ಸೋನ್ ಗೌಡಗೆ ಜೈಲೂಟ ಫಿಕ್ಸ್; ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ

 | 
Ju

ಮಗುವನ್ನು ಅಕ್ರಮವಾಗಿ ಸಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ರಾಣಿ ಸೋನು ಗೌಡಗೆ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ‌ ಕಾಲ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದಿದ್ದರು ಪೊಲೀಸರು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು.

ಕಾನೂನು ಬಾಹಿರವಾಗಿ ಮಗುವನ್ನ ದತ್ತು ತೆಗೆದುಕೊಂಡು ಪೊಲೀಸ್ ವಶದಲ್ಲಿದ್ದ ಸೋನು ಶ್ರೀನಿವಾಸಗೌಡರನ್ನು  ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ನಿನ್ನೆ  ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದ ಸ್ಥಳ ಮಹಜರು ಮಾಡಿದ್ದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರನಡೆದಿದ್ದರು.10 ಲಕ್ಷ ಹಣ ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ.

ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು.ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಬಳಿಕ ಸೋನು ಗೌಡ ಜೊತೆ ಮಾತನಾಡಬೇಕು ಅಂತ ಗ್ರಾಮಸ್ಥರು ಗಲಾಟೆ ಮಾಡಿದರು. ಪೊಲೀಸ್ ಕಾರಿಗೆ ಮುತ್ತಿಗೆ ಹಾಕಿ ಸೋನು ಗೌಡರನ್ನು ನೋಡಲು ನೂಕುನುಗ್ಗಲು ಮಾಡಿದರು. ಗ್ರಾಮಸ್ಥರು ಹಾಗೂ ಬಾಲಕಿ ಸಂಬಂಧಿಕರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಸ್ಥಳ ಮಹಜರು ಮುಗಿಸಿ ವಾಪಸ್ ನಿನ್ನೆ ಬೆಂಗಳೂರಿಗೆ ತೆರಳಿದ್ದರು.

ನಾನು ಅವಳ ಅಮ್ಮನ ಬಳಿ ದತ್ತು ಕೊಡುವಂತೆ ಕೇಳಿದೆ. ಇದನ್ನು ಕೇಳಿ ಅವಳ ತಾಯಿ ರಾಯಚೂರಿಗೆ ಹೊರಟು ಹೋದರು. ಮಗುವಿಗೆ ನಾನಿಲ್ಲದೆ ಜ್ವರ ಬಂದಿತ್ತು. ಫೋನ್ ಮೂಲಕ ಮಗುವಿನೊಂದಿಗೆ ಮಾತನಾಡಿದೆ. ನಂತರ ಅವಳನ್ನು ಕರೆದುಕೊಂಡು ಬಂದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು 3 ತಿಂಗಳು ಬೇಕು. ಅವಳ ಅಪ್ಪ ಅಮ್ಮನಿಗೆ ಒಪ್ಪಿಗೆ ಇದೆ. ನನಗೂ ಒಪ್ಪಿಗೆ ಇದೆ. ಕಾನೂನು ಕ್ರಮ ನಡೆಯುತ್ತಿದೆ’ ಎಂದು ಸೋನು ಹೇಳಿದ್ದರು. ಹಾಗಾಗಿ ಇದೀಗ 14 ದಿನಗಳ ಜೈಲುವಾಸ ಮುಂದುವರೆದಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.