ಶಾರುಖ್ ಖಾನ್ ಡಂಕಿ ಸಿನಿಮಾದಿಂದ ಕಾಟೇರನಿಗೆ ದೊಡ್ಡ ಸೋಲು, ದರ್ಶನ್ ಬಿ.ಕ್ಕಿಬಿಕ್ಕಿ ಕಣ್ಣೀರು

 | 
He

ಸ್ಯಾಂಡಲ್‌ವುಡ್‌ನಲ್ಲಿ ಕಾಟೇರ ದರ್ಬಾರ್ ಜೋರಾಗಿದೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರ್ತಿದೆ. ಒಂದು ಬ್ಲಾಕ್‌ಬಸ್ಟರ್ ಹಿಟ್ ಮೂಲಕ 2023 ಸ್ಯಾಂಡಲ್‌ವುಡ್ ಗುಡ್‌ಬೈ ಹೇಳೊಕೆ ಕಾಯ್ತಿದೆ. ಮಂಡ್ಯದಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಥೀಮ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಈಗಾಗಲೇ ಕಾಟೇರ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಗಾಂಧಿನಗರದ ಅನುಪಮಾ ಹಾಗೂ ರಾಕ್‌ಲೈನ್ ಮಾಲ್‌ ಸೇರಿದಂತೆ ಹಲವೆಡೆ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ರಾಕ್‌ಲೈನ್‌ ಮಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಕಾಟೇರನ ದರ್ಶನವಾಗಲಿದೆ. ಇನ್ನು ಅನುಪಮಾ ಚಿತ್ರಮಂದಿರದಲ್ಲಿ ಸೂರ್ಯ ಹುಟ್ಟುವುದಕ್ಕು ಮುನ್ನ ಕಾಟೇರನ ಆರ್ಭಟ ಶುರುವಾಗಲಿದೆ.

ಮೂರ್ನಾಲ್ಕು ಶೋಗಳು ಈಗಾಗಲೇ ಸೋಲ್ಡ್‌ಔಟ್ ಆಗೋಗಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಆದರೆ ಕೆಜೆ ರಸ್ತೆಯ ಸಂತೋಷ್ ಹಾಗೂ ನರ್ತಕಿ ಚಿತ್ರಮಂದಿರದಲ್ಲಿ ಕಾಟೇರನ ದರ್ಶನವಾಗುತ್ತಿಲ್ಲ. ಇದು ಕೆಲ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನರ್ತಕಿ, ನಟ ದರ್ಶನ್ ಲಕ್ಕಿ ಥಿಯೇಟರ್ ಅಂತ್ಲೇ ಅಭಿಮಾನಿಗಳು ಭಾವಿಸಿದ್ದಾರೆ. ಅದೇ ಕಾಟೇರ ಚಿತ್ರದ ಮೇನ್ ಥಿಯೇಟರ್ ಆಗುತ್ತದೆ ಎನ್ನುವ ನಿರೀಕ್ಷೆಯಿತ್ತು. 

ಆದರೆ ಅಲ್ಲಿ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಪ್ರದರ್ಶನವಾಗುತ್ತಿರುವುದರಿಂದ ಕಾಟೇರ ಅನಿವಾರ್ಯವಾಗಿ ಅನುಪಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವಂತಾಗಿದೆ. ನರ್ತಕಿ ಚಿತ್ರಮಂದಿರ ಕಾಟೇರ ಚಿತ್ರಕ್ಕೆ ಸಿಗದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಂದು ವಾರದ ಬಳಿಕ ಸಲಾರ್ ಚಿತ್ರವನ್ನು ನರ್ತಕಿಯಿಂದ ತೆಗೆದು ಅನುಪಮಾದಲ್ಲಿ ಕಾಟೇರ ಸಿನಿಮಾ ಹಾಕುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 

ಕೆಜಿ ರಸ್ತೆಯ 3 ಥಿಯೇಟರ್‌ಗಳಲ್ಲಿ ಸಲಾರ್ ಸಿನಿಮಾ ಪ್ರದರ್ಶನವಾಗುತ್ತಿದೆ. ನರ್ತಕಿಯಲ್ಲಿ ಸಲಾರ್ ಕನ್ನಡ ವರ್ಷನ್, ಸಂತೋಷ್ ಚಿತ್ರಮಂದಿರದಲ್ಲಿ ತೆಲುಗು ಹಾಗೂ ಭೂಮಿಕಾ ಚಿತ್ರಮಂದಿರದಲ್ಲಿ ಹಿಂದಿ ವರ್ಷನ್ ಹಾಕಲಾಗಿದೆ. ಗಾಂಧಿನಗರದ ಮೂರು ಚಿತ್ರಮಂದಿರಗಳಲ್ಲಿ ಸಲಾರ್ ಪ್ರದರ್ಶಿಸುತ್ತಿರುವುದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಒಂದು ವಾರದ ಬಳಿಕ ಆದರೂ ನರ್ತಕಿ ಬಿಟ್ಟುಕೊಡಬಹುದಿತ್ತು. 

ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಕನ್ನಡ ಚಿತ್ರಕ್ಕೆ ಗಾಂಧಿನಗರದ ಥಿಯೇಟರ್ ಸಿಕ್ಕಿಲ್ಲ. ಬೇರೆ ಭಾಷೆಯ ಚಿತ್ರಕ್ಕೆ ಕೊಟ್ಟಿರೋದು ಸರಿಯಲ್ಲ, ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಥಿಯೇಟರ್ ಇಲ್ಲ ಕನ್ನಡಪರ ಹೋರಾಟಗಾರರು ಈಗ ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.