ಚಂದನ್ ಶೆಟ್ಟಿ ಕೈಕೊಟ್ಟ ಬಳಿಕ ಇವತ್ತಿನವರೆಗೂ ಮದುವೆಯಾಗದೆ ಒಂಟಿ ಜೀವನ ಅನುಭವಿಸುತ್ತಿರುವ ಶ್ರುತಿ ಪ್ರಕಾಶ್

 | 
Chandan

ಕನ್ನಡದ ಟಿವಿ ಪ್ರೇಕ್ಷಕರಿಗೆ ಪರಿಚಿತರಾದ ಗಾಯಕಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಇತ್ತೀಚೆಗೆ ಮನೆಯಲ್ಲಿಯೇ ಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಸಣ್ಣ ಗಾಯ ಎಂದುಕೊಂಡಿದ್ದ ಶ್ರುತಿಗೆ ವೈದ್ಯರು ಎಮ್‌ಆರ್‌ಐ ಮಾಡಿದ ನಂತರ ಆಪರೇಷನ್ ಅಗತ್ಯವಿದೆ ಎಂದು ತಿಳಿಸಿದ್ದರು. ಹೀಗಾಗಿ ಪುಣೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಶ್ರುತಿ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಅವಧಿಯಲ್ಲಿ ಅವರು ದೈಹಿಕ ಹಾಗೂ ಮಾನಸಿಕ ಶಕ್ತಿ ಕಳೆದುಕೊಳ್ಳದಂತೆ ಹೆಚ್ಚು ಪುಸ್ತಕ ಓದುವುದು, ಧ್ಯಾನ ಮತ್ತು ಫಿಸಿಯೋಥೆರಪಿ ಮಾಡುತ್ತಾ ಚೇತರಿಕೆ ಪಡೆಯುತ್ತಿದ್ದಾರೆ. ಮೊದಲಿಗೆ ನಾನು ತುಂಬಾ ಹೆದರುತ್ತಿದ್ದೆ. ನಿತ್ಯದ ಸಾಮಾನ್ಯ ಕೆಲಸಗಳೇ ಕಷ್ಟವಾಗುತ್ತವೆ ಎಂದುಕೊಂಡಿದ್ದೆ. ಆದರೆ ಮನಸ್ಸಿಗೆ ಶಕ್ತಿ ಕೊಟ್ಟು ಯಾವ್ದಾದರೂ ಒಂದು ಕೆಲಸದಲ್ಲಿ ತೊಡಗಿಕೊಂಡೆ ಎಂದು ಶ್ರುತಿ ಸಂದರ್ಶನದಲ್ಲಿ ಹೇಳಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೂ ಶ್ರುತಿ ತಮ್ಮ ಕರಿಯರ್‌ಗೆ ಬ್ರೇಕ್ ಕೊಡದೇ ಮುಂದುವರಿದಿದ್ದಾರೆ. ತಮ್ಮ ಮೊದಲ ಹಿಂದಿ ಸಿನಿಮಾ Haunted 2 ಶೂಟಿಂಗ್‌ ಪ್ರಾರಂಭಿಸಿರುವ ಅವರು, ಈ ಚಿತ್ರದಲ್ಲಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2011ರಲ್ಲಿ ಬಿಡುಗಡೆಯಾದ Haunted ಚಿತ್ರದ ಸೀಕ್ವೆಲ್ ಆಗಿರುವ ಈ ಚಿತ್ರವನ್ನು ವಿಕ್ರಾಂತ್ ಭಟ್ ನಿರ್ದೇಶಿಸುತ್ತಿದ್ದಾರೆ. ಸುಮಾರು 60 ಜನ ಕಲಾವಿದರಲ್ಲಿ ಶ್ರುತಿಯನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನುವುದು ವಿಶೇಷ.

ಕೇವಲ ಕನ್ನಡ ಮತ್ತು ಹಿಂದಿ ಮಾತ್ರವಲ್ಲದೆ ಶ್ರುತಿ ಇದೀಗ ಇಂಗ್ಲಿಷ್ ಚಿತ್ರದಲ್ಲಿಯೂ ನಟಿಸಲು ಸಜ್ಜಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಹಂಚಿಕೊಂಡ ಅವರು, ಇದು ನನ್ನ ಜೀವನಕ್ಕೆ ತುಂಬ ಹತ್ತಿರವಾದ ಪಾತ್ರ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಾ, ವಿಭಿನ್ನ ಭಾಷೆಗಳಲ್ಲಿ ತಮ್ಮ ಹಾದಿ ಕಟ್ಟುತ್ತಿರುವ ಶ್ರುತಿ ಪ್ರಕಾಶ್, ಪ್ರೇಕ್ಷಕರಿಗೆ ನಿಜವಾದ ಸ್ಪೂರ್ತಿ.