ತೆಲುಗಿನಲ್ಲಿ ಹೊಸ ಅಲೆ ಸೃಷ್ಟಿ ಮಾಡಿ ಕನ್ನಡದ ಬಿಗ್ ಬಾಸ್ ಗೆ ನೇರ ಆಯ್ಕೆ ‌ಆದ ಶೋಭಾ ಶೆಟ್ಟಿ

 | 
Hs
ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗಾಗಲೇ ಒಂದು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ವೈಲ್ಡ್ ಕಾರ್ಡ್ ಮೂಲಕ ಬಂದ ಹನುಮಂತು ಒಳ್ಳೆ ಆಟ ಆಡುತ್ತಿದ್ದಾರೆ. ಲಾಯರ್ ಜಗದೀಶ್ ಮತ್ತು ರಂಜಿತ್ ನಿಯಮ ಮುರಿದು ಹೊರ ಹೋದ ಕಾರಣಕ್ಕೆ ವೈಲ್ಡ್ ಕಾರ್ಡ್ ಮೂಲಕ ಹನುಮಂತು ಅನ್ನು ಒಳಗೆ ಕರೆದುಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ಇಬ್ಬರು ಸೆಲೆಬ್ರಿಟಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್​ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ.
ಶೋಭಾ ಶೆಟ್ಟಿ ಮತ್ತು ರಂಜಿತ್ ಅವರುಗಳು ಈ ಬಾರಿ ವೈಲ್ಡ್ ಕಾರ್ಡ್​ ಮೂಲಕ ಬಿಗ್​ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದಹಾಗೆ ಈ ಶೋಭಾ ಶೆಟ್ಟಿಗೆ ಬಿಗ್​ಬಾಸ್ ಹೊಸದೇನೂ ಅಲ್ಲ. ಈ ಹಿಂದೆ ತೆಲುಗು ಬಿಗ್​ಬಾಸ್ ಸೀಸನ್ 07 ರಲ್ಲಿ ಶೋಭಾ ಶೆಟ್ಟಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಕಿರಿಕಿರಿಗಳಿಂದಾಗಿಯೇ ಜನಪ್ರಿಯ ಆಗಿದ್ದರು ಶೋಭಾ ಶೆಟ್ಟಿ.
ಶೋಭಾ ಶೆಟ್ಟಿ ನಟಿಯಾಗಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ವ್ಲಾಗರ್ ಸಹ ಆಗಿರುವ ಶೋಭಾ ಶೆಟ್ಟಿ ಯೂಟ್ಯೂಬ್ ಚಾನೆಲ್ ಹೊಂದಿದ್ದು ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ವಿಡಿಯೋ ಮಾಡಿ ವ್ಲಾಗ್ ರೂಪದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುತ್ತಿರುವ ರಂಜಿತ್ ಸಹ ನಟರಾಗಿದ್ದು, ಕಿರುತೆರೆ ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಈ ಸೀಸನ್​ನಲ್ಲಿ ಹನುಮಂತು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಮನೆ ಪ್ರವೇಶಿಸಿದ್ದಾರೆ. ಚೆನ್ನಾಗಿ ಆಟ ಆಡುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಅವಿನಾಶ್ ಮತ್ತು ಪವಿ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಇಬ್ಬರೂ ಆರಂಭದಲ್ಲಿ ಭರವಸೆ ಮೂಡಿಸಿದ್ದರಾದರೂ ಅಷ್ಟೇನೂ ಚೆನ್ನಾಗಿ ಆಡಲಿಲ್ಲ. ಇಬ್ಬರೂ ಸಹ ಬಂದಷ್ಟೆ ವೇಗವಾಗಿ ಮನೆಯಿಂದ ಎಲಿಮಿನೇಟ್ ಆದರು. ಈಗ ಬರಲಿರುವ ಶೋಭಾ ಶೆಟ್ಟಿ ಹಾಗೂ ರಂಜಿತ್ ಕತೆ ಏನಾಗಲಿದೆ ಕಾದು ನೋಡಬೇಕಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.