ಮೂರೇ ದಿನಗಳಲ್ಲಿ ಶ್ರೀರಾಮನ ಹುಂಡಿಗೆ ಕೋಟಿಗಟ್ಟಲೆ ಆದಾಯ, ತಿರುಪತಿ ತಿಮ್ಮಪ್ಪನನ್ನು ಮೀರಿಸಿದ ಸೀತಾರಾಮ್

 | 
ಕ್

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಬಾಲರಾಮನ ಮೂರ್ತಿಯ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಸೆಲೆಬ್ರೆಟಿಗಳು ಭಾಗವಹಿಸಿದ್ದ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಅರ್ಧ ದಿನದಲ್ಲೆ ಕಾಣಿಕೆಯ ಹುಂಡಿ ಭರ್ತಿಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇನ್ನು ಸೋಮವಾರ ಪ್ರತಿಷ್ಟಾಪನೆ ಆಗಿದೆ ಮರುದಿನ ಅಂದರೆ 23 ನೇ ತಾರೀಖು ಅಯೋಧ್ಯೆಗೆ 5,00,000(5ಲಕ್ಷ) ಭಕ್ತರು ರಾಮನ ದರ್ಶನ ಪಡೆದಿದ್ದಾರೆ. ಮೊದಲನೇ ದಿನದ ಕಾಣಿಕೆಯ ಹಣವೂ ಆನ್ಲೈನ್ ಪೇಮೆಂಟ್ ಮತ್ತು ನಗದು ರೂಪದ ಒಟ್ಟು ಹಣ ಎಲ್ಲ ಸೇರಿ 3,17,00,000 ಅಂದರೆ 3.17 ಕೋಟಿ ರೂಪಾಯಿ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ. 

ರಾಮ ಮಂದಿರಕ್ಕೆ ಪ್ರತಿ ದಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿದ್ದಾರೆ. ಭಕ್ತಾದಿಗಳ ಸಂಖ್ಯೆ ಹೆಚ್ಚು ಆದಂತೆ ಕಾಣಿಕೆ ಡಬ್ಬಗಳ ಸಂಖ್ಯೆಯೂ ಅಧಿಕವಾಗಿ ಇರಬೇಕು. ಆ ಕಾರಣದಿಂದ ಕಾಣಿಕೆ ರೂಪದಲ್ಲಿ ಅಥವಾ ದೇಣಿಗೆಯ ರೂಪದಲ್ಲಿ ಹಣ ನೀಡುವವರಿಗೆ ಒಟ್ಟು 10 ಕೌಂಟರ್ ಗಳು ಇವೆ.

ಜನವರಿ 24 ನೇ ತಾರೀಖು ಬುಧವಾರದಂದು 2,50,000 ಕ್ಕು ಹೆಚ್ಚು ಭಕ್ತರು ಅಯೋಧ್ಯೆ ದೇವಸ್ಥಾನಕ್ಕೆ ಬಂದು ರಾಮನ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ನಿತೀಶ್ ಕುಮಾರ್ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಮತ್ತು ಕಾಣಿಕೆಯ ಹಣವೂ ಹೆಚ್ಚಾಗಿರುವುದರಿಂದ ಕಾಣಿಕೆಯ ಹಣವನ್ನು ವಾರದಲ್ಲಿ ಒಂದು ದಿನ ಲೆಕ್ಕ ಹಾಕಲು ರಾಮ ಮಂದಿರ ಟ್ರಸ್ಟ್ ನಿರ್ಧರಿಸಿದೆ. ಅಂದರೆ ಪ್ರತಿ ಸೋಮವಾರ ಟ್ರಸ್ಟ್ ಕಾಣಿಕೆಯ ಹಣವನ್ನು ಲೆಕ್ಕ ಹಾಕುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.