ನನ್ನ ಕಾರ್ಯಕ್ಷೇತ್ರ ಅದಲ್ಲ . ಹಾಗಾಗಿ ನಾನು ಆ ಕುರಿತು ಹೆಚ್ಚಿಗೆ ಆಸಕ್ತಿ ತೋರಿಸಿಲ್ಲ. ಈಗಾಗಲೇ ಜನರಿಗೆ ನಾನೇನು ನನ್ನ ಅಭಿರುಚಿಗಳ ಬಗ್ಗೆ ಸಾಕಷ್ಟು ತಿಳಿದಿದೆ. ನನಗೆ ಕ್ಯಾಮರಾ ಮುಂದೆ ನೀನು ನೀನಾಗಿರು ಎಂದರೆ ಇರಲು ಬರುವುದಿಲ್ಲ. ಅಲ್ಲದೇ ನಟಿಸುವುದು ಸಂಗೀತದ ಕಡೆ ಹೆಚ್ಚಿನ ಗಮನ ನೀಡುವ ಆಸೆ ನನಗಿದೆ ಎಂದು ಹೇಳಿದ್ದಾರೆ.

ಕಳೆದ 3-4 ಸೀಸನ್‌ಗಳಿಂದಲೂ ರಂಜನಿ ರಾಘವನ್ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನಲಾಗಿತ್ತು. ಹೋಗಿರಲಿಲ್ಲ. ಈ ಬಾರಿ ಕೂಡ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ಕನ್ನಡತಿ ಮೂಲಕ ಮನಗೆದ್ದ ಇವರು ಬಿಗ್ಬಾಸ್ ಮನೆಯಲ್ಲಿ ಇದ್ದರೆ ಚೆನ್ನಾಗಿ ಇರುತ್ತದೆ ಎಂಬ ಮಾತು ಕೇಳಿ ಬಂದಿತ್ತು.

ಕನ್ನಡತಿ ಧಾರಾವಾಹಿ ನಂತರ ರಂಜನಿ ರಾಘವನ್ ಅವರು ಸಿನಿಮಾಗಳ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ ಶೋಗೆ ಹೋಗುವ ಮನಸ್ಸು ಮಾಡಿಲ್ಲ ಎನಿಸುತ್ತದೆ. ನಾನು ಬಿಗ್ ಬಾಸ್​ಗೆ ಹೋಗುವ  ಅಲೋಚನೆ ಇಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ. ನನ್ನ ಕರಿಯರ್ ಪ್ಲಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಹೀಗೆಯೇ ಇರಲಿ ಎಂದು ರಂಜನಿ ರಾಘವನ್ ಕೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.