ಶಿಲ್ಪಾ ಶೆಟ್ಟಿ ತಂ ಗಿಗೆ ವಿಚಿತ್ರ ಖಾಯಿಲೆ; ಬೆ ಚ್ಚಿಬಿದ್ದ ಕನ್ನಡಿಗರು

 | 
Yu

ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಯ ಬೆಡ್‌ ಮೇಲೆ ಕುಳಿತುಕೊಂಡೇ ವಿಡಿಯೋವನ್ನು ಶಮಿತಾ ಶೆಟ್ಟಿ ಶೇರ್‌ ಮಾಡಿಕೊಂಡಿದ್ದು ಮಹಿಳೆಯರು ಈ ಕಾಯಿಲೆಯ ಬಗ್ಗೆ ಬಹಳ ಎಚ್ಚರಿಕೆಯಲ್ಲಿರುವಂತೆ ಸಲಹೆ ನೀಡಿದ್ದಾರೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಆಕ್ಟೀವ್‌ ಇದ್ದಾರೆ. 

ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.ಇತ್ತೀಚೆಗೆ ಶಮಿತಾ ಶೆಟ್ಟಿ ತಮ್ಮ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಆಕೆಯ ಬಗ್ಗೆ ಚಿಂತಿತರಾಗಿದ್ದಾರೆ. 

ಈ ವಿಡಿಯೋದಲ್ಲಿ ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್‌ ಮೇಲೆ ಕುಳಿತುಕೊಂಡಿದ್ದು, ಅದರೊಂದಿಗೆ ಎಲ್ಲಾ ಮಹಿಳೆಯರಿಗೂ ತಮಗೆ ಆಗಿರುವ ಗಂಭೀರ ಕಾಯಿಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ಆಗಿದ್ದೇನೆಂದರೆ, ನಟಿ ಕೂಡ ಆಗಿರುವ ಶಮಿತಾ ಶೆಟ್ಟಿ ಎಂಡೊಮೆಟ್ರಿಯೊಸಿಸ್ ಎನ್ನು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯ ಬಗ್ಗೆ ತಮಗೇ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

https://youtube.com/shorts/QlFvLwK17gA?si=IbhidLKYqjbeBguP

ಇದೇ ಕಾರಣಕ್ಕಾಗಿ ಎಂಡೊಮೆಟ್ರಿಯೊಸಿಸ್ ಎನ್ನುವ ಕಾಯಿಲೆಯ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು. ಅದರ ಲಕ್ಷಣಗಳನ್ನು ಅರಿತುಕೊಂಡರೆ ಸಹಾಯವಾಗುತ್ತದೆ ಎಂದಿದ್ದಾರೆ. ಎಂಡೊಮೆಟ್ರಿಯೊಸಿಸ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. 

ಇದು ತೀವ್ರವಾದ Pelvic  ನೋವನ್ನು ಉಂಟುಮಾಡುತ್ತದೆ ಮತ್ತು ಗರ್ಭಧರಿಸಲು ಕಷ್ಟವಾಗುತ್ತದೆ. ಇಂದು ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯೇ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ ಎಂದು ಶಮಿತಾ ಶೆಟ್ಟಿ ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.