ರವಿಚಂದ್ರನ್ ಕರೆದಾಗೆಲ್ಲ ಶಿಲ್ಪಾ ಶೆಟ್ಟಿ ಬರಬೇಕಿತ್ತು, ಹಳೆ ವಿಚಾರ ಹಂಚಿಕೊಂಡ ಬಾಲಿವುಡ್ ಶಿಲ್ಪಾ
Apr 11, 2025, 21:22 IST
|

ಪ್ರೇಮಲೋಕದ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದ್ದಲ್ಲಿ ಕ್ರೇಜಿಲೋಕ ಸೃಷ್ಟಿಯಾಗೋದ್ರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಕ್ರೇಜಿಸ್ಟಾರ್ ಅನ್ನೋ ಬಿರುದು ಎವರ್‌ಗ್ರೀನ್ ಆಗಿ ಉಳಿದುಕೊಂಡಿದೆ. ರವಿಚಂದ್ರನ್ ಅವರ ಜೊತೆ ನಟಿಸೋಕೆ ಇವತ್ತಿಗೂ ನಟಿಯರು ಕಾದು ಕುಳಿತಿದ್ದಾರೆ. ಅಂತದರಲ್ಲಿ ಮೊದ ಮೊದಲು ಕರಾವಳಿ ಬೆಡಗಿ ಶೆಲ್ಪಾ ಶೆಟ್ಟಿ ಅವರೊಂದಿನ ಶೂಟಿಂಗ್ ಅನುಭವದ ಒಂದು ಫನ್ನಿ ಇನ್ಸಿಡೆಂಟ್ ಅನ್ನು ರವಿಚಂದ್ರನ್ ಇದೀಗ ನೆನಪಿಸಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶಿಸಿದ ಪ್ರೀತ್ಸೋದ್ ತಪ್ಪಾ ಅಂದಿನ ಕಾಲಕ್ಕೆ ಸೂಪರ್ ಡೂಪರ್ ಹಿಟ್ ಸಿನಿಮಾ. ಕರಾವಳಿ ಬೆಡಗಿಯನ್ನು, ಕ್ರೇಜಿಸ್ಟಾರ್ ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರೀಗೆ ಪರಿಚಯಿಸಿದ್ದರು. ಆನ್‌ಸ್ಕ್ರೀನ್‌ನಲ್ಲಿ ಇವರಿಬ್ಬರ ಕೆಮಿಸ್ಟ್ರೀ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಆದರೆ ಶೂಟಿಂಗ್ ಸಮಯದಲ್ಲಿ ಶಿಲ್ಪಾ ಶೆಟ್ಟಿ ಅವರು ರವಿಚಂದ್ರನ್ ಅವರೊಟ್ಟಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬ ಫನ್ನಿ ಇನ್ಸಿಡೆಂಟ್ ಅನ್ನು ರವಿಚಂದ್ರನ್ ಅವರು ಇದೀಗ ರಿವೀಲ್ ಮಾಡಿದ್ದಾರೆ.
ನಟ ರವಿಚಂದ್ರನ್ ಅವರು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ತೀರ್ಪುಗಾರರಾಗಿದ್ದಾರೆ. ಇವರೊಟ್ಟಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಜಡ್ಜ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ವಾರ ವೇದಿಕೆ ಮೇಲೆ ರಚಿತಾ ರಾಮ್ ಮತ್ತು ರವಿಚಂದ್ರನ್ ಅವರನ್ನು ವೇದಿಕೆಗೆ ನಿರೂಪಕ ನಿರಂಜನ್ ದೇಶಪಾಂಡೆ ಬರಮಾಡಿಕೊಂಡಿದ್ದಾರೆ. ಇಷ್ಟು ದಿನ ಬ್ಯಾಚುಲರ್ಸ್‌ಗೆ ಟಾಸ್ಕ್ ಕೊಡುತ್ತಿದ್ದ ಜಡ್ಜ್‌ಗಳಿಗೆ ನಿರಂಜನ್ ಇದೀಗ ಸಿಂಪಲ್ ಟಾಸ್ಕ್ ನೀಡಿದ್ದಾರೆ.
ಇದೇ ವೇಳೆ, ಆ ಕೆಮಿಸ್ಟ್ರೀ ಅನ್ನೋ ಒಂದು ಪಾಠಕ್ಕೆ ಪ್ರೊಫೆಸರ್ ಆಗಿರುವ ರವಿ ಸರ್, ನಿಮಗೆ ಯಾರ ಜೊತೆಗೆ ಬೆಸ್ಟ್ ಆನ್‌ಸ್ಕ್ರೀನ್ ಕೆಮಿಸ್ಟ್ರೀ ಇದೆ. ಖಂಡಿತವಾಗಿಯೂ ಮೂರು ಆಯ್ಕೆಗಳಂತೂ ಇದ್ದೇ ಇರುತ್ತೆ, ಅದರಲ್ಲಿ ಟಾಪ್ ಮೂರು ಆಯ್ಕೆ ಯಾರು ಎಂದು ನಿರಂಜನ್ ದೇಶಪಾಂಡೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕ್ರೇಜಿಸ್ಟಾರ್, ಮೊದಲು ಖುಷ್ಬೂ, ಸೆಕೆಂಡ್ ಮೀನಾ, ನಂತರ ಶಿಲ್ಪಾ ಶೆಟ್ಟಿಯೂ ಹೌದು.
ಡ್ಯಾನ್ಸ್ ಮಾಡುವಾಗ ಹೀಗೆ ಕೈ ಎಳೆದ ತಕ್ಷಣ ಬರ್ತಿದ್ರಾ ಸರ್ ಎಂಬ ನಿರಂಜನ್ ಪ್ರಶ್ನೆಗೆ, ಮೊದಲು ಒಂದು ವಾರ ಬರಲಿಲ್ಲ. ಆಮೇಲೆ ಗೊತ್ತಾಯ್ತು ರವಿಚಂದ್ರನ್ ಏನು ಅಂತ ಎಂದು ಪ್ರೀತ್ಸೋದ್ ತಪ್ಪಾ ಸಿನಿಮಾದ ಶೂಟಿಂಗ್ ಅನುಭವವನ್ನು ಕ್ರೇಜಿಸ್ಟಾರ್ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.