ಸ್ಟಾರ್ ನಟ ಕೊ‌ ಲೆ ಕೇಸ್ ನಲ್ಲಿ ಅಂದರ್ ಆಗುತ್ತಿದ್ದಂತೆ ತನ್ನ ಮಗನ ಜೊತೆ ಆಟವಾಡಿದ ಶ್ವೇತ ಚಂಗಪ್ಪ

 | 
Ud

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಜನಪ್ರಿಯತೆ ಪಡೆದ ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ . ಜನರು ಇವರು ನಟನೆಗೂ ಭೇಷ್ ಅಂದಿದ್ದರು, ನಿರೂಪಣೇಗೂ ಸೈ ಅಂದಿದ್ದರು. ಸೂಪರ್ ಕ್ವೀನ್, ಜೋಡಿ ನಂ 1, ಛೋಟಾ ಚಾಂಪಿಯನ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ನಿರೂಪಕಿ ಜನಮನಗೆದ್ದ ಶ್ವೇತಾ ಚಂಗಪ್ಪ, ಸದ್ಯ ನಿರೂಪಣೆಯಿಂದ ಬ್ರೇಕ್ ಪಡೆದು ಮಗನ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. 

ನಟಿ ಶ್ವೇತಾ ಚಂಗಪ್ಪ ಮಗನ ಜೊತೆಗಿನ ಮುದ್ದು ಮುದ್ದಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಮಗನ ಜೊತೆ ಶಾಪಿಂಗ್ ಡೇಟ್ ಗೆ  ಹೋಗಿರೋದಾಗಿ ತಿಳಿಸಿದ್ದಾರೆ.ನನ್ನ ನಗು , ನನ್ನ ಮಗ ಜಿಯಾನ್ ಅಯ್ಯಪ್ಪ. ನಾನು ಮತ್ತು ನನ್ನ ಮಗ ಜೊತೆಯಾಗಿ ಡೇಟ್ ಗೆ ಹೋದೆವು.  ನಾನು ನನ್ನ ಡೇಟ್ ನ್ನು ಶಾಪಿಂಗ್ ಪೂರ್ತಿ ಎತ್ತಿಕೊಂಡೇ ಇರ್ಬೇಕಾಗಿತ್ತು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.  

ಮನೆಯಲ್ಲಿ ಎತ್ತಿಕೊಂಡು ಮುದ್ದಾಡ ಹೋದರೆ ಅಯ್ಯೋ ಸಾಕು ಬಿಡಮ್ಮ ಎಂದು ಅರಚುತ್ತಾನೆ ಅದೇ ಹೊರಗಡೆ ಹೋದರೆ ಎತ್ತುಕೊಂಡೆ ತಿರುಗಾಡಬೇಕು ಬೇಕು ಎಂದು ಹುಸಿ ಮುನಿಸು ತೋರಿದ್ದಾರೆ. ನಮ್ಮ ಪುಟಾಣಿಗಳ ಜೊತೆಗೆ ಸಮಯ ಕಳೇಯೋದೇ ಜೀವನದ ಬೆಸ್ಟ್ ದಿನಗಳು. ಎಲ್ಲಾ ಎಮೋಷನ್ ಗಳು ಬೆರೆತು ಹೋಗುತ್ತವೆ ಎಂದು ಬರೆದುಕೊಂಡಿದ್ದಾರೆ. ಅಮ್ಮ ಮಗನ ಜೋಡಿ ನೋಡಿ ನೆಟ್ಟಿಗರು ವಾವ್ ವಾವ್ ಎನ್ನುತ್ತಿದ್ದಾರೆ. 

ಅಮ್ಮ ಮಗ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ. ಇಬ್ಬರ ಜೋಡಿ ಚೆನ್ನಾಗಿದೆ. ಮೇಡಂ ನೀವು ನಯನತಾರ ತರ ಕಾಣಿಸ್ತೀದೀರಾ.ಪ್ರಪಂಚದಲ್ಲೇ ಅತ್ಯಂತ ಸುಂದರಿ ನೀವೆ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.  ಚೋಟಾ ಚಾಂಪಿಯನ್  ನಿರೂಪಣೆ ಮಾಡಿದ ಬಳಿಕ ಶ್ವೇತಾ ಎಲ್ಲೂ ಕಂಡು ಬಂದಿರಲಿಲ್ಲ. ಸದ್ಯ ಟ್ರಾವೆಲ್ ಮಾಡುತ್ತಾ, ಫ್ಯಾಮಿಲಿ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಈದೀಗ ಮತ್ತೊಮ್ಮೆ ಝೀ ಕನ್ನಡ ಚಾನಲ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.