ಶ್ರೇಯಾಘೋಷಾಲ್ ಅವರಿಗೆ ಕನ್ನಡ ಹಾಡು ಹಾಡಲು ಮುಜುಗರವಂತೆ, ಕೋಟಿ ಕೊಟ್ಟರು ಶ್ರೇಯಾ ಬರುತ್ತಿಲ್ಲ
Jan 20, 2025, 09:13 IST
|

ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಎಲ್ಲ ಭಾಷೆಯಲ್ಲೂ ಹಾಡಿದ್ದಾರೆ. ದಕ್ಷಿಣ ಅಂತ ಬಂದ್ರೆ, ಮೊದಲು ಕನ್ನಡದಲ್ಲಿಯೇ ಹಾಡಿದ್ದಾರೆ. ಆ ಮೇಲೆ ತೆಲುಗು, ತಮಿಳು, ಮಲೆಯಾಳಂ ಭಾಷೆಯ ಚಿತ್ರಗಳಲ್ಲಿ ಮಿಂಚಿದ್ದಾರೆ. ಆದರೆ, ಇದೀಗ ಕನ್ನಡದ ಹಾಡುಗಳೇ ಶ್ರೇಯಾ ಘೋಷಾಲ್‌ಗೆ ಬೇಡವಾದ್ವೇ? ಬೇರೆಯ ಭಾಷೆಯ ಚಿತ್ರಗಳಿಗೆ ಹಾಡ್ತಾರೆ? ಇಲ್ಲಿ ಯಾಕೆ ಹಾಡೋದಿಲ್ಲ? ಏನು ಸಮಸ್ಯೆ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಸಂಜು ವೆಡ್ಸ್ ಗೀತಾ-೨ ಚಿತ್ರದ ಡೈರೆಕ್ಟರ್ ನಾಗಶೇಖರ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅದೆಷ್ಟು ಕಾದಿದ್ದೇವೆ. ನಮ್ಮ ಕಾಯುವಿಕೆಗೆ ಅರ್ಥವೇ ಇಲ್ಲ ಅನ್ನೋ ಅರ್ಥದಲ್ಲಿಯೇ ಹೇಳಿಕೊಂಡಿದ್ದರು. ಶ್ರೇಯಾ ಘೋಷಾಲ್ ವಿವಾದಿಂದ ದೂರವೇ ಇರ್ತಾರೆ. ಕನ್ನಡ ಅಂತ ಬಂದ್ರೆ ಸಮಸ್ಯೆ ಏನೂ ಇಲ್ಲ. ತಮ್ಮದೇ ಭಾಷೆ ಅನ್ನುವ ಮಟ್ಟಿಗೆ ಹಾಡ್ತಾರೆ. ಸಂಜು ವೆಡ್ಸ್ ಗೀತಾ ಚಿತ್ರದ ಹಾಡುಗಳನ್ನೆ ತೆಗೆದುಕೊಳ್ಳಿ, ಚಿತ್ರದ ಏಳು ಹಾಡುಗಳಲ್ಲಿ ನಾಲ್ಕು ಹಾಡು ಶ್ರೇಯಾ ಹಾಡಿದ್ದಾರೆ. ಹಾಗೆ ಹಾಡಿರೋ ಹಾಡುಗಳು ಈಗಲೂ ಸಂಗೀತ ಪ್ರೇಮಿಗಳ ಹೃದಯದಲ್ಲಿ ಮಧುರ ಭಾವನೆ ಮೂಡಿಸುತ್ತವೆ.
