ಆಸ್ಪತ್ರೆಯಲ್ಲಿರುವ ಶಿವಣ್ಣನ ಆರೋಗ್ಯದಲ್ಲಿ ತೀರಾ ಏರುಪೇರು; ಓಡೋಡಿ ಬಂದ ದರ್ಶನ್ ಯಶ್ ಸುದೀಪ್

 | 
೬೭

ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿರುವ ಕಾರಣದಿಂದಸ್ಯಾಂಡಲ್‌ವುಡ್‌ ಹಿರಿಯ ನಟ ಡಾ.ಶಿವರಾಜ್‌ಕುಮಾರ್‌ ಅವರ ಆರೋಗ್ಯ ಏರುಪೇರಾಗಿದೆ. ಸದ್ಯ ತಪಾಸಣೆಗೆಂದು ಬೆಂಗಳೂರಿನಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದು, ಚುನಾವಣಾ ಪ್ರಚಾರ ಕಾರ್ಯ, ಚಿತ್ರೀಕರಣ ಓಡಾಟದಿಂದ ಆಯಾಸವಾಗಿರಬಹುದು ಎನ್ನಲಾಗಿದೆ.

ಪತ್ನಿ ಗೀತಾಳ ಜೊತೆ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್ ಗೆ ಬಿಸಿಲಿನ ಬೇಗೆಗೆ ಆಯಾಸ ಉಂಟಾಗಿ ಅನಾರೋಗ್ಯ ಉಂಟಾಗಿದೆ ಎಂದು ಈಗಾಗಲೇ ಡಾಕ್ಟರ್ ಹೇಳಿಕೆ ನೀಡಿದ್ದು ಅನಾವಶ್ಯಕ ಚಿಂತೆ ಮಾಡದಿರುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ಗೀತಾ ಅವರಿಗೆ ಸಹ ಶಿವಣ್ಣಗೆ ರೆಸ್ಟ್ ನೀಡಲು ಮರೆಯಬೇಡಿ ಎಂದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ದೊಡ್ಮನೆ ಕುಟಂಬದ ಕುಡಿ ಪುನಿತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಚಿಂತೆಯಲ್ಲಿರುವ ದೊಡ್ಮನೆ ಕುಟುಂಬಕ್ಕೆ ಶಿವಣ್ಣ ನ ಅನಾರೋಗ್ಯ ಚಿಂತೆಗೀಡು ಮಾಡಿತ್ತು. ನಟಿ ತಾರಾ, ಗುರುದತ್ತ, ಸುಧಾರಾಣಿ ಸೇರಿದಂತೆ ಹಲವರು ಜನ ಅಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ಕೆಡಿಸಿಕೊಳ್ಳಬೇಡ ಎಂದು ಸಲಹೆ ನೀಡಿದ್ದಾರೆ.

ನಟನಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲ. ಆಯಾಸದ ಹಿನ್ನೆಲೆ ಜನರಲ್ ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಆದರೂ ಕೂಡ ಅಭಿಮಾನಿಗಳ ಮನದಲ್ಲಿ ಆತಂಕ ಎದುರಾಗಿದೆ. ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.