ನಮ್ರತಾ ಬಿಟ್ಟು ನಾನು ಬ.ದುಕಲ್ಲ ಎಂದು ಶಪಥ ಮಾಡಿದ ಸ್ನೇಹಿತ್, ಮುಂದಿನ ವರ್ಷ ಮದುವೆ ಫಿಕ್ಸ್

 | 
ರಾ

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಸ್ನೇಹಿತ್‌ ಕಳೆದ ವಾರ ಮನೆಯಿಂದ ಎಲಿಮಿನೇಟ್‌ ಆದರು. ಬಿಗ್‌ ಬಾಸ್‌ ಮನೆಯಲ್ಲಿ ಸ್ನೇಹಿತ್‌ ಎರಡು ಬಾರಿ ಕ್ಯಾಪ್ಟನ್‌ ಆದರು. ನಮ್ರತಾ ಮತ್ತು ವಿನಯ್‌ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಮೊದ ಮೊದಲು ಮನೆಯವರೆಲ್ಲ ಸ್ನೇಹಿತ್‌ ಬೆಸ್ಟ್‌ ಎನ್ನುತ್ತಿದ್ದರು. ಆದರೆ ದಿನ ಕಳೆದಂತೆ ಈ ಅಭಿಪ್ರಾಯವೇ ಬದಲಾಯಿತು. ಸ್ನೇಹಿತ್‌ ಆಟದ ವರಸೆಯೂ ಬದಲಾಯ್ತು.

 ಎಲ್ಲೋ ಒಂದು ಕಡೆ ಅವರು ಕೇವಲ ಕೆಲ ಜನರಿಗೆ ಮಾತ್ರ ಸೀಮಿತವಾಗಿ ಉಳಿದರು. ಇದೇ ಅವರ ಎಲಿಮಿನೇಷನ್‌ಗೆ ಕಾರಣ ಎಂಬುದು ಬಿಗ್‌ ಬಾಸ್‌ ವೀಕ್ಷಕರ ಅಭಿಪ್ರಾಯವಾಗಿದೆ. ಎಲಿಮಿನೇಷನ್‌ ಆಗಿ ಹೊರಬಂದ ಬಳಿಕ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿರುವ ಸ್ನೇಹಿತ್‌ ಒಂದು ಮುಖ್ಯವಾದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಸಲಿಗೆ ಬಿಗ್‌ ಬಾಸ್‌ ಗೆ ಹೋಗೋಕೆ ಸ್ನೇಹಿತ್‌ ಅವರಿಗೆ ಆಸೆನೇ ಇರಲಿಲ್ಲವಂತೆ. 

ಬಿಗ್‌ ಬಾಸ್‌ ಎಂಟ್ರಿ ಬಗ್ಗೆ ಮಾತನಾಡಿರುವ ಸ್ನೇಹಿತ್‌, ನಾನು ಬಿಗ್‌ ಬಾಸ್‌ ಗೆ ಹೋಗೋದು ನನ್ನ ಚಾಯ್ಸ್‌ ಅಲ್ಲ. ನನಗೆ ಹೋಗೋಕೆ ಆಸೆನೂ ಇರಲಿಲ್ಲ ಎಂದಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಅಮ್ಮನಿಗೆ ಬಿಗ್‌ ಬಾಸ್‌ ಕ್ರೇಜ್‌ ಜಾಸ್ತಿ. ಅವರು ಮೊದಲ ಸೀಸನ್‌ನಿಂದಲೂ ಬಿಗ್‌ ಬಾಸ್‌ ನೋಡಿಕೊಂಡು ಬಂದಿದ್ದಾರೆ. ಅವರಿಗೆ ತನ್ನ ಮಗ ಬಿಗ್‌ ಬಾಸ್‌ಗೆ ಹೋಗಬೇಕು, ಟಿವಿಯಲ್ಲಿ ಬರಬೇಕು ಎಂಬ ಆಸೆಯಿತ್ತು ಎಂದು ಸ್ನೇಹಿತ್‌ ಹೇಳಿದ್ದಾರೆ. 

ಇನ್ನು  ಸ್ನೇಹಿತ್‌ ತಾನು ನಿಜವಾಗಿಯೂ ನಮ್ರತಾಳನ್ನು ಪ್ರೀತಿಸುತ್ತಿರುವುದಾಗಿ ಬಿಗ್ಬಾಸ್  ಮನೆಯಲ್ಲಿ ಹೇಳಿಕೊಂಡಿದ್ದರು ನಮ್ರತಾ ಕಡಾಖಂಡಿತವಾಗಿ ಸ್ನೇಹಿತ್‌ ನ ಪ್ರಪೋಸಲ್‌ ಅನ್ನು ನಿರಾಕರಿಸಿದ್ದಾರು ಆದರೂ ಸಹ ಸ್ನೇಹಿತ್‌ ಮಾತ್ರ ನಮ್ರತಾ ಹಿಂದೆ ಹೋಗೋದನ್ನ ನಿಲ್ಲಿಸಲಿಲ್ಲ.. ಹಿಂದೆ ಹೋಗಿದ್ದರೆ ಪರವಾಗಿಲ್ಲ ಆದರೆ ಸ್ನೇಹಿತ್‌ ನಮ್ರತಾಳ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಇದೀಗ ನಾನು ಮದುವೆ ಆದರೆ ಅವರನ್ನು ಮಾತ್ರ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಂತು ಸತ್ಯ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.