ಎರಡನೇ ಮದುವೆ ಆಗಲಿರುವ ಶಿಖರ್ ಧವನ್; ಹುಡುಗಿ ಮಾತ್ರ ಬೆಣ್ಣೆ

 | 
Hu

ಶಿಖರ್ ಧವನ್ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಹೌದು ಭಾರತದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಹಿರಿಯ ಆಟಗಾರ್ತಿ ಮತ್ತು ಟೀಂ ಇಂಡಿಯಾ ವನಿತಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಧವನ್ ಮದುವೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು ಎಂದು ಹೇಳಿದ್ದಾರೆ.

ಮಿಥಾಲಿ ರಾಜ್ ರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರು. ಇನ್ನು ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ. 2022ರ ವಿಶ್ವಕಪ್‌’ನಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಕೊನೆಯ ಬಾರಿಗೆ ಭಾರತ ಪರ ಜೆರ್ಸಿ ಧರಿಸಿದ್ದರು.

ಪ್ರಸ್ತುತ, ಮಿಥಾಲಿ ರಾಜ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ  ಗುಜರಾತ್ ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ಮತ್ತೊಂದೆಡೆ, ಧವನ್ ಇತ್ತೀಚೆಗೆ ಐಪಿಎಲ್ 2024 ರಲ್ಲಿ ಪಿಬಿಕೆಎಸ್  ಪರ ಆಡಿದ್ದರು. ಜಿಯೋ ಸಿನಿಮಾದ ಧವನ್ ಕರೆಂಗೆ ಕಾರ್ಯಕ್ರಮದ ಸಂದರ್ಶನದಲ್ಲಿ ಧವನ್ ಮಿಥಾಲಿ ಜೊತೆಗಿನ ವದಂತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.

ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗುತ್ತೇನೆ ಎಂಬ ವದಂತಿ ಹಬ್ಬಿತ್ತು ಎಂದು ಧವನ್ ಹೇಳಿದ್ದಾರೆ. ಇದನ್ನು ಕೇಳಿ, ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಬಂದಿದ್ದ ಮಿಥಾಲಿ ಕೂಡ ಜೋರಾಗಿ ನಕ್ಕಿದ್ದಾರೆ. ಇನ್ನೊಂದೆಡೆ ಕಾರ್ಯಕ್ರಮದ ವೇಳೆ ಶಿಖರ್ ಧವನ್ ರಿಷಬ್ ಪಂತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಅವರು ತಮ್ಮನ್ನು ತಾವು ನಿಭಾಯಿಸಿದ ರೀತಿಯನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. 

ಐಪಿಎಲ್‌ನಲ್ಲಿ ಕಂಬ್ಯಾಕ್ ಮಾಡಿ ಆಡಿದ ರೀತಿ ಮತ್ತು ಭಾರತ ತಂಡದಲ್ಲಿ ಸ್ಥಾನ ಪಡೆದ ರೀತಿ, ಇದು ನಂಬಲಾಗದ ಮತ್ತು ಅದ್ಭುತವಾಗಿದೆ. ನಾನು ಅವರ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.