ಕೇರಳದ ಮಂತ್ರವಾದಿಯಿಂದ ಭಸ್ಮ ತಂದು ಗಂಡನ ಕೊ ಲೆಗೆ ಸ್ಕೆಚ್; ಉಡುಪಿ ಕೇಸ್ ಗೆ ಹೊಸ ಟ್ವಿಸ್ಟ್
| Oct 29, 2024, 08:25 IST
ಉಡುಪಿ: ಇತ್ತಿಚ್ಚೆಗೆ ಉಡುಪಿ ದಂಪತಿ ಪ್ರತಿಮಾ ಹಾಗೂ ಬಾಲಕೃಷ್ಣ ಕೊ ಲೆ ವಿಚಾರ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹೌದು ಬಾಲಕೃಷ್ಣ ಪೂಜಾರಿ ಅವರ ಪತ್ನಿ ಪ್ರತಿಮಾ ಅವರು ದಿಲೀಪ್ ಹೆಗ್ಡೆ ಎಂಬ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಕೊನೆಗೆ ಸ್ವಂತ ಗಂಡನನ್ನೇ ಕೊ ಲೆ ಮಾಡಿ ಜೈಲು ಪಾಲಾದ ವಿಚಾರ ಇದೀಗ ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ.
ಸ್ನೇಹಿತರೆ, ಪತ್ನಿ ಪ್ರತಿಮಾ ಅವರು ತನ್ನ ಪ್ರೀಯತಮನಿಗಾಗಿ ತನ್ನ ಗಂಡನನ್ನೇ ಕೊ ಲೆ ಮಾಡಿರುವ ಸತ್ಯ ಬಿಚ್ಚಿಟ್ಟಿದ್ದು ದೈವದ ಬಳಿ ಆಣೆ ಮಾಡಿಸಿದ ನಂತರ ಎಂಬ ಹೊಸ ವಿಚಾರವನ್ನು ಈಕೆಯ ಸಂಬಂಧಿ ರತ್ನಕರರವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಹೌದು, ಕೊ ಲೆ ಆರೋಪಿ ಪ್ರತಿಮಾ ಅವರು ತನ್ನ ಗಂಡನನ್ನು ತಾನೇ ಕೊ ಲೆ ಮಾಡಿದ್ದು ಎಂದು ತುಳುನಾಡಿನ ದೈವದ ಮುಂದೆ ಹೇಳಿಕೊಂಡಿದ್ದಾರೆ. ತುಳುನಾಡಿನ ದೈವದ ಮುಂದೆ ಸುಳ್ಳು ಹೇಳಿದರೆ ಜೀವನವೇ ಸರ್ವನಾಶ ಎಂಬುವುದು ಈಕೆಗೆ ಸರಿಯಾಗಿ ತಿಳಿದಿತ್ತು. ಹಾಗಾಗಿ ಈಕೆಯ ಸಂಬಂಧಿಕರು ದೈವದ ಮುಂದೆ ಈಕೆಯ ಬಾಯಿ ಬಿಡಿಸಿದ್ದಾರೆ.
ಇನ್ನು ಈಕೆ ತನ್ನ ಗಂಡನನ್ನು ಕೊ ಲೆ ಮಾಡಲು ಕೇರಳದಿಂದ ಮಾಟಮಂತ್ರ ಮಾಡುವವರ ಬಳಿಯಿಂದ ಮಂತ್ರ ಭಸ್ಮ ತಂದು ಗಂಡನಿಗೆ ಹಾಕಿ ಸಾಯಿಸಲು ಪ್ರಯತ್ನಿಸಿದ್ದಾಳೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.