ಮದುವೆಯಾದ ಒಂದೇ ವಾರಕ್ಕೆ ಸೋನಾಕ್ಷಿ ಸಿನ್ಹಾ ಗರ್ಭಿಣಿ; ಗಂಡ ಆ ತಂಕ

 | 
Uu

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಇತ್ತೀಚೆಗಷ್ಟೇ ತಮ್ಮ ಪ್ರೇಮಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಹೊಸತರಲ್ಲೇ ನಟಿ ತಮ್ಮ ಪತಿಯ ಜೊತೆ ಆಸ್ಪತ್ರೆಯೊಂದರ ಹೊರಗೆ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ಆಕೆ ಗರ್ಭಿಣಿಯೇ ಎಂಬ ಸಂಶಯ ನೆಟ್ಟಿಗರಲ್ಲಿ ವ್ಯಕ್ತವಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ನಟಿ ಸೋನಾಕ್ಷಿ ಅವರು ತಮ್ಮ ಪತಿ ಜಹೀರ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊಗಳಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮದುವೆಯಾದ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್ ಅವರು ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಅನೇಕರು ಗಾಸಿಪ್ ಮಾಡಿದ್ದರು. ಹಾಗಾಗಿ ಸೋನಾಕ್ಷಿ ಅವರು ಕೂಡ ಇವರಂತೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ನೆಟ್ಟಿಜನ್ ಮನಸ್ಸಿನಲ್ಲಿ ಮೂಡಿದೆ ಎನ್ನಲಾಗಿದೆ. ಹಾಗಾಗಿ ನೆಟ್ಟಿಜನ್ ಸೋನಾಕ್ಷಿಯವರನ್ನು ಗರ್ಭಿಣಿ ಅವತಾರದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಜೂನ್ 23ರಂದು ವಿವಾಹವಾದರು. ಅವರ ಮದುವೆಯ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅವರ ಜೋಡಿ ನೋಡಿ ಸ್ವರ್ಗದಲ್ಲಿ ಮಾಡಿದ ಪರಿಪೂರ್ಣ ಜೋಡಿ ಎಂದು ಹೊಗಳಿದ್ದಾರೆ. ಇವರಿಬ್ಬರು ಅಂತರ್ಧಮೀಯ ವಿವಾಹವಾಗಿದ್ದರಿಂದ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. 

ಇದಕ್ಕೆ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಕೂಡ ಅಸಮಾಧಾನಗೊಂಡಿದ್ದರು. ಅವರ ಮದುವೆಯಿಂದ ಅವರ ಕುಟುಂಬದವರು ಸಂತೋಷವಾಗಿಲ್ಲ ಎನ್ನಲಾಗಿತ್ತು. ಆದರೆ ಆ ಬಳಿಕ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.