ವಿನಯ್ ಗೆ ಟಕ್ಕರ್ ಕೊಟ್ಟ ಸ್ನೇಹಿತ್ ಗೌಡ, ಬಿಗ್ ಬಾಸ್ ಗೆಲ್ಲೋದು ಇವನೇ ಅಂದ್ರು

 | 
Bd

ಬಿಗ್ ಬಾಸ್​ ಕನ್ನಡದ ಸೀಸನ್​ 10ರ 9ನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ಬಿಗ್ ಮನೆಯೊಳಗಿನ ವಿಶೇಷ ಅನುಭವ ಹಾಗೂ ಹಲವು ತಿಳಿಸಲಾಗದ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ಮಧ್ಯೆ ನಿಮ್ಮ ಪ್ರಕಾರ ಯಾವ ಐದು ಸ್ಪರ್ಧಿಗಳು ಫಿನಾಲೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರು  ವಿನ್ ಆಗುತ್ತಾರೆ ಎಂದು ಕೇಳಿದ್ದಕ್ಕೆ ಎಂಬ ಪ್ರಶ್ನಗೆ ಸ್ನೇಹಿತ್​ ಕೊಟ್ಟ ಉತ್ತರ ಕೇಳಿ ವಿನಯ್ ಶಾಕ್ ಆಗೋದು ಗ್ಯಾರಂಟಿ.

64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಕಾಡ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು. ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು. ನನ್ನ ಇನ್‌ಸ್ಟಿಂಕ್ಟ್‌ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್‌ ಈವತ್ತು ಎಲ್ಲೋ ಹೊಡಿತಿತ್ತು, ಈವತ್ತೇ ನನ್ನ ಲಾಸ್ಟ್‌ ಡೇ ಅಂತ. ಅದೇ ರೀತಿ ಆಯಿತು.

ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಕೆಲವರು ತೊಂದರೆಯನ್ನೂ ಅನುಭವಿಸಿದ್ದಾರೆ. ಆ ನೋವು ನನಗೆ ಕೊನೆಯತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಫ್ರೆಂಡ್ಸ್ ಜತೆ ಹೇಗಿರ್ತೀನೋ ಹಾಗೇ ಇರ್ತಾಯಿದ್ದೆ. ಅವರಿಗೋಸ್ಕರ ಜೀವಕೊಡಲೂ ಸಿದ್ಧವಾಗ್ತಿದ್ದೆ. ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೆ. ತೀರಾ ಗೇಮ್‌ಗೋಸ್ಕರ ರಾಜಿ ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ಅವಾಯ್ಡ್ ಮಾಡ್ತಿದ್ದೆ. ಮನಸ್ಸು ಮಾಡಿದ್ರೆ ಇನ್ನು ಚೆನ್ನಾಗಿ ಅಡಬಹುದಿತ್ತು ನಾನು ಎಂದಿದ್ದಾರೆ.

ಇನ್ನು ನಿಮ್ಮ ಪ್ರಕಾರ ಯಾರು ಫಿನಾಲೆಯ ಟಾಪ್ಟ್​ ಕಂಟೆಸ್ಟೆಂಟ್​ಗಳು ಎಂಬ ಪ್ರಶ್ನೆಗೆ, ಟಾಪ್‌ 5ನಲ್ಲಿ ವರ್ತೂರ್ ಸಂತೋಷ್, ಡ್ರೋಣ್ ಪ್ರತಾಪ್, ವಿನಯ್, ತುಕಾಲಿ ಇರಬಹುದು. ಮತ್ತೊಂದು ಸ್ಥಾನಕ್ಕೆ ಕಾರ್ತಿಕ್-ಸಂಗೀತಾ ಮಧ್ಯದಲ್ಲಿ ಫೈಟ್ ಇರಲಿದೆ. ಯಾರಾದರೂ ಒಬ್ಬರು ಆಗಬಹುದು. ಇಲ್ಲ ಇಬ್ಬರು ಕೂಡ ಇರಬಹುದು. ನನಗೆ ವಿನಯ್ ವಿನ್ ಆಗಬೇಕು ಆದರೆ ಪ್ರತಾಪ್ ವಿನ್ ಆಗುತ್ತಾರೆ ಅನ್ನಿಸುತ್ತದೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.