ಮುಂಚೆಯೇ ಒಂದು ಮದುವೆ ಆಗಿತ್ತು ಆಕೆಗೆ, ಆದ್ರೂ ನಾನು ಮದುವೆಯಾದೆ; ಕಾರ್ತಿಕ್ ಮಹಡಿ

 | 
ಕಾರ್ತಿಕ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಯಾಗಿರುವ ನಿರೂಪಕಿ ಜಾಹ್ನವಿ ತಮ್ಮ ವೈವಾಹಿಕ ಜೀವನದ ಕುರಿತು ಮಾತನಾಡಿ, ಮಾಜಿ ಪತಿ ಕಾರ್ತಿಕ್ ಅವರ ಅಕ್ರಮ ಸಂಬಂಧದ ಕಾರಣ ವಿಚ್ಛೇದನ ನೀಡಿದ್ದಾಗಿ ಹೇಳಿಕೊಂಡಿದ್ದರು. ಈಗ ಅವರ ಮಾಜಿ ಪತಿ ಕಾರ್ತಿಕ್ ಕೋಪಗೊಂಡು, ಜಾಹ್ನವಿ ಸಿಂಪಥಿ ಗಿಟ್ಟಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ಸುದ್ದಿಯಲ್ಲಿದ್ದಾರೆ.

ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಕಾರ್ತಿಕ್ ಹೇಳಿದ್ದು, ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ನನ್ನ ಕೆಲಸ ಹೋದ ಬಳಿಕ ಜಾಹ್ನವಿ ವರ್ತನೆ ಸಂಪೂರ್ಣ ಬದಲಾಗಿದೆ. ಆಕೆ 60 ಸಾವಿರ ಸಂಬಳದಲ್ಲಿ 1.50 ಕೋಟಿಯ ಫ್ಲ್ಯಾಟ್ ತೀರಿಸಿದ್ದಾರೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.ತಮ್ಮ ಹಲ್ಲೆ ಆರೋಪದ ವಿಷಯಕ್ಕೂ ಪ್ರತಿಕ್ರಿಯಿಸಿರುವ ಅವರು, “ಹೌದು, ನಾನು ಕುಡಿದು ಬಂದು ಹೊಡೆದಿರುವುದು ನಿಜ. ಆದರೆ ಆಕೆ ಬೇರೊಬ್ಬ ಗಂಡಸಿನೊಂದಿಗೆ ಖಾಸಗಿ ಫೋಟೋ ಹಂಚಿಕೊಂಡಿದ್ದರಿಂದ ಕೋಪ ಬಂದಿತ್ತು” ಎಂದು ಒಪ್ಪಿಕೊಂಡಿದ್ದಾರೆ.

ಅವರು ಮುಂದುವರೆದು, “ಜಾಹ್ನವಿ ವಿಚ್ಛೇದನ ಆದ ನಂತರವೂ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ನಮ್ಮ ಕುಟುಂಬಕ್ಕೆ ತೊಂದರೆ ಉಂಟುಮಾಡುತ್ತಿವೆ. ಮಗನ ಖರ್ಚುಗಳಿಗೆ ನ್ಯಾಯಾಲಯ ಹೇಳಿದಂತೆ ಹಣ ಕೊಡುತ್ತಿದ್ದೇನೆ, ಆದರೆ ಆಕೆ ತಮ್ಮ ಪಾಡಿಗೆ ತಾವು ಇದ್ದರೆ ಒಳ್ಳೆಯದು” ಎಂದು ತಿಳಿಸಿದ್ದಾರೆ.ಕಾರ್ತಿಕ್ ಪ್ರಕಾರ, ಮದುವೆ ಮೊದಲು ಜಾಹ್ನವಿಗೆ ಸಿನಿಮಾ ಬೇಡ ಎಂದು ಷರತ್ತು ಹಾಕಿದ್ದರು. ಆದರೂ ಆಕೆ ಧಾರಾವಾಹಿ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸೇರಿದ್ದಾರಂತೆ. 

ನಾನು ಸ್ಥಿತಿವಂತ ಮನೆತನದವನು, ಆದರೆ ಆಕೆ ಪ್ಯಾಶನ್ ಹೆಸರಿನಲ್ಲಿ ಸಿನಿಮಾ ಲೋಕಕ್ಕೆ ಹೋದರು ಯಾರೊಂದಿಗೋ ತಿರುಗಿ ಬರುತ್ತಿದ್ದರು.ಪಾರ್ಟಿ ಮೋಜು ಮಸ್ತಿ ಎಂದು ಹೇಳಿ ನನ್ನ ಕಣ್ಣಿಗೆ ಮಣ್ಣೆರೆಚಿದ್ದಾರೆ ಎಂದು ಹೇಳಿದರು.ಕಾರ್ತಿಕ್ ಅವರ ಹಾಲಿ ಪತ್ನಿಯೂ ಸಹ ಪ್ರತಿಕ್ರಿಯಿಸಿದ್ದು, ನಾವು ಅವರ ಮದುವೆ ಮುರಿಯಲು ಕಾರಣ ಅಲ್ಲ. ಜಾಹ್ನವಿ ಸುಳ್ಳು ಹೇಳಿ ಸಿಂಪಥಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.