ಟೈಗರ್ ಪ್ರಭಾಕರ್ ಅವರ ನಾಲ್ಕನೇ ಪತ್ನಿ ಇವರೇ; ಎಷ್ಟು ಮುದ್ದಾಗಿದ್ದಾರೆ

 | 
Us

ಖ್ಯಾತ ಹಿರಿಯ ನಟಿ ಅಂಜು ಅವರು ತಮ್ಮ 4ನೇ ವಯಸ್ಸಿನಿಂದಲೂ ಕಲಾ ಪ್ರಪಂಚದಲ್ಲಿ ಪಯಣಿಸುತ್ತಿರುವ ಅತ್ಯಂತ ನಿಪುಣ ನಟಿ, ಪ್ರೇಕ್ಷಕರನ್ನು ತಮ್ಮ ನಟನಾ ಕೌಶಲ್ಯದಿಂದಲೇಲ್ಯದಿಂದಲೇ ಸೆಳೆದವರು.1975 ರಲ್ಲಿ ಜನಿಸಿದ ಖ್ಯಾತ ನಟಿ ಅಂಜು 1979 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಉತ್ರಿಪೂಕ್ಕಲ್ ಚಿತ್ರದ ಮೂಲಕ ಕಲಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. 

ಅಂಜು ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.ತಮಿಳು ಮಾತ್ರವಲ್ಲದೆ ಮಲಯಾಳಂ ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿರುವ ಅಂಜು ಅಂತಿಮವಾಗಿ 2013ರಲ್ಲಿ ತೆರೆಕಂಡ ತಮಿಳು ಚಿತ್ರ ಮಡಯನೈ ಕೂಟಂನಲ್ಲಿ ನಾಯಕಿಯಾಗಿ ನಟಿಸಿದ್ದರು. 

1996 ರಲ್ಲಿ, ಅಂಜು 19 ವರ್ಷದವಳಿದ್ದಾಗ, ಅವರು ಪ್ರಸಿದ್ಧ ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ವಿವಾಹವಾದರು. ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಪ್ರಭಾಕರ್‌ ಅವರಿಂದ ಬೇರ್ಪಟ್ಟರು. ನಟಿ ಅಂಜು ಮದುವೆಯಾದ ಒಂದು ವರ್ಷದಲ್ಲಿ ಪೋಷಕರ ಬಳಿಗೆ ಮರಳಿದರು. ಸಧ್ಯ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಅವರಿಗೆ ಅರ್ಜುನ್ ಪ್ರಭಾಕರ್ ಎಂಬ ಮಗನೂ ಇದ್ದಾನೆ.  

ಕೆಲ ವರ್ಷಗಳ ಹಿಂದೆ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದ, ನಟಿ ತಾವು 19 ವರ್ಷದವಳಿದ್ದಾಗ ಖ್ಯಾತ ನಟ ಟೈಗರ್ ಪ್ರಭಾಕರ್ ಅವರನ್ನು ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಪ್ರಭಾಕರ್‌ ಅವರನ್ನು ಮದುವೆಯಾದ ಸ್ವಲ್ಪ ದಿನಗಳ ನಂತರವಷ್ಟೇ ಈಗಾಗಲೇ ಅವರಿಗೆ ಮೂರು ಮದುವೆಯಾಗಿದ್ದು, ತನ್ನ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.  

ಹಾಗಾಗಿ ಮದುವೆಯಾಗಿ ಒಂದು ವರ್ಷದ ನಂತರ ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ ಅವನನ್ನು ಬಿಟ್ಟೆ. ಕೆಲವು ವರ್ಷಗಳ ನಂತರ ಅಂದ್ರೆ 2001 ರಲ್ಲಿ ಅವರ ಸಾವಿನ ಸುದ್ದಿ ನನಗೆ ತಿಳಿಯಿತು ಎಂದು ಅಂಜು ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.