ಆ ಒಂದು ಘಟನೆಯಿಂದ ಮದುವೆ ಆಗಲು ಭಯಪಡುತ್ತಿರುವ ಸಿರಿ
ಇತ್ತೀಚೆಗಿನ ದಿನಗಳಲ್ಲಿ ಮದುವೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತ ವಿಚಾರ. ಸುಮಾರು ಜನರಲ್ಲಿ ಮದುವೆ ವಿಚಾರ ಆಸಕ್ತಿಯಿಂದ ದೂರವಾದಂತ ವಿಚಾರವಾಗಿದೆ. ಸಾಕಷ್ಟು ಸರ್ವೇಗಳಲ್ಲೂ ಮದುವೆಯಾಗುವುದಕ್ಕೆ 90% ಮಂದಿ ನಿರಾಸಕ್ತಿ ತೋರಿಸಿರುವ ಉದಾಹರಣೆ ಇದೆ.
ಸಿರಿ ಆಗಲೂ ಹೀರೋಯಿನ್. ಈಗಲೂ ಹೀರೋಯಿನ್. ವಿಭಿನ್ನ ಪಾತ್ರಗಳ ಮೂಲಕವೇ ಎಲ್ಲರ ಮನಸ್ಸನ್ನು ಮುಟ್ಟಿದವರು. ಹೀಗಾಗಿ ಸಿರಿ ಅಂದ್ರೆ ಟ್ರೋಲಿಗರಿಗೂ ಸಿಕ್ಕಾಪಟ್ಟೆ ಇಷ್ಟ. ಬಿಗ್ ಬಾಸ್‌ಗೆ ಬಂದ ಮೇಲೆ ಅದ್ಯಾವಾಗ ಸಿರಿಗೆ ಮದುವೆಯಾಗಿಲ್ಲ ಎಂಬುದು ತಿಳಿಯಿತೋ, ಆಗಿನಿಂದ ಸಕಾರಾತ್ಮಕ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ನೋಡ್ರೋ ನಮ್ಮ ನಟಿಗೆ ಇನ್ನು ಮದುವೆಯಾಗಿಲ್ಲವಂತೆ ಎಂದು ಪಿಂಕ್ ಬಣ್ಣದ ಸೀರೆಯ ಫೋಟೋ ಹಾಕಿ, ಟ್ರೋಲ್ ಮಾಡಿದ್ದರು. ತಮ್ಮ ನಟಿಗೆ ಮದುವೆಯಾಗಿಲ್ಲ ಎಂಬುದನ್ನು ಎಂಜಾಯ್ ಮಾಡಿದ್ದಾರೆ.
ಬೇರೆಯವರು ನಮ್ಮನ್ನು ಪ್ರಶ್ನೆ ಮಾಡಿದಾಗಲೇ ಮದುವೆ ಮುಖ್ಯ ಅಂತ ಅನಿಸೋಕೆ ಶುರುವಾಗುವುದು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾಗ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗಲ್ಲ. ಇದೇ ಸಮಯಕ್ಕೆ ಮದುವೆ ಆಗಬೇಕು ಈ ವರ್ಷನೇ ಮದುವೆ ಆಗಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿರಿ ಅವರ ಅಕ್ಕ ಹೇಳಿದ್ದಾರೆ.
ವೈಯಕ್ತಿಕ ಜೀವನದಲ್ಲಿ ನಾವಿಬ್ಬರು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಇಬ್ಬರೂ ವೈಯಕ್ತಿಕ ಜೀವನದಲ್ಲಿ ನಷ್ಟಗಳನ್ನು ಅನುಭವಿಸಿದ್ದೇವೆ. ಇದೆಲ್ಲ ಸಿರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸಿರಿ ಒಪ್ಪಿಕೊಳ್ಳುವಂತ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಸಿರಿ ಅಕ್ಕ ಆಗಿ ನಾನು ಬೇಗ ಮದುವೆ ಮಾಡಿಕೊಂಡೆ. ಸಿರಿ ನನ್ನ ಜೀವನದಿಂದ ಏನೋ ಕಲಿತಿರಬಹುದು. ಇದೇ ಕಾರಣಕ್ಕೆ ಆಕೆಯ ಮದುವೆಗೆ ತಡ ಮಾಡುತ್ತಿದ್ದಾಳೆ ಎಂದರು.
ಸಿರಿ ಕೆಲವರ ಮದುವೆ ಮುರಿದಿರುವುದನ್ನು ನೋಡಿದ್ದಾಳೆ. ನನ್ನ ಜೀವನವೂ ಹೀಗೆಆದರೆ ಏನು ಮಾಡೋದು ಎಂದು ಯೋಚನೆ ಮಾಡಿ ಇನ್ನು ಮದುವೆ ನಿರ್ಧಾರಕ್ಕೆ ಬಂದಿಲ್ಲ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.