ಶೂಟಿಂಗ್ ವೇಳೆ ಶ್ರವಣಿ ಸುಬ್ರಹ್ಮಣ್ಯ ನಟಿಗೆ ಕಿ ರುಕುಳ, ಲೈವ್ ಬಂದ್ ದುಃಖ ಹೇಳಿಕೊಂಡ ಚೆಲುವೆ
Apr 20, 2025, 11:10 IST
|

ಬಣ್ಣದ ಲೋಕದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ತಲ್ಲಣ ಸೃಷ್ಟಿಸುತ್ತಿರುತ್ತದೆ. ತಮ್ಮ ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡ ಸಾಕಷ್ಟು ನಟಿಯರಿದ್ದಾರೆ. ಇನ್ನು ಕೆಲವರು ಆ ಕೆಟ್ಟ ಸಂಪ್ರದಾಯದ ವಿರುದ್ಧ ಕಾನೂನಿನ ಮೊರೆ ಹೋದ ಉದಾಹರಣೆಗಳೂ ಇವೆ. ಇದೀಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಗುರುತಿಸಿಕೊಂಡ ಆಸಿಯಾ ಫಿರ್ದೋಸ್ ಸಹ ಇದೇ ವಿಷ್ಯವಾಗಿ ಮಾತನಾಡಿದ್ದಾರೆ.
ಸೀರಿಯಲ್ ಜತೆಗೆ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಹೀಗಿರುವಾಗಲೇ ನಿರ್ಮಾಪಕರೊಬ್ಬರು ಕರೆ ಮಾಡಿ, ಹೀಗೊಂದು ಸಿನಿಮಾ ಇದೆ ಎಂದು ಹೇಳಿದ್ದರು. ನಾನೂ ಕುತೂಹಲದಲ್ಲಿಯೇ ಹೋಗಿದ್ದೆ. ಆ ನಿರ್ಮಾಪಕರ ಆಫೀಸ್ ನಮ್ಮ ಮನೆ ಬಳಿಯೇ ಇದ್ದಿದ್ದರಿಂದ, ನಾನೊಬ್ಬಳೇ ಹೋಗಿದ್ದೆ.ಅದಾದ ಮೇಲೆ ಸಿನಿಮಾ ಮಾತುಕತೆ ಶುರುವಾಯ್ತು. ಸಿನಿಮಾದ ಕಥೆಯನ್ನೂ ಹೇಳಿದರು. ನಿಮಗೆ ಇಂಟ್ರೆಸ್ಟ್ ಇದೆಯಾ? ಎಂದೂ ಕೇಳಿದರು.
ಕಥೆ ಕೇಳಿ ನನಗೂ ಓಕೆ ಎನಿಸಿ ನಟಿಸಲು ಒಪ್ಪಿದೆ. ಆ ಸಮಯದಲ್ಲಿ ನನಗೂ ಹಣಕಾಸಿನ ಅವಶ್ಯಕತೆ ಇತ್ತು. ತಕ್ಷಣ ಒಪ್ಪಿಕೊಂಡೆ. ಸಂಭಾವನೆ ವಿಚಾರವನ್ನೂ ಮಾತನಾಡಿದರು.ಎಷ್ಟು ಸಂಭಾವನೆ ನಿರೀಕ್ಷೆ ಮಾಡುತ್ತಿರಾ? ಎಂದೆಲ್ಲ ಕೇಳಿದರು. ಮೊದಲಿಗೆ ನಾನು ಕೇಳಿದಷ್ಟು ಸಂಭಾವನೆ ಕೊಡಲು ಒಪ್ಪಲಿಲ್ಲ. ಅದಾದ ಮೇಲೆ ಸರಿ ಕೊಡೋಣ ಬಿಡಿ ಎಂದು ಹೇಳಿದರು. ನಾನೂ ಓಕೆ ಎಂದೆ.
ಆದರೆ, ಆ ವರೆಗೂ ಆಡಿದ ಮಾತಿಗೂ, ಸಂಭಾವನೆ ಅಂತಿಮವಾದ ಬಳಿಕ ಆಡಿದ ಮಾತುಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿತು. ಅವರ ಮಾತು ಬೇರೆ ಕಡೆ ಹೊರಟಿತು. ನಿಮ್ಮ ಪರ್ಸನಾಲಿಟಿ ಚೆನ್ನಾಗಿದೆ. ತುಂಬ ಚೆನ್ನಾಗಿ ಎಲ್ಲರನ್ನ ಮಾತನಾಡಿಸ್ತೀರಾ ಎಂದರು.ಅದಾದ ಮೇಲೆ ನಾನು ನಿಮ್ಮ ಫ್ರೆಂಡ್ ಆಗಲು ಬಯಸುತ್ತೇನೆ ಎಂದು ಹೇಳಿದರು. ಅವರ ಮಾತಿನ ಮರ್ಮ ನನಗೆ ಆ ಕ್ಷಣಕ್ಕೆ ಗೊತ್ತಾಗಲಿಲ್ಲ.
ನಾನೆಲ್ಲಾದರೂ ಸಿನಿಮಾಕ್ಕೆ ಹೋಗ್ತಿದ್ದೀನಿ ಅಂದ್ರೆ, ನೀವು ನನ್ನ ಜತೆ ಬರಬೇಕು ಅಂತಂದ್ರು. ನನಗೆ ಒಮ್ಮೆಲೇ ಕೋಪ ನೆತ್ತಿಗೇರಿತು.ಅದಾದ ಮೇಲೆ ಆ ವ್ಯಕ್ತಿಯಿಂದ ಮತ್ಯಾವತ್ತೂ ಕಾಲ್ ಬಂದಿಲ್ಲ. ಕಾಲ್ ಮಾಡಿದ್ರೆ ಉಗಿತಿದ್ದೆ ಎಂದು ಕೆಟ್ಟ ಅನುಭವದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.