ದರ್ಶನ್ ಅಭಿಮಾನಿಗಳನ್ನು‌ ಬೇಟೆಯಾಡಲು ಸಿದ್ದವಾದ ಸಿದ್ದರಾಮ್ಯಯ; ಅಶ್ವಿನಿ ಮೇಡಂ ಪರ ನಿಂತ ಸಿಎಮ್

 | 
ಹಹ
ಕಳೆದ ಕೆಲ ದಿನಗಳಿಂದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಂದನಾತ್ಮಕ ಪೋಸ್ಟ್‌ ಎಲ್ಲೆಲ್ಲೂ ವೈರಲ್ ಆಗ್ತಿದೆ. ತಮ್ಮದಲ್ಲದ ತಪ್ಪಿಗೆ ದೊಡ್ಮನೆ ಸೊಸೆ ನೋವು ಅನುಭವಿಸುವ ಹಾಗಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್‌ಗೆ ಹಲವರು ಜನ ಕಲಾವಿದರು ರಾಜಕಾರಣಿಗಳು ಬೆಂಬಲ ನೀಡಿದ್ದು ನೋವು ಪಡದಂತೆ ಇರಲು ಸಲಹೆ ನೀಡಿದ್ದಾರೆ.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಬಗ್ಗೆ ಈಚೆಗೆ ಕಿಡಿಗೇಡಿಯೊಬ್ಬ ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ಹರಿಬಿಟ್ಟಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು, ಇದೇ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಸಾರ್ವಜನಿಕವಾಗಿ ಅಪಮಾನಿಸಿ, ವಿಕೃತಿಯನ್ನು ಮೆರೆಯುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ದರ್ಶನ್ ಅಭಿಮಾನಿಗಳ ಕೆಲಸಕ್ಕೆ ದರ್ಶನ್ ಪತ್ನಿ ಮತ್ತು ತಾಯಿಯ ಮೇಲೆ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಹೆಂಡತಿಗೂ ಇದೇ ಗತಿ ಬರಲಿ ಎಂದು ಶಾಪ ಹಾಕಿದ್ದಾರೆ.ಆರ್‌ಸಿಬಿ ತಂಡವು ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ ಎಂಬರ್ಥ ಕೀಳು ಮನಸ್ಥಿತಿ ಟ್ವೀಟ್‌ವೊಂದು ಈಚೆಗೆ ಹರಿದಾಡುತ್ತಿದೆ.
ಇದನ್ನು ನಟ ದರ್ಶನ್ ಅವರ ಅಭಿಮಾನಿಗಳು ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ದರ್ಶನ್ ಅವರಿಗೂ ಈ ವಿಷಯ ಗೊತ್ತಾಗಿದ್ದು, ಇಂತಹ ನಿಂದನಾತ್ಮಕ ಟ್ವೀಟ್‌ ಬಗ್ಗೆ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಇದರ ಬಗ್ಗೆ ಕೆರಳಿ ಕೆಂಡವಾಗಿದ್ದು, ಕಿಡಿಗೇಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.