ಫಿನಾಲೆ ಸ್ಪರ್ಧಿ ಹನುಮಂತನಿಗೆ ದುಬಾರಿ ಗಿಫ್ಟ್ ಕೊಟ್ಟ ಶರಣ್ ಹಾಗೂ ಅದಿತಿ

 | 
Hj
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಫಿನಾಲೆಗೆ ಮೂರು ವಾರ ಇರುವಾಗಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಒಬ್ಬರಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯಲು ಟಾಸ್ಕ್‌ಗಳನ್ನು ನೀಡಲಾಗಿತ್ತು. ಭವ್ಯ, ತ್ರಿವಿಕ್ರಮ್, ರಜತ್ ಮತ್ತು ಹನುಮಂತು ಫಿನಾಲೆ ಟಾಸ್ಕ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು. 
ಶುಕ್ರವಾರ ಫಿನಾಲೆ ಟಿಕೆಟ್‌ಗಾಗಿ ನಡೆದ ಟಾಸ್ಕ್‌ ರೋಚಕವಾಗಿತ್ತು.ಭವ್ಯ, ತ್ರಿವಿಕ್ರಮ್, ರಜತ್ ಮತ್ತು ಹನುಮಂತು ಫಿನಾಲೆ ಟಿಕೆಟ್ ಪಡೆಯಲು ರೋಚಕ ಸ್ಪರ್ಧೆ ನಡೆಸಿದರು. ಹಗ್ಗದ ಮೇಲೆ ಹತ್ತಿ ಕೀಲಿಕೈ ತೆಗೆದುಕೊಂಡು, ಪೆಟ್ಟಿಗೆಯ ಬೀಗ ತೆಗೆದು ಅದರಲ್ಲಿದ್ದ ಬಿಗ್ ಬಾಸ್ ಬಾವುಟವನ್ನು ಮನೆಯ ಮೇಲೆ ಹತ್ತಿ ಹಾರಿಸುವುದು ಟಾಸ್ಕ್ ಆಗಿತ್ತು.
ಭವ್ಯ ಮೊದಲನೆ ಸ್ಪರ್ಧಿಯಾಗಿ ಉತ್ತಮವಾಗಿ ಆಡಿದರು ತಮ್ಮ ಟಾಸ್ಕ್ ಅನ್ನು 3.18 ನಿಮಿಷದಲ್ಲಿ ಮುಗಿಸಿದರು. ಎರಡನೇ ಸ್ಪರ್ಧಿಯಾಗಿ ಬಂದ ರಜತ್ ಟಾಸ್ಕ್ ಮುಗಿಸಲು 3.20 ನಿಮಿಷ ತೆಗೆದುಕೊಂಡರು. ಬಳಿಕ ಬಂದ ತ್ರಿವಿಕ್ರಮ್ 2 ನಿಮಿಷ 29 ಸೆಕೆಂಡ್‌ನಲ್ಲಿ ಟಾಸ್ಕ್ ಮುಗಿಸಿದರೆ, ಕೊನೆಯದಾಗಿ ಆಟವಾಡಿದ ಹನುಮಂತ 2 ನಿಮಿಷ 27 ಸೆಕೆಂಡ್‌ನಲ್ಲಿ ಆಟ ಮುಗಿಸಿದ್ದರು.
ಛೂ ಮಂತರ್ ಸಿನಿಮಾ ನಾಯಕ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಬಿಗ್ ಬಾಸ್ ಮನೆಗೆ ಬಂದು ಫಲಿತಾಂಶವನ್ನು ಘೋಷಿಸಿದರು. 2 ನಿಮಿಷ 27 ಸೆಕೆಂಡ್‌ನಲ್ಲಿ ಆಟ ಮುಗಿಸಿದ ಹನುಮಂತ ಫಿನಾಲೆ ಟಿಕೆಟ್ ಪಡೆದುಕೊಂಡರು. ತ್ರಿವಿಕ್ರಮ್ ರೋಚಕ ಪೈಪೋಟಿ ಕೊಟ್ಟರು 2 ಸೆಕೆಂಡ್‌ ಅಂತರದಲ್ಲಿ ಫಿನಾಲೆ ಟಿಕೆಟ್ ಪಡೆಯುವ ಅವಕಾಶ ಕಳೆದುಕೊಂಡರು. ನಾಯಕ ಶರಣ್ ಎಲ್ಲಾ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.