ಅವರಿವರ ಮಾತು ಕೇಳಿ ಎರಡನೇ ಮದುವೆಯಾದ ಶಿಖರ್ ಧವನ್
Jan 6, 2025, 14:16 IST
|
ಕಾಲ ಬದಲಾಗಿದೆ. ಎಲ್ಲವೂ AI ಮಯ. ಹೌದು ತಂತ್ರಜ್ಞಾನಗಳು ಮುಂದುವರೆದಿದೆ. ಅದಕ್ಕೆ ತಕ್ಕ ಹಾಗೆ ಜನ ಕೂಡ ಬದಲಾಗಿದ್ದಾರೆ. ಮಹಮದ್ ಶಮಿ ಹಾಗೂ ಸಾನಿಯಾ ಮಿರ್ಜಾ ಅವರ ಫೋಟೊ ವೈರಲ್ ಆದಂತೆ ಇದೀಗ ಶಿಖರ್ ಧವನ್ ಮತ್ತು ಹುಮಾ ಖುರೇಷಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳ ಹಿಂದಿನ ಸತ್ಯವನ್ನು ತಿಳಿಯಲು ನೆಟಿಜನ್‌ಗಳು ಕಾತರರಾಗಿದ್ದಾರೆ.
ಅಷ್ಟಕ್ಕೂ ಶಿಖರ್ ಮತ್ತು ಹುಮಾ ಸಂಬಂಧದ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಹೌದು ಕ್ರಿಕೆಟಿಗ ಶಿಖರ್ ಧವನ್ ಮತ್ತು ನಟಿ ಹುಮಾ ಖುರೇಷಿ ಮದುವೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಇವರಿಬ್ಬರ ಮದುವೆ ಫೋಟೋಗಳು ಕೂಡ ವೈರಲ್ ಆಗಿವೆ. ಈ ವೈರಲ್ ಫೋಟೋಗಳಲ್ಲಿ, ಶಿಖರ್ ಮತ್ತು ಹುಮಾ ಮದುವೆಯಾಗಿದ್ದಾರೆ.
ಕೆಲ ಫೋಟೊಗಳಲ್ಲಿ ಶಿಖರ್ ಮತ್ತು ಹುಮಾ ವಧು-ವರರ ಉಡುಪಿನಲ್ಲಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮದುವೆ ಫೋಟೋ ನೋಡಿ ನೆಟ್ಟಿಗರ ಮನದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಶಿಖರ್ ಮತ್ತು ಹುಮಾ ಯಾವಾಗ ಒಟ್ಟಿಗೆ ಸೇರಿದರು ಎಂದು ಅಭಿಮಾನಿಗಳು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ಆದರೆ ನಿಜವಾಗಿಯೂ ಇವರಿಬ್ಬರ ನಡುವೆ ಪ್ರೀತಿ ಹೋಗಲಿ ಸ್ನೇಹ ಕೂಡ ಇಲ್ಲ.ಶಿಖರ್ ಧವನ್ ಮತ್ತು ಹುಮಾ ಖುರೇಷಿ ಅವರ ಈ ಫೋಟೋಗಳು ಸಂಪೂರ್ಣವಾಗಿ ನಕಲಿ. ಇಬ್ಬರ ಫೋಟೋಗಳನ್ನು AI ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಎಡಿಟ್ ಮಾಡಲಾಗಿದೆ. ಇಂದಿನ AI ಯುಗದಲ್ಲಿ, ಏನು ಬೇಕಾದರೂ ಸಾಧ್ಯ ಎಂಬುದು ಶಿಖರ್-ಹುಮಾ ಅವರ ಫೋಟೋಗಳಿಂದ ಸ್ಪಷ್ಟವಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.