ಕಾಂತಾರ 2 ಸಿನಿಮಾಗೆ ಶ್ರುತಿ ಮಗಳು ಗೌರಿ ಆಯ್ಕೆ, ಸಪ್ತಮಿ ಗೌಡ ಕೈಬಿಟ್ಟ ರಿಷಬ್ ಶೆಟ್ಟಿ

 | 
Jsjsjs

ಕೆಲ ದಿನಗಳ ಹಿಂದಷ್ಟೇ ನಟಿ ಶ್ರುತಿ ಅವರು ಕೊರಗಜ್ಜನಿಗೆ ಕೋಲ ನೀಡಿ ಪೂಜೆ ಸಲ್ಲಿಸಿದ್ದಾರೆ. ಮಗಳು ಗೌರಿ ಜತೆ ನಟಿ ಶ್ರುತಿ ಅವರು ಕೊರಗಜ್ಜನಿಗೆ ಕೋಲ ನೀಡಿದ್ದಾರೆ. ಈ ಕುರಿತಾಗಿ ಕಾಂತಾರಾ 2 ಸಿನಿಮಾಗೆ ಗೌರಿ ನಾಯಕಿ ಆಗಿ ನಟಿಸಲಿದ್ದಾಳೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿತ್ತು.ಇದರಿಂದ ನಟಿ ಸಪ್ತಮಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಆದರೆ ನಟಿ ಶೃತಿ ಅವ್ರು ಕೊರಗಜ್ಜನ ಮೊರೆ ಹೋಗಿ ಕೊರಗಜ್ಜನಿಗೆ ಕೋಲ ಸೇವೆ ಕೂಡ ಮಾಡಿದ್ದಾರೆ. ಈ ಸಮಯದಲ್ಲಿ  ಅಮ್ಮನೊಟ್ಟಿಗೆ ಮಗಳು ಗೌರಿ ಕೂಡ ಕೋಲ ಸೇವೆ ಮಾಡಿದ್ದಾರೆ. ಕೋಲ ಸೇವೆ ಅನ್ನೋದು ಒಂದು ವಿಶೇಷ ಸೇವೆನೆ ಆಗಿದೆ. ಕಾಂತಾರ ಸಿನಿಮಾ ಬಂದ್ಮೇಲೆ ಕೋಲ ಸೇವೆಯ ಬಗ್ಗೆ ಜನಕ್ಕೆ ಹೆಚ್ಚು ತಿಳಿದಿದೆ. ಕೊರಗಜ್ಜನ ವಿಷಯದಲ್ಲೂ ಅಷ್ಟೇ. ಕೋಲ ಸೇವೆ ಮಾಡುವ ಜನ ಹೆಚ್ಚಿದ್ದಾರೆ. ಇದಕ್ಕೂ ಹೆಚ್ಚಾಗಿ ನಟಿ ಶೃತಿ ಅವ್ರು ಕೊರಗಜ್ಜನ ಜೀವನ ಆಧರಿಸಿದ "ಕರಿ ಹೈದ ಕರಿ ಅಜ್ಜ" ಸಿನಿಮಾದಲ್ಲೂ ಅಭಿನಯಿಸಿದ್ದಾರೆ. 

ಈಗ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಕೋಲ ಸೇವೆ ಮೂಲಕ  ಟೀಮ್ ಧನ್ಯವಾದ ಹೇಳಲು ನಟಿ ಶ್ರುತಿ ಮತ್ತವರ ಮಗಳನ್ನು ದೈವ ಕೋಲಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಕೊರಗಜ್ಜನ ಚಿತ್ರದಲ್ಲಿ ನಟಿ ಶೃತಿ ಅವರು ಕೊರಗಜ್ಜನ ತಾಯಿಯ ಪಾತ್ರವನ್ನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಶೃತಿ ಅವರು ತಮ್ಮ ಪಾತ್ರವನ್ನ ಅಷ್ಟೇ ಭಕ್ತಿಯಿಂದಲೇ ನಿರ್ವಹಿಸಿದ್ದಾರೆ.

ಇನ್ನು ಶ್ರುತಿ ಅಭಿನಯಿಸುತ್ತಿರುವ ಕರಿ ಹೈದ ಕರಿ ಅಜ್ಜ ಚಿತ್ರ ಬಹು ಬಜೆಟ್​​ನಲ್ಲಿಯೇ ರೆಡಿ ಆಗುತ್ತಿದೆ. ಬಾಲಿವುಡ್​​ನ ನಟ ಕಬೀರ್ ಬೇಡಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೇ ನಟಿ ಭವ್ಯ ಕೂಡ ಇದರಲ್ಲಿ ನಟಿಸಿದ್ದಾರೆ. ಹಾಗಾಗಿ ರಿಯಲ್ ಆಗಿಯೇ ನಟಿ ಶೃತಿ ಅವರು ಕೊರಗಜ್ಜನಿಗೆ ಕೋಲ ಸೇವೆ ಮಾಡಿದ್ದಾರೆ.

ಶೃತಿ ಅವರು ಅಭಿನಯಿಸಿದ್ದ ಕರಿ ಹೈದ ಕರಿ ಅಜ್ಜ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಹಿನ್ನೆಲೆಯಲ್ಲಿಯೆ ಇಡೀ ಟೀಮ್ ಕೊರಗಜ್ಜನಿಗೆ ಕೋಲ ಸೇವೆ ಮಾಡೋ ಮೂಲಕ ಧನ್ಯವಾದ ತಿಳಿಸಿದ್ದಾರೆ ಅದರ ಹೊರೆತಾಗಿ ಕಾಂತಾರಾ 2 ರಲ್ಲಿ ಗೌರಿ ನಟಿಸುತ್ತಿಲ್ಲ ಎಂಬುದಾಗು ಹೇಳಿದ್ದಾರೆ.