ಅಷ್ಟು ಆಪ್ತವಾದ, ಅಷ್ಟು ವಿಶೇಷ ಧ್ವನಿಯ ಶ್ರೇಯಾ ಘೋಷಾಲ್, ತಮ್ಮ ಬೇಡಿಕೆಯನ್ನ ಹೆಚ್ಚಿಕೊಂಡಿದ್ದಾರೆ. ಶ್ರೇಯಾ ಘೋಷಾಲ್ ಇಲ್ಲದೇ ಆಡಿಯೋ ಕಂಪನಿಗಳು ಚಿತ್ರದ ಹಾಡುಗಳನ್ನೆ ಖರೀದಿಸುವುದಿಲ್ಲ ಅನ್ನುವ ಮಟ್ಟಿಗಿದೆ. ಆ ಲೆವಲ್‌ಗೆ ಶ್ರೇಯಾ ಕನ್ನಡದಲ್ಲಿ ಬೇಡಿಕೆ ಕ್ರಿಯೇಟ್ ಮಾಡಿದ್ದಾರೆ.ಡೈರೆಕ್ಟರ್ ನಾಗಶೇಖರ್ ಸಂಗೀತದ ಅಭಿರುಚಿ ಚೆನ್ನಾಗಿದೆ. ತಮ್ಮ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಒಳ್ಳೆ ಹಾಡುಗಳನ್ನೆ ಮಾಡಿಸಿದ್ದರು. ಅದನ್ನೆ ಮನದಲ್ಲಿ ಇಟ್ಟುಕೊಂಡು ಸಂಜು ವೆಡ್ಸ್ ಗೀತಾ-೨ ಚಿತ್ರಕ್ಕೂ ಪ್ಲಾನ್ ಮಾಡಿದ್ದರು. ಡೈರೆಕ್ಟರ್ ಶ್ರೀಧರ್ ಸಂಭ್ರಮ ಆ ನಿಟ್ಟಿನಲ್ಲಿಯೇ ಒಂದಷ್ಟು ಟ್ಯೂನ್ ಮಾಡಿದ್ರು.
ಆದರೆ, ಶ್ರೀಧರ್ ಸಂಭ್ರಮ ಪ್ರಯತ್ನ ಫಲಿಸಲೇ ಇಲ್ಲ. ನಾಗಶೇಖರ್ ಕನಸು ನನಸಾಗಲೇ ಇಲ್ಲ. ಆಡಿಯೋ ಕಂಪನಿಯ ಅಗ್ರಿಮೆಂಟ್ ಅಲ್ಲಿ ಶ್ರೇಯಾ ಹಾಡ್ತಾರೆ ಅಂತಲೇ ನಾಗಶೇಖರ್ ಬರೆದಿದ್ದರು. ಆ ಅಗ್ರಿಮೆಂಟ್‌ಗೆ ಸಹಿ ಕೂಡ ಮಾಡಿದ್ದರು. ಆದರೆ, ಶ್ರೇಯಾ ಘೋಷಾಲ್ ಹಾಡಲೇ ಇಲ್ಲ.ಈ ಒಂದು ಮಾತು ಹೇಳೋಕೆ ಕಾರಣ ಕೂಡ ಇದೆ. ಸಂಜು ವೆಡ್ಸ್ ಗೀತಾ ಪಾರ್ಟ್-೧ ಚಿತ್ರದ ಗೀತೆ ತುಂಬಾನೆ ಚೆನ್ನಾಗಿದ್ದವು. ರಮ್ಯಾ ಒಳ ಧ್ವನಿಯಂತೇನೆ ಅಷ್ಟೂ ಹಾಡುಗಳು ಶ್ರೇಯಾ ಧ್ವನಿಯಲ್ಲಿ ಕೇಳಿದ್ದವು.
ಎಲ್ಲೋ ಒಂದು ಕಡೆಗೆ ರಮ್ಯಾನೆ ಹಾಡಿದಂತೇನೆ ಇತ್ತು. ಇಡೀ ಚಿತ್ರಕ್ಕೆ ಶ್ರೇಯಾ ಧ್ವನಿ ನಿಜಕ್ಕೂ ಅತಿ ದೊಡ್ಡ ಶಕ್ತಿನೇ ಆಗಿತ್ತು.ಈ ಒಂದು ಸ್ಥಿತಿಯಲ್ಲಿ ಶ್ರೀಧರ್ ಬೇಸರಗೊಂಡಿದ್ದರು. ಎಷ್ಟು ಅಂತ ಹೇಳೋದು. ಶ್ರೇಯಾ ಘೋಷಾಲ್ ಮ್ಯಾನೇಜರ್ ಕೊನೆವರೆಗೂ ರೆಸ್ಪಾಂಡ್ ಮಾಡಲೇ ಇಲ್ಲ. ಹಾಗಾಗಿಯೇ ಶ್ರೀಧರ್ ಸಂಭ್ರಮ ಹೋಪ್ ಬಿಟ್ಟಿದ್ದರು. ನೀವು ಒಮ್ಮೆ ಟ್ರೈ ಮಾಡಿ ಅಂತ ನಾಗಶೇಖರ್‌ಗೆ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.