ಅನುಶ್ರೀಗೆ ಮೊಬೈಲ್ ನಂಬರ್ ಕೊಟ್ಟು ರಾತ್ರಿ ಮೆಸೇಜ್ ಮಾಡು ಎಂದಿದ್ದ ಖ್ಯಾ ತ ನ ಟ
ಕನ್ನಡದ ಪ್ರಖ್ಯಾತ ನಿರೂಪಕಿ, ನಟಿ ಅನುಶ್ರೀಗೆ, ಹಿರಿಯ ನಟ ಅಚ್ಯುತ್ ಕುಮಾರ್ ರಾತ್ರಿ ಮೆಸೇಜ್ ಮಾಡಿ ಅಂತಾ ನಂಬರ್ ಕೊಟ್ಟಿದ್ರಂತೆ. ಹೀಗೊಂದು ಹೇಳಿಕೆ ಕೇಳಿದಾಗ ಶಾಕ್ ಆಗೋದು ಗ್ಯಾರಂಟಿ. ಆದ್ರೆ ಇದು ಪಕ್ಕಾ ಪ್ರಾಂಕ್ ಕಾಲ್ ವಿಡಿಯೋ, ನಟ ಅಚ್ಯುತ್ ಅವರನ್ನು ಆ್ಯಂಕರ್ ಅನುಶ್ರೀ ಪ್ರಾಂಕ್ ಮಾಡಿರುವ ವಿಡಿಯೋ ಇದಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಯಾಂಡಲ್‌ವುಡ್ ನಟ ದಿಗಂತ್, ನಟ ಅಚ್ಯುತ್ ಅವರಿಗೆ ಕಾಲ್ ಮಾಡಿ, ಅಚ್ಯುತ್ ಅಣ್ಣಾ ಎನ್ನುತ್ತಾರೆ. ಆ ಕಡೆಯಿಂದ ಅಚ್ಯುತ್ ಅವರು ದಿಗಂತ್ ಅವ್ರೇ, ಹೇಳಿ, ಹೇಗಿದೀರಾ..? ಎನ್ನುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ದಿಗಂತ್ ಚೆನ್ನಾಗಿದೀನಿ, ನೀವು ಹೇಗಿದೀರಾ? ಎನ್ನುತ್ತಾ, ಇಲ್ಲಿ ಯಾರೋ ನಿಮಗೆ ಹಾಯ್ ಹೇಳ್ಬೇಕಂತೆ ನೋಡಿ.. ಎಂದು ಅನುಶ್ರೀಗೆ ಮೊಬೈಲ್ ಕೊಡುತ್ತಾರೆ.
ದಿಗಂತ್ ಮೊಬೈಲ್ ತೆಗೆದುಕೊಂಡ ಅನುಶ್ರೀ, ಹಾಯ್, ನಾನು ಬ್ಯಾಂಕಾಕ್‌ನಲ್ಲಿ ನಿಮಗೆ ಸಿಕ್ಕಿದ್ದೆ. ಬೆಂಗಳೂರಿನ ಹುಡುಗಿ ಅಂತ ಪರಿಚಯ ಮಾಡ್ಕೊಂಡಿದ್ದೆ. ನೀವು ಮಾತಾಡ್ಸಿ ನಿಮ್ಮ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂತ ಹೇಳಿದ್ರಿ ಎಂದು ಕಾಲೆಳೆಯುತ್ತಾರೆ. ಇದನ್ನು ಕೇಳಿದ ನಟ ಶಾಕ್ ಆಗಿ, ನೈಟಾ..? ಎಂದು ಕೇಳುತ್ತಾರೆ. ಅಷ್ಟರಲ್ಲಾಗಲೇ, ಅನುಶ್ರೀ ಪಕ್ಕದಲ್ಲಿದ್ದ ನಟ ದಗಿಂತ್, ಲೂಸ್ ಮಾದ ಯೋಗೇಶ್ ಹಾಗೂ ಇತರರು ಜೋರಾಗಿ ನಗುತ್ತಾರೆ.
ಅವರ ನಗು ಕೇಳಿದ ನಟ ಅಚ್ಯುತ್, ಹಲೋ, ನಿಮ್ಮ ವಾಯ್ಸ್ ಗೊತ್ತಾಗುತ್ತಿಲ್ಲ.. ನೀವು ಯಾವ್ ಚಾನೆಲ್ʼನವರು ಎಂದು ಮುಗ್ಧರಂತೆ ಕೇಳುತ್ತಾರೆ. ದಿಗಂತ್ ಮೊಬೈಲ್ʼನಿಂದ ಆ್ಯಂಕರ್ ಅನುಶ್ರೀ ಮಾಡಿದ್ದ ಪ್ರಾಂಕ್ ಕಾಲ್ʼಗೆ ನಟ ಅಚ್ಯುತ್ ಸುಸ್ತಾಗಿದ್ದರು. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.