ಮಗ ಸೊಸೆ ಬೇರೆ ನಾವು ಬೇರೆ, ಮೊಟ್ಟಮೊದಲ ಬಾರಿಗೆ ಮೌನ ಮುರಿದ ಯಶ್ ತಾಯಿ
Updated: Jun 3, 2025, 21:39 IST
|

ರಾಕಿಂಗ್ ಸ್ಟಾರ್ ಯಶ್ ಸದ್ಯ ಪ್ಯಾನ್ ವರ್ಲ್ಡ್ ನಟನಾಗಿ ಸದ್ದು ಮಾಡುತ್ತಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಗಾಗಿ ವಿಶ್ವಮಟ್ಟದಲ್ಲಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಈ ಸಿನಿಮಾಗೆ ಯಶ್ ನಟನೆ ಜೊತೆಗೆ, ಸಹ ನಿರ್ಮಾಪಕರೂ ಹೌದು. ಈ ಮಧ್ಯೆ ಯಶ್ ಅವರ ತಾಯಿ ಪುಷ್ಪ ಅವರು ನಿರ್ಮಾಪಕಿಯಾಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದರು.
ಇದೀಗ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಮಧ್ಯೆ ಯಶ್ ತಾಯಿ ಪುಷ್ಪ ಅವರ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ.ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ತಮ್ಮ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಬಗ್ಗೆ ಪುಷ್ಪ ಅವರು ಮಾತನಾಡಿದ್ದರು. ಇದೇ ವೇಳೆ, ಡ್ರೈವರ್ ಮಗ ಯಶ್ ಇವತ್ತಿಗೆ ದೊಡ್ಡ ಸ್ಟಾರ್. ಆದರೆ ನನ್ನ ಸಾಧನೆ ಏನಿದೆ? ಯಶ್ ಭಾರತದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದರೂ, ನಾನು ಯಾವಾಗಲೂ ನನ್ನದೇ ಆದ ವ್ಯಕ್ತಿತ್ವವನ್ನು ಬಯಸುತ್ತೇನೆ, ಅದು ನನ್ನ ಸಾಧನೆ.
ನಾನು ಉದ್ಯಮಕ್ಕೆ ಹಿಂತಿರುಗಿ ನೀಡಲು ಮತ್ತು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ನನ್ನ ಮಗ ಉದ್ಯಮದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದಾನೆ. ಆದರೆ ಸಿನಿಮಾಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡುವುದೇ ನನ್ನ ಉದ್ದೇಶವಾಗಿತ್ತು. ಪ್ರೇಕ್ಷಕರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆಂದು ನೋಡಲು ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.
ಯಶ್ ತಾಯಿ ಪುಷ್ಪ ನನ್ನ ಮಗ ಆಗಾಗ್ಗೆ ನನಗೆ ವಿಶ್ರಾಂತಿ ಪಡೆದು ಕೃಷಿಯನ್ನು ಆನಂದಿಸಲು ಹೇಳುತ್ತಾನೆ. ಆದರೆ ನಾನು ಯಾವಾಗಲೂ ಸಿನಿಮಾಗೆ ಕೊಡುಗೆ ನೀಡಲು ಬಯಸುತ್ತೇನೆ, ವಿಶೇಷವಾಗಿ ಹೊಸಬರಿಗೆ. ಯಶ್ ಇನ್ಮುಂದೆ ಸಣ್ಣ ಚಿತ್ರಗಳನ್ನು ಮಾಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅವರೇ ಬೇರೆ ನಾವೇ ಬೇರೆ ಆದರೆ ನನ್ನ ಉದ್ದೇಶವೇನಾಗಿತ್ತು ಇದು ಕೇವಲ ಆರಂಭ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.
ನಾನು ಡಾ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಪಾರ್ವತಮ್ಮ ಅವರ ಬಗ್ಗೆಯೂ ತುಂಬಾ ಓದಿದ್ದೇನೆ. ಅವರಿಬ್ಬರ ಜರ್ನಿ ನಮ್ಮ ಈ ಹಾದಿಗೆ ಪ್ರೇರಣೆ ಎಂದು ಪುಷ್ಪ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.