ತಂದೆ ತಾಯಿಯ ಕೈಕಾಲು ಹಿಡಿದು ತಪ್ಪಾಯ್ತು ಎಂದ ಸ್ನೇಹಿತ್

 | 
Bs

ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 60 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಶೋನಿಂದ 9ನೇ ವಾರ ಸ್ನೇಹಿತ್ ಔಟ್ ಆಗಿದ್ದಾರೆ. ನೀತು ಬಳಿಕ ಸ್ನೇಹಿತ್ ದೊಡ್ಮನೆ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ನೇಹಿತ್ ಆಟ ಮುಗಿದಿದೆ. ಏಕೆಂದರೆ ಈ ವಾರ ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಗೌಡ ಔಟ್ ಆಗಿದ್ದಾರೆ. 

ತಮ್ಮ ಎಡವಟ್ಟುಗಳಿಂದಲೇ ಪ್ರತೀ ವಾರ ಕಿಚ್ಚ ಸುದೀಪ್‌ರಿಂದ ಬುದ್ಧಿವಾದ ಹೇಳಿಸಿಕೊಳ್ಳುತ್ತಿದ್ದರು ಸ್ನೇಹಿತ್. ಆದರೆ ಆ ಚಾಳಿಯನ್ನು ಬಿಟ್ಟಿರಲಿಲ್ಲ. ಅಷ್ಟೇ ಅಲ್ಲದೆ, ದೊಡ್ಮನೆಯಲ್ಲಿ ಸಂಗಬುಲ್ಲ, ಚೇಲ ಎಂದೆಲ್ಲಾ ಕರೆಸಿಕೊಳ್ಳುವಂತೆ ಕಳಪೆ ಆಟ ಪ್ರದರ್ಶಿಸುತ್ತಿದ್ದರು.
ಇನ್ನೊಂದೆಡೆ ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಲಿದ್ದಾರೆ. 

ಬಿಗ್ ​ಬಾಸ್​ ಆರಂಭದಿಂದಲೂ ಸ್ನೇಹಿತ್ ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನ ನೀಡಿರಲಿಲ್ಲ. ಒಮ್ಮೆ ಬಿಗ್ ಬಾಸ್ ಮನೆಯಿಂದ ಅವರನ್ನು ಔಟ್ ಮಾಡಿ ಎಂದು ವೀಕ್ಷಕರು ಹೇಳುತ್ತಿದ್ದರು. ಕಳೆದ ದಿನವಷ್ಟೇ ಸ್ನೇಹಿತ್ ಅವರು ಪಕ್ಷಪಾತವಾಗಿ ಆಡುತ್ತಾರೆ ಎಂದು ಕಿಚ್ಚ ಸುದೀಪ್ ಈ ಕುರಿತು ಕ್ಲಾಸ್ ತೆಗೆದುಕೊಂಡಿದ್ದರು. ಡ್ರೋನ್ ಪ್ರತಾಪ್, ಸಂಗೀತಾ ಕಣ್ಣಿಗೆ ಆದ ಪೆಟ್ಟಿಗೆ ಪರೋಕ್ಷವಾಗಿ ಸ್ನೇಹಿತ್ ಕಾರಣರಾಗಿದ್ದರು.

ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿದ್ರೂ, ಮಾತನಾಡುವ ಗೋಜಿಗೆ ಸ್ನೇಹಿತ್ ಹೋಗಲಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ಹೊರಹಾಕಿದ್ರು. ಈ ಎಲ್ಲಾ ಕಾರಣಗಳಿಂದ ಸ್ನೇಹಿತ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಸ್ನೇಹಿತ್​ ದೊಡ್ಮನೆಯಿಂದ ಹೊರಗೆ ಹೋಗುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಮ್ರತಾ ಜೊತೆ ಕ್ಲೋಸ್ ಆಗಿದ್ದ ಸ್ನೇಹಿತ್ ಬಿಗ್​ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. 

ಈ ವೇಳೆ ನಮ್ರತಾ ಕಣ್ಣೀರು ಹಾಕಿದ್ದಾರೆ. ಸ್ನೇಹಿತ್ ಕೂಡ ನಮ್ರತಾಗೆ ಸಮಾಧಾನ ಹೇಳಿದ್ದಾರೆ. ​ವಿನಯ್​, ಸ್ನೇಹಿತ್, ಮೈಕಲ್​, ನಮ್ರತಾ ಬಿಗ್ ಬಾಸ್​ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ರು. ವಿನಯ್​ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಸ್ನೇಹಿತ್​ ಕಣ್ಣೀರು ಹಾಕಿದ್ರು ಅಷ್ಟೇ ಅಲ್ಲ ಮನೆಯಿಂದ ಆಚೆಗೆ ಬರುತ್ತಿದ್ದಂತೆ ತಂದೆ ತಾಯಿ ಗೆ ತನ್ನಿಂದ ಏನಾದರೂ ನೋವಾದರೆ ಕ್ಷಮಿಸಿ ಎಂದು ಸ್ನೇಹಿತ್ ಕ್ಷಮೆ ಕೇಳಿದ್ದಾರೆ. 

ಅಲ್ಲದೇ ಅಪ್ಪ ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ನಾನು ಬಿಗ್ ಬಾಸ್ ಮನೆಯಲ್ಲಿ ನಾನಾಗಿ ಆಟ ಆಡಿದ್ದೇನೆ ನನಗೆ ತಿಳಿಯದೇ ಏನಾದ್ರೂ ನೋವು ನೀಡಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.