ಸೌಜನ್ಯ ಪರ ಹೋರಾಟಗಾರ ತಿಮರೋಡಿ ವಿರುದ್ಧ ಕೇಳಿ ಬಂತು ಬೆಚ್ಚಿಬೀಳುವ ಸುದ್ದಿ

 | 
Bx

2012 ರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಒಬ್ಬಾತನನ್ನು ಖುಲಾಸೆಗೊಳಿಸಿದೆ. ಈ ತೀರ್ಪು ಹಲವು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹತ್ಯೆಯನ್ನು ಪ್ರತಿಭಟಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಸಿಐಟಿಯು, ಅಲ್ಲದೇ ಇನ್ನೂ ಹಲವಾರು ನಾಗರಿಕ ಸಂಘಟನೆಗಳು ಚಳುವಳಿ ನಡೆಸಿದ್ದವು. 

ನಿಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಿರಂತರ ಹೋರಾಟದ ಒತ್ತಡ ಹೆಚ್ಚಿದ ಬಳಿಕ ಮಾನಸಿಕ ಅಸ್ವಸ್ತ ಎನ್ನಲಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಆರೋಪಿ ಎಂದು ಪೋಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಆದರೆ ಈ ವ್ಯಕ್ತಿ ಕೃತ್ಯ ಆ ಎಸಗಿದ್ದಾನೆ ಎಂಬುದನ್ನು ಹೋರಾಟ ನಡೆಸುತ್ತಿದ್ದ ಸಂಘಟನೆಗಳು, ಸೌಜನ್ಯಾಳ ಕುಟುಂಬ ಒಪ್ಪಿಯೇ ಇರಲಿಲ್ಲ. 

ಅಂದೇ ಸೂಕ್ತ ಸುಳಿವು ಮತ್ತು ಸ್ಪಷ್ಟ ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಕ್ಕಾಗಿ ನಡೆವ ಈ ಹೋರಾಟವನ್ನು ಹೋರಾಟವನ್ನು ಬೆಂಬಲಿಸಿ ಎಂದು ಜನರ ನಡುವೆ ಹೋದಾಗ ಸಾಮಾನ್ಯ ಜನರು ಪ್ರಭಾವಿ ಗಳತ್ತಲೇ ಬೊಟ್ಟು ಮಾಡಿದ್ದರು. ಪ್ರಕರಣದ ವಿವರಗಳು ಅಪರಾಧಿಗಳತ್ತ ತಪ್ಪಿಸಿಕೊಂಡು ಹೋದ ಜಾಡನ್ನು ತೋರುತ್ತಿದ್ದವು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸಂಬಂಧಿಗಳತ್ತ ಆರೋಪದ ಮುಳ್ಳಿತ್ತು. 

ಆದರೆ ಅಂದು ವಿಶೇಷ ತನಿಖೆ ನಡೆಸುತ್ತಿದ್ದ ಸಿಐಡಿ ಇಲಾಖೆ ಹೆಗ್ಗಡೆಯವರ ಕುಟುಂಬದ ಸದಸ್ಯರುಗಳಿಗೆ ಕ್ಲೀನ್ ಚಿಟ್ ನೀಡಿ ಬಿಟ್ಟಿತು. ಪ್ರಮುಖ ಆರೋಪಿತ ಹರ್ಷೇಂದ್ರ ಕುಮಾರ್ ಅವರ ಮಗ ನಿಶ್ಚಲ್ ಜೈನ್ ಹೆಸರು, ಆತನ ಬಾಗಿತ್ವದ ಬಗ್ಗೆ ಹೋರಾಟಗಾರರು ಪ್ರಬಲವಾಗಿ ಪ್ರಸ್ತಾಪಿಸಿದ್ದರು. ನಿಶ್ಚಲ್ ಜೈನ್ ಆ ಕೃತ್ಯ ನಡೆದ ದಿನ ಈ ದೇಶದಲ್ಲಿಯೇ ಇರಲಿಲ್ಲ ಎಂದು ಸಿಐಡಿ ಪೊಲೀಸರು ಹೇಳಿದ್ದರು. 

ಮಾತ್ರವಲ್ಲ, ಸೌಜನ್ಯ ಳ ಕುಟುಂಬ ಮತ್ತು ಹೋರಾಟಗಾರರು ಆರೋಪಿಸಿದ್ದ ಇತರೆ ಮೂವರ ಹೆಸರನ್ನು ಸಿಐಡಿ ಪೊಲೀಸರು ಗಮನಕ್ಕೂ ತೆಗೆದುಕೊಳ್ಳದೆ ಬಿಟ್ಟಿದ್ದರು! ಆ ಮೂವರೆಂದರೆ ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಜೈನ್- ಎಲ್ಲಾ ಇವರೆಲ್ಲ ಆ ಪರಿಸರದಲ್ಲೇ ಇರುವವರು. ಆ ನಡುವೆ ತಮ್ಮದೇನೂ ಪಾತ್ರ ಇಲ್ಲವೆಂದು ಈ ಮೂವರು ಮಾಧ್ಯಮಗೋಷ್ಠಿ ನಡೆಸಿ ಆರೋಪಗಳನ್ನು ನಿರಾಕರಿಸಿದ್ದರು.

ಇನ್ನು ಸೌಜನ್ಯಾ ಕೇಸ್ ಇದೀಗ ಮುನ್ನೆಲೆಗೆ ಬಂದ ಹಿನ್ನೆಲೆ ತಿಮರೋಡಿ ಹಾಗೂ ಸೌಜನ್ಯಾ ತಾಯಿ ಆರೋಪ ಮಾಡಿದ್ದ ಉದಯ್ ಜೈನ್ ವೃತ್ತಿಯಲ್ಲಿ ಆಟೋ ಚಾಲಕ ರಾಗಿರುವ ಇವರು ಸಂದರ್ಶನವೊಂದರಲ್ಲಿ ಆಗಮಿಸಿ ತಮಗೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇನ್ನಿತರರಿಂದ ಜೀವಭಯ ಇತ್ತು. ಆದರೆ ನಾವು ಈ ಕೆಲಸ ಮಾಡಿಲ್ಲ ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