ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಕ್ ಖಾನ್ ಮಗಳ ಸುತ್ತಾಟ, ಶ್ರೀಘ್ರದಲ್ಲೇ ಗುಡ್ ನ್ಯೂಸ್

 | 
ರಗ

 ಸೆಲೆಬ್ರಿಟಿಗಳ ಮಕ್ಕಳು ಅಂದರೆ ಸಾಮಾನ್ಯವಾಗಿ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹೌದು ಅವರು ನಿಂತರೂ ಕೂತರೂ ಸುದ್ದಿಯಾಗುತ್ತದೆ.ಆದರೆ ಇದೀಗ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆರ್ಚೀಸ್ ಸಿನಿಮಾದ ನಟನೆ ಬಗ್ಗೆ ಕೆಲವರು ಸುಹಾನಾ ಅವರನ್ನು ಟ್ರೋಲ್ ಕೂಡ ಮಾಡಿದ್ದರು. ಇದೀಗ ಪ್ರೀತಿ ವಿಚಾರವಾಗಿ ಸುಹಾನಾ ಸುದ್ದಿಯಲ್ಲಿದ್ದಾರೆ.


ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಇಬ್ಬರ ಪ್ರೀತಿ ವಿಚಾರ ಮನೆಯವರಿಗೂ ತಿಳಿದಿದೆ. ಬಚ್ಚನ್ ಹಾಗೂ ಶಾರುಖ್ ಕುಟುಂಬ ಮಕ್ಕಳ ಪ್ರೀತಿಯನ್ನು ಒಪ್ಪೊಕೊಳ್ತಾರೆ ಎನ್ನವ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಶುರುವಾಗಿದೆ.ಇಬ್ಬರೂ ಸ್ಟಾರ್ ಮಕ್ಕಳು ನೆಟ್ಫ್ಲಿಕ್ಸ್ ನ ದಿ ಆರ್ಚೀಸ್ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ರಿಲೇಷನ್ ಶಿಪ್ ವಿಚಾರದಲ್ಲಿ ಬಹಳ ಗಂಭೀರವಾಗಿದ್ದಾರಂತೆ. ಇಬ್ಬರೂ ಈ ಸಿನಿಮಾ ಸೆಟ್​ನಲ್ಲಿ ಸ್ನೇಹಿತರಾಗಿದ್ದಾರೆ ಎನ್ನಲಾಗುತ್ತಿದೆ.


ಚಿತ್ರದ ಸೆಟ್​ಗಳಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಇಷ್ಟಪಡಲು ಪ್ರಾರಂಭಿಸಿದ್ದಾರೆ ಎಂದು ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ.ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ, ಅವಕಾಶ ಸಿಕ್ಕಾಗಲೆಲ್ಲಾ ಸೆಟ್ ನ ಯಾವುದೋ ಮೂಲೆಯಲ್ಲಿ ಕೂತ ಹರಟೆ ಹೊಡೆಯುತ್ತಿದ್ದರಂತೆ. ಸೆಟ್ ನಲ್ಲಿ ಶುರುವಾದ ಗೆಳೆತನ ಕೊಂಚ ಬೆಳೆದು ಸ್ವಲ್ಪ ಸಮಯದ ನಂತರ ಇಬ್ಬರೂ ಡಿನ್ನರ್ ಡೇಟ್ ಕೂಡ ಶುರು ಮಾಡಿದ್ದಾರಂತೆ.


ಸುಹಾನಾ ಖಾನ್ ಹಾಗು ಅಗಸ್ತ್ಯ ಸಂಬಂಧ ಸುದ್ದಿ ಕೇಳಿ ಎರಡೂ ಕುಟುಂಬಗಳು ಸಂತಸಗೊಂಡಿವೆಯಂತೆ. ಇಬ್ಬರೂ ಪರಸ್ಪರ ಗಂಭೀರವಾಗಿರುತ್ತಾರೆ ಎಂದು ಎರಡೂ ಕುಟುಂಬಗಳು ನಿರೀಕ್ಷಿಸಿರಲಿಲ್ಲ. ಆರಂಭದಲ್ಲಿ ಇದು ಅವರ ಫಸ್ಟ್ ಲವ್ ಆಗಿದೆ ಅಷ್ಟೇನು ಸೀರಿಯಸ್ ಆಗಿಲ್ಲ ಎಂದು ಎರಡೂ ಕುಟುಂಬಗಳು ಭಾವಿಸಿದ್ದರು. ಈ ಸಂಬಂಧ ಸಿನಿಮಾವರೆಗೆ ಮಾತ್ರ ಇರುತ್ತದೆ ಎಂದು ಭಾವಿಸಿದ್ದರು. ಆದರೆ ಇಬ್ಬರ ಪ್ರೀತಿ ಸ್ಟ್ರೀಮಿಂಗ್ ನಂತರವೂ ಮುಂದುವರೆದಿದೆ. ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.


ಈ ಸಂಬಂಧಕ್ಕೆ ಅಗಸ್ತ್ಯ ಅವರ ತಾಯಿ ಅಂದರೆ ಶ್ವೇತಾ ಬಚ್ಚನ್ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವರದಿಗಳಿವೆ. ಅಲ್ಲದೇ ಸುಹಾನಾ ಖಾನ್ ಜೊತೆ ಶ್ವೇತಾ ಕೂಡ ಒಳ್ಳೆಯ ಸಂಬಂಧ ಹೊಂದಿದ್ದಾರಂತೆ. ಕ್ರಿಸ್ ಮಸ್ ಸಂದರ್ಭದಲ್ಲಿ ಅಗಸ್ತ್ಯ, ಸುಹಾನಾ ಖಾನ್ ಅವರನ್ನು ಸೆಲೆಬ್ರೇಷನ್ ಗೆ ಕರೆದಿದ್ದರು. ಇನ್ನು ತಾನಿಯಾ ಶ್ರಾಫ್ ಅವರ ಹುಟ್ಟುಹಬ್ಬದಂದು ಅಗಸ್ತ್ಯ ಸುಹಾನಾ ಅವರನ್ನು ಕಾರಿನಲ್ಲಿ ಬಿಟ್ಟು ಫ್ಲೈಯಿಂಗ್ ಕಿಸ್ ಕೂಡ ನೀಡಿದ್ದರು. ಅದು ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಕೂಡ ಎಲ್ಲೆಡೆ ವೈರಲ್ ಆಗ್ತಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.