ಶ್ರೀರಾಮ ಮಂದಿರ ಉದ್ಘಾಟನೆಗೆ ಬಂದ ಸಿದ್ದರಾಮಯ್ಯ, ವಿರೋಧಿಗಳ ಬುಡಕ್ಕೆ ಬೆಂಕಿ

 | 
H

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಇಂದು ಮುದ್ದು ಮೊಗದ ಬಾಲರಾಮನ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ವಿಧಿಗಳು ಹಿಂದೂ ಸಂಪ್ರದಾಯದ ವಿಧಾನಕ್ಕೆ ಅನುಗುಣವಾಗಿ ನಡೆಯಿತು. ಶುಭ ಅಭಿಜಿತ್ ಮುಹೂರ್ತದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಅದೇ ಶುಭ ಮುಹೂರ್ತದಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ದೇವಸ್ಥಾನವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಭೈರತಿ ಸುರೇಶ್, ಈಶ್ವರ್​ ಖಂಡ್ರೆ, ರಾಮಲಿಂಗರೆಡ್ಡಿ ಮತ್ತು ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗಿಯಾಗಿದ್ದರು. ದೇವಾಲಯವನ್ನು ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿದೆ. 

ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ 33 ಅಡಿ ಎತ್ತರ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಪೂಜೆ ಪುನಸ್ಕಾರಗಳು ನಡೆದವು.ಉದ್ಘಾಟನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗಾಂಧಿಜಿ ಪ್ರಾಣ ಬಿಡುವಾಗಲೂ ಹೇ ರಾಮ್ ಎಂದು ಪ್ರಾಣ ಬಿಟ್ಟರು. ನಾವು ಗಾಂಧಿಜಿಯವರ ರಾಮನನ್ನು ಪೂಜಿಸುತ್ತೇವೆ. ಬಿಜೆಪಿಯ ರಾಮನನ್ನು ಪೂಜಿಸಲ್ಲ. ನಾವೆಲ್ಲ ರಾಮನ ಭಕ್ತರೆ, ಆದರೆ ಬಿಜೆಪಿಯವರು ಹೇಳುವಂತೆ ಅಲ್ಲ. ಅಯೋಧ್ಯೆಗೆ ಹೋಗುತ್ತೇವೆ ಎಂದರು.

ಈ ದೇವಾಲಯ ರಾಜಕಾರಣಕ್ಕೊಸ್ಕರ ಮಾಡಿಲ್ಲ, ರಾಜ್ಯದಲ್ಲಿ ಬಹಳಷ್ಟು ರಾಮನ ದೇವಾಲಯ ಇದೆ. ನಾನು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ನಾನು ಅಯೋಧ್ಯೆಗೇ ಹೋಗುತ್ತೇನೆ. ಆದರೆ ಎಲ್ಲಕಡೆ ರಾಮನ ಮೂರ್ತಿ ಒಂದೇ ಅಲ್ವಾ? ಅಯೋಧ್ಯೆಯಲ್ಲಿ ಪೂಜೆ ಮಾಡಿದರು ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರು ಒಂದೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.