ಕಾಟೇರ ಸಿನಿಮಾ ನೋಡಿ ಶಾ ಕ್ ಆದ ಶಿವಣ್ಣ ಗೀತಕ್ಕ, ದಶ೯ನ್ ಬಗ್ಗೆ ಹಾಡಿ ಹೊಗಳಿದ ದಂಪತಿ

 | 
Hd

ಸ್ಯಾಂಡಲ್‌ವುಡ್‌ನಲ್ಲಿ ಕಾಟೇರನ ದರ್ಬಾರ್ ಇನ್ನು ಕಮ್ಮಿ ಆಗಿಲ್ಲ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಗಳಿಕೆ  100 ಕೋಟಿ ರೂಪಾಯಿ ತಲುಪುವ ಸುಳಿವು ಸಿಗುತ್ತಿದೆ. ಸೋಮವಾರ, ಮಂಗಳವಾರವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಕಾಟೇರನಿಗಾಗಿ ಚಂದನವನದ ತಾರೆಯರು ಒಂದಾಗುತ್ತಿದ್ದಾರೆ.

ಈಗಾಗಲೇ ಚಿತ್ರ ವೀಕ್ಷಿಸಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ದರ್ಶನ್ ಸಿನೆಮಾವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಅವರ ಪತ್ನಿ ಗೀತಕ್ಕ ಕೂಡ ದರ್ಶನ್ ನಟನೆಗೆ ಮಾರು ಹೋಗಿದ್ದಾರೆ.ಕಾಟೇರ ಚಿತ್ರದ ಗ್ರ್ಯಾಂಡ್ ಸೆಲೆಬ್ರೆಟಿ ಶೋಗೆ ವೇದಿಕೆ ಸಿದ್ಧವಾಗಿತ್ತು. ನಗರದ ಒರಾಯನ್‌ ಮಾಲ್‌ನಲ್ಲಿ  6 ಗಂಟೆಗೆ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿತ್ತು. ಚಿತ್ರರಂಗದ ಹಲವರನ್ನು ಸಿನಿಮಾ ವೀಕ್ಷಿಸಲು ಆಹ್ವಾನಿಸಲಾಗಿತ್ತು. ಖುದ್ದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದ ನಟ, ನಟಿಯರು ಹಾಗೂ ತಂತ್ರಜ್ಞರನ್ನು ಆಹ್ವಾನಿಸಿದ್ದರು.

ಕಾಟೇರನ ಆರ್ಭಟವನ್ನು ಕಣ್ತುಂಬಿಕೊಳ್ಳಲು ಹಲವರು ಉತ್ಸುಕರಾಗಿದ್ದು ಸಿನಿಮಾ ನೋಡಲು ಬರುವುದಾಗಿ ಹೇಳಿದ್ದಾರೆ. ಕೆಲವರು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗುತ್ತಿಲ್ಲ, ಚಿತ್ರಕ್ಕೆ ಶುಭವಾಗಲಿ ಎಂದು ತಿಳಿಸಿರುವುದಾಗಿ ಹೇಳಲಾಗ್ತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಸಂಸದೆ ಸುಮಲತಾ ಅಂಬರೀಶ್, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ರಚಿತಾ ರಾಮ್, ಅಜಯ್ ರಾವ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವರಿಗೆ ಸೆಲೆಬ್ರೆಟಿ ಶೋಗೆ ಆಹ್ವಾನ ನೀಡಿದ್ದರರು ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

ಇನ್ನು ಕಾಟೇರಾ ಸಿನಿಮಾ ವೀಕ್ಷಿಸಿ ನಾನೇನಾದರೂ ರಾಜಕೀಯ ಎಂಟ್ರಿ ಕೊಟ್ಟ ಉನ್ನತ ಸ್ಥಾನಕ್ಕೆ ಹೋದರೆ, ಮೊದಲು ನಾನು ಮಾಡೋದು ಎಲ್ಲ ಅಧಿಕಾರಿಗಳನ್ನು ಕರೆಸುತ್ತೇನೆ. ಒಳ್ಳೆ ಮನಸ್ಸಿನಿಂದ ಕೆಲಸ ಮಾಡಬೇಕು, ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು ಎನ್ನುತ್ತೇನೆ ಎಂದಿದ್ದಾರೆ. ಇಡೀ ವ್ಯವಸ್ಥೆಯನ್ನು ಮೊದಲು ಬದಲಿಸುತ್ತೇನೆ. ಮೊದಲು ಪೊಲೀಸ್ ಇಲಾಖೆ ಸಮಾಜಕ್ಕೆ ರಕ್ಷಣಾ ಕವಚ. ಅದು ಸರಿಯಾದರೆ ಎಲ್ಲವೂ ಸರಿಯಾಗುತ್ತೆ. ಅದೇ ಕೀಲಿಕೈ. ಪೊಲೀಸ್ ಇಲಾಖೆ ಕೊಂಚ ಸ್ಟ್ರಿಕ್ಟ್ ಆದ್ರೆ ಉಳಿದದ್ದೆಲ್ಲಾ ತಾನಾಗಿಯೇ ಬದಲಾಗುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.